Raichur District Police

Daily News

21af1cedc35f222608b112bfe7b666c3.jpg

02-10-2018 ರಂದು ಬೆಳಗ್ಗೆ 8-00 ಗಂಟೆಗೆ ಫಿರ್ಯಾದಿದಾರರಾದ ಆಂಜನೇಯಲು ಡಿ TSRTC ಚಾಲಕ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 15-09-2018 ರಂದು ರಾತ್ರಿ 9.30 ಗಂಟೆಗೆ ನಮ್ಮ ಇಬ್ಬರ ಬಸ್ ಗಳನ್ನು   ದಿನಂಪ್ರತಿಯಂತೆ ನವೋದಯ ಆಸ್ಪತ್ರೆಯ ಮುಂದಿನ ಶ್ರೀ ರಾಜೇಂದ್ರ ಪಾಟೀಲ್ ಇವರ ಮಾಲೀಕತ್ವದ ಖಾಲಿ ಜಾಗೆಯಲ್ಲಿ ನಿಲ್ಲಿಸಿದ್ದು, ನಾವು ಪಕ್ಕದಲ್ಲಿರುವ ರೂಮಿನಲ್ಲಿ ಮಲಗಿದ್ದು  ದಿನಾಂಕ: 16-09-2018 ರಂದು ಬೆಳಿಗ್ಗೆ 6.00 ಗಂಟೆಗೆ ಬಂದು ನೋಡಲಾಗಿ ನಮ್ಮ  ಏರಡೂ ಬಸ್ ಗಳ ಕೆಳಗಡೆ ಅಳವಡಿಸಿದ ತಲಾ ಎರಡು ಬ್ಯಾಟರಿಗಳನ್ನು  ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಬಾಕ್ಸ ಗೆ ಹಾಕಿದ  ಲಾಕ್ ಮುರಿದು  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಒಂದು ಬ್ಯಾಟರಿಯ ಬೆಲೆ  ಸುಮಾರು 6000/- ರೂ ಗಳಾಗುತ್ತಿದ್ದು ನಾಲ್ಕು ಬ್ಯಾಟರಿಗಳ ಬೆಲೆ ಒಟ್ಟು .ಕಿ. 24000/- ರೂ ಗಳಾಗುತ್ತದೆ. ಕೇಸ್ ಮಾಡಿ ಪತ್ತೆಯಾಗಿರುತ್ತದೆ  
9b23d84520b5d86e3560ed3f428bee69.jpg

ಪ್ರಕರಣದ ಸಾರಾಂಶ:ಇಂದು ದಿನಾಂಕ 28/10/18 ರಂದು ಬೆಳಿಗ್ಗೆ 09.45 ಗಂಟೆಯ ಸುಮಾರಿಗೆ ಪಿ.ಎಸ್ ಐ. ಸಾಹೇಬರಿಗೆ ರಂಗದಾಳ ಹಳ್ಳದಲ್ಲಿಂದ  ಅಕ್ರಮವಾಗಿಕಳ್ಳತನದಿಂದ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಬುದ್ದಿನ್ನಿ ಮುಖಾಂತರ ಮಾನವಿ ಕಡೆಗೆ ತರುತ್ತಾರೆ ಅಂತಾ ‘’ ಬಾತ್ಮಿದಾರರ ಮುಖಾಂತರ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ ಸಾಹೇಬರು ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ರಂಗದಾಳ್ ಕ್ರಾಸಿನಲ್ಲಿ ಹೋಗಿ ಕಾಯುತ್ತಾ ನಿಂತಿರುವಾಗ ರಂಗದಾಳ ಕಡೆಯಿಂದ ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಎರಡು ಟ್ರ್ಯಾಕ್ಟರ/ಟ್ರಾಲಿಗಳು ಬಂದಾಗ ಅವುಗಳನ್ನು ನಿಲ್ಲಿಸುವಂತೆ ಕೈ ಮಾಡಿದಾಗ ಆ ಎರಡು ಟ್ರ್ಯಾಕ್ಟಗಳ ಚಾಲಕರುಗಳು ಟ್ರ್ಯಾಕ್ಟರನ್ನು ಒಂದರ ಹಿಂದೆ ಒಂದರಂತೆ ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಕಾರಣ  ಪಂಚರ  ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರಗಳನ್ನು  ಪರಿಶೀಲಿಸಿದಾಗ ಮರಳು ತುಂಬಿರುವದು ಕಂಡು ಬಂದ ಕಾರಣ  ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂ  KA36/TA 1845  ( CHASSIS NO NDZ15159 B2) / ನಂಬರ್ ಇಲ್ಲದ ಟ್ರಾಲಿ ಮತ್ತು  ಮಹೀಂದ್ರಾ ಕಂಪನಿಯ ನಂಬರ್ ಇಲ್ಲದ ಟ್ರ್ಯಾಕ್ಟರ್ CHASSIS NO  RCKW00237 D8/ ನಂಬರ್ ಇಲ್ಲದ ಟ್ರಾಲಿಗಳನ್ನು ಮತ್ತು ಅದರಲ್ಲಿದ್ದ ತಲಾ ರಂತೆ ಒಟ್ಟು ಘನ ಮೀಟರ್ ಮರಳು ಅಂ.ಕಿ. ರೂ  2800/- ಬೆಲೆ ಬಾಳುವದನ್ನು   ಜಪ್ತು ಮಾಡಿಕೊಂಡಿದ್ದು ಇರುತ್ತದೆ. 
 

ದಿನಾಂಕ-31-10-2018 ರಂದು  ಮದ್ಯಾಹ್ನ 1250 ಗಂಟೆಗೆ ಠಾಣೆಗೆ ಪಿರ್ಯಾದಿದಾರರಾದ ಶ್ರೀ ತಿಮ್ಮಪ್ಪ  ನಾಯಕ  ತಂದೆ ಕಿಷ್ಟಪ್ಪ Lingasaguru Idea sales Executive Manager  ಸಾ:ಕಲಮಂಗಿ  ಹಾ. ಹೊಸಬಸ್ಸ  ನಿಲ್ದಾಣದ  ಹಿಂದುಗಡೆ  ರಹೆಮಾನಿಯ  ಮಜೀದಿ  ಹತ್ತಿರ  ಲಿಂಗಸ್ಗೂರು ಇವರು ಠಾಣೆಗೆ  ಹಾಜರಾಗಿ ಕಂಪ್ಯೂಟರದಲ್ಲಿ  ಬೆಳರಚ್ಚು ಮಾಡಿಸಿಕೊಂಡು ಬಂದ ಪಿರ್ಯಾದಿಯನ್ನು ಹಾಜರುಡಿಸಿದ್ದು ಸದರಿ ಪಿರ್ಯಾದಿಯಲ್ಲಿನ  ಸಾರಾಂಶ ವೇನೆಂದರೆಪಿರ್ಯಾದಿದಾರರು ಲಿಂಗಸ್ಗೂರು ಹೊಸ ಬಸ್ಸ ನಿಲ್ದಾಣದ ಹಿಂದುಗಡೆ ಇರುವ ಇಂದಿರಭಾಯಿ ಇವರ ಮನೆಯ ಮೇಲಿನ ಅಂತಸ್ಥಿನ ಮನೆಯನ್ನು ಬಾಡಿಗೆ ಪಡೆದುಕೊಂಡು ಕಳೆದ 6 ತಿಂಗಳುಗಳಿಂದ ಪಿರ್ಯಾದಿ ಮತ್ತು ಪಿರ್ಯಾದಿದಾರನ ಪತ್ನಿವಾಸವಾಗಿದ್ದು ಪಿರ್ಯಾದಿ ಮತ್ತು ಪಿರ್ಯಾದಿದಾರನಹೆಂಡತಿ ದಿನಾಂಕ-06-10-2018 ರಿಂದ ಕೆಲಸದ ಮೇಲೆ ಹೋಗಿದ್ದು  ದಿನಾಂಕ 08-10-2018 ರಂದು ಬೆಳಿಗ್ಗೆ 0650 ಗಂಟೆ ಸುಮಾರಿಗೆ ಬಾಡಿಗೆ ಮನೆಯ ಮಾಲೀಕರಾದ ದುರಗಪ್ಪ ಇವರು ಪಿರ್ಯಾದಿದಾರರಿಗೆ ಪೂನ:ಮೂಲಕ ಮನೆ ಕಳ್ಳತನವಾಗಿದೆ ಅಂತಾ ತಿಳಿಸಿದ್ದರಿಂದ ಕೂಡಲೇ ಪಿರ್ಯಾದಿದಾರರು ಲಿಂಗಸ್ಗೂರುಗೆ  ಬಂದು ತಾವು ವಾಪಸಾಗಿರುವ ಮನೆಯಲ್ಲಿರುವ  ಮನೆಯಲ್ಲಿರುವ ಭರಣಗಳನ್ನು ಹಾಗೂ ಇತರೆ ಸಾಮಾನುಗಳನ್ನು ನೋಡಲಾಗಿ ಅ.ನಂ-8 ರಲ್ಲಿ ನಮೂದಿಸಿದ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಕಳ್ಳತನವಾಗಿರುವುದು ಕಂಡುಬಂದಿದ್ದು, ನಂತರ ಕುಟುಂಬದವರೊಂದಿಗೆ ಠಾಣೆಗೆ ದೂರುಕೊಡುವ ಬಗ್ಗೆ ಇಲ್ಲಿಯವೆರೆಗೆ ವಿಚಾರಣೆ ಮಾಡಿ ದಿ.31/10/2018 ರಂದು ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ.

 

 
d5b355635f06ac1614c29ff62a5199c8.jpg

ದಿನಾಂಕ:01-11-2018 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಅಲ್ಕೂರು ಗ್ರಾಮದ ಹತ್ತಿರ ತಾಯಪ್ಪ ಈತನ ಬಣವೆ ದೊಡ್ಡಿ ಹತ್ತಿರ ದಾರಿಯಲ್ಲಿ ಮೃತ 06 ವರ್ಷದ ಮಲ್ಲೇಶ ಈತನು ನಿಂತಿದ್ದಾಗ ಆರೋಪಿ ತಾಯಪ್ಪ ತಂದೆ ಮಲ್ಲಯ್ಯ ನಾಯಕ್ ಸಾ:ಅಲ್ಕೂರು ತಾ:ಜಿ: ರಾಯಚೂರು  ತನ್ನ ಎತ್ತಿನ ಬಂಡಿಯನ್ನು ತನ್ನ ಬಣವೆ ದೊಡ್ಡಿ ಕಡೆಯಿಂದ ಊರು ಕಡೆಗೆ ನಿರ್ಲಕ್ಷತನದಿಂದ ಬಂಡಿಯನ್ನು ಹೊಡೆದುಕೊಂಡು ಊರು ಕಡೆಗೆ ತಿರುಗಿಸಿದಾಗ ಎತ್ತಿನ ಬಂಡಿಯ ಹಿಂದಿನ ಆಡಿಗೆ (ಪಲಗಡ) ಮಲ್ಲೇಶನ ತಲೆಗೆ ಮತ್ತು ಹೊಟ್ಟೆಗೆಎದೆಗೆ ಬಡಿದು ಕೆಳಗೆ ಬಿದ್ದಾಗ ಬಾಯಲ್ಲಿ ರಕ್ತ ಬಂದು ಉಪಚಾರ ಕುರಿತು ನವೋದಯ ಆಸ್ಪತ್ರೆಗೆ ತಂದಾಗ ಆವರಣದಲ್ಲಿ ಮಧ್ಯಾಹ್ನ 12-30 ಗಂಟೆಗೆ ಮಲ್ಲೇಶನು ಮೃತಪಟ್ಟಿದ್ದು ಸದರಿ ಘಟನೆಯು ತಾಯಪ್ಪ ಈತನ ನಿರ್ಲಕ್ಷತನದಿಂದ ಜರುಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ:184/2018 ಕಲಂ:304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
c874c6b3c818325ccb978c139c872b17.jpg

ಪ್ರಕರಣದ ಸಾರಾಂಶ: ಪಿರ್ಯಾಧಿ ಶ್ರೀಮತಿ ಸನಾ ಗಂಡ ಖಲೀಲ್  ವಯ:20ವರ್ಷಜಾತಿ:ಮುಸ್ಲಿಂಈಕೆಯು ಆರೋಪಿ ಖಲೀಲ್ ತಂದೆ ಮಹೆಬೂಬುಜಾತಿ:ಮುಸ್ಲಿಂಸಾ:ಕಲ್ಲೂರು ರವರ ಹೆಂಡತಿ ಇರುತ್ತಾಳೆ. ಆರೋಪತನು ಮದುವೆಯಾದ ನಂತರ  ತನ್ನ ಹೆಂಡತಿಯನ್ನು [ಪಿರ್ಯಾದಿದಾರಳನ್ನು] ಸರಿಯಾಗಿ  ನೋಡಿಕೊಳ್ಳದೆ ಕಲ್ಲೂರು ಗ್ರಾಮದ ತನ್ನ ಮನೆಯಲ್ಲಿ ಕೈಗಳಿಂದ ಹೊಡೆಬಡೆ ಮಾಡುತ್ತ ನೀನು ಮನೆಬಿಟ್ಟು ಹೋಗು ನಾನು ಇನ್ನೊಬ್ಬಳನ್ನು ಮದುವೆಯಾಗುತ್ತೇನೆ ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತ ಬಂದಿದ್ದು ಅಲ್ಲದೆ ಆರೋಪಿ ನಂ.ಶ್ರೀಮತಿ ಹಬೀಬಾ ಗಂಡ ಸಲ್ಮಾನ್ ಜಾತಿ:ಮುಸ್ಲಿಂಸಾ:ಕಲ್ಲೂರು ರವರೊಂದಿಗೆ ಕೂಡಿಕೊಂಡು ಮದುವೆಯಾಗಿರುವ ದಾಗಿ ತಿಳಿದು ಬಂದಿರುತ್ತದೆ ಅಲ್ಲದೆ ಪಿರ್ಯಾದಿದಾರಳಿಗೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಮನೆಬಿಟ್ಟು ಹೋಗದಿದ್ದರೆ ಕೊಲೆ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಾರಾಂಶವಿರುತ್ತದೆ ಪಿರ್ಯಾದಿದಾರಳು ದಿವಸ ಠಾಣೆಗೆ ಬಂದು ಲಿಖಿತ ದೂರು ಕೊಟ್ಟಿದ್ದು ಅದರಲ್ಲಿಯ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 226/2018 ಕಲಂ :498(J),494,323,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣದ ದಾಕಲು ಮಾಡಿಕೊಂಡು ತನಿಖೆ ಕೈಗೊಮಡಿರುತ್ತಾರೆ
b2796d70bd53f0031047ee32c001b1da.jpg

ದಿನಾಂಕ.03-11-2018 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆದಿನಾಂಕ.03-11-2018 ರಂದು ಬೆಳಿಗ್ಗೆ 11-30 ಗಂಟೆಗೆ ಜಾಲಹಳ್ಳಿಯ ಬಸವೇಶ್ವರ ವೃತ್ತದ ಹತ್ತಿರ ಬಾಗೂರು ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ Mahendra 415 DI ಕಂಪನಿಯ Engine No-ZJM4YAA8259, Chassis Number-MBNAAAVAHJZM02831 ರ ಟ್ರ್ಯಾಲಿಯಲ್ಲಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನು ಬಾಗೂರು ಕೃಷ್ಣಾ ನದಿಯಿಂದ ಕಳ್ಳತನದಿಂದ ಟ್ರ್ಯಾಕ್ಟರ್ ನಲ್ಲಿ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದನ್ನು ಕಂಡುಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಲಿಂಗಸುಗೂರು ರವರ ಮಾರ್ಗದರ್ಶನದಲ್ಲಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
fde34a3466ad3e672ee04204fa7cb867.jpg

ಪ್ರಕರಣದ ಸಾರಾಂಶ : ಇಂದು ದಿನಾಂಕ 03/11/2018 ರಂದು ಬೆಳಿಗ್ಗೆ 10-15 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳಯ ಫಿರ್ಯಾದಿಯನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಆತನು ಹೇಳಿದ್ದೆನೆಂದರೆ  ದಿನ ಬೆಳಿಗ್ಗೆ 8-30 ಗಂಟೆಗೆ ಹೊಸಸ್ಟಾಂಡನಿಂದ ಬೆಂಗಳೂರು ಬೈಪಾಸ ರಸ್ತೆಯ ಮೇಲೆ ಮನೆಗೆ ನಡೆದುಕೊಂಡುಹೋಗುತ್ತಿದ್ದಾಗಲಿಂಗಸುಗುರಮಸ್ಕಿ ಬೈಪಾಸ ರಸ್ತೆಯ ಬಸವ ಆಸ್ಪತ್ರೆ ಮುಂದೆ ಎದರುಗಡೆಯಿಂದ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಸ್ಟೈಲನಲ್ಲಿ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನಗೆ ಟಕ್ಕರ ಕೊಟ್ಟಿದ್ದರಿಂದ ಆತನು ಕೆಳಗೆ ಬಿದ್ದುಮೂಗಿಗೆಬಾಯಿಗೆ ಭಾರಿ ರಕ್ತಗಾಯವಾಗಿದ್ದುಟಕ್ಕರ ಕೊಟ್ಟ ನಂತರ ಮೋಟಾರ ಸೈಕಲ ಸವಾರನು ಮೋಟಾರ ಸೈಕಲನ್ನು ಬಿಟ್ಟು ಓಡಿ ಹೋಗಿದ್ದುಮೋಟಾರ ಸೈಕಲಗೆ ನಂಬರ ಇರಲಿಲ್ಲಾಇಂಜಿನ್ ನಂಬರ MD02A120Y4HCC28264 ಅಂತಾ ಇದ್ದುಕೂಡಲೇ ನಿಂಗಪ್ಪನು ಚಿಕಿತ್ಸೆ ಕುರಿತು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇದೆ ಅಂತಾ  ಕೊಟ್ಟ  ಹೇಳಿಕೆ ಫಿರ್ಯಾದಿ ಸಾರಾಂಸದ ಮೇಲಿಂದ  ಮೇಲಿನಂತೆ  ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಯಿತು
1cea8eaad3725c916a7d3f041690de9e.jpg

ಪ್ರಕರಣದ ಸಾರಾಂಶ : ದಿನಾಂಕ 30-10-2018 ರಂದು 1300 ಗಂಟೆ ಸುಮಾರಿಗೆ ಆರೋಪಿತರಿಬ್ಬರು ತಮ್ಮ ಮೋಟಾರ ಸೈಕಲ್ ನಂ. ಅನುಕ್ರಮವಾಗಿ ಕೆಎ-36 ಇಹೆಚ್-9061 ಮತ್ತು  ಕೆಎ-36 ಇಹೆಚ್-7474 ಗಳನ್ನು ಚಂದ್ರಬಂಡ-ಯಾಪಲದಿನ್ನಿ ರಸ್ತೆಯ ಮುದ್ದಪ್ಪ ಪಿಡಿಓ ಇವರ ಹೊಲದ ಹತ್ತಿರ ತಿರುವಿನಲ್ಲಿ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಬ್ಬರಿಗೋಬ್ಬರು ಮುಖಾಮುಖಿ ಠಕ್ಕರ್ ಮಾಡಿದ್ದರಿಂದ ಆರೋಪಿ ನಂ.2 ಈತನ ಹಿಂದೆ ಕುಳಿತ ವೀರೇಶ ಇವರಿಗೆ ಹಾಗೂ ಆರೋಪಿ ನಂ.1  ಈತನಿಗೂ ಸಾಧಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. 
d476cf78188ddcc345e2bba320a48ce0.jpg

ಪ್ರಕರಣ ಸಾರಾಂಶ :  ದಿನಾಂಕ:- 03-11-2018 ರಂದು ರಾಯಚೂರು ರೀಮ್ಸ ಭೋದಕ ಆಸ್ಪತ್ರೆಯಿಂದ ಎಸ್.ಹೆಚ್.ಒ ರವರು ಪೋನ್ ಮಾಡಿ ತಿಳಿಸಿದ್ದೆನೆಂದರೆ ದಿನಾಂಕ 01-11-2018 ರಂದು ರಸ್ತೆ ಅಪಘಾತದಲ್ಲಿ ಮುದುಕಪ್ಪ ತಂದೆ ಹನುಮಂತ ಸಾಃ ರಬ್ಬಣ್ ಕಲ್ ಈತನು ಗಾಯಗೊಂಡು ಇಲಾಜು ಕುರಿತು ಸೇರಿಕೆಯಾಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಕೂಡಲೇ ಇಂದು ದಿನಾಂಕ 03-11-2018 ರಂದು ಬೆಳಿಗ್ಗೆ 6-00 ಗಂಟೆಗೆ ಠಾಣೆಯಿಂದ ಹೊರಟು ರಾಯಚೂರು ರೀಮ್ಸ ಬೋದಕ ಆಸ್ಪತ್ರೆಗೆ ಭೇಟಿ ನೀಡಿ ಐ.ಸಿ.ಯು ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಮುದುಕಪ್ಪ ಈತನನ್ನು ನೋಡಿ ವಿಚಾರಿಸಿ ಆತನ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ದಿನಾಂಕ 01-11-2018 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ರಬ್ಬಣ್ ಕಲ್ ಕ್ರಾಸಿನಲ್ಲಿ ನಿಂತುಕೊಂಡಾಗ ಆರೋಪಿ ಶಿವರಾಜ ಈತನು ಶಾಹೀದ್ ಸಾಃ ಮಾನವಿ ಈತನ ಮಹೇಂದ್ರ ಟ್ರ್ಯಾಕ್ಟರ್ ನಂ ಕೆ.36 ಟಿಸಿ-2341 ನೇದ್ದನ್ನು ರಬ್ಬಣ್ ಕಲ್ ಕಡೆಯಿಂದ ಮಾನವಿ ಕಡೆಗೆ ಹೊರಟಿದ್ದು ಫಿರ್ಯಾದಿದಾರನು ಶಿವರಾಜ ಈತನ ಟ್ರ್ಯಾಕ್ಟರನ್ನು ನಿಲುಗಡೆ ಮಾಡಿ ಮಾನವಿಗೆ ಬರುತ್ತೇನೆ ಅಂತಾ ಹೇಳಿ ಟ್ರ್ಯಾಕ್ಟರ್ ಇಂಜಿನ್ ಹಿಂದೆ ನಿಂತುಕೊಂಡಾಗ ಆರೋಪಿತನು ತನ್ನ ಟ್ರ್ಯಾಕ್ಟರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಾಗ ರೇವಣ್ಣ ಹೆಳವರ್ ಇವರ ಹೊಲದ ಹತ್ತಿರ ಫಿರ್ಯಾದಿದಾರು ಟ್ರ್ಯಾಕ್ಟರನಿಂದ ರಸ್ತೆಯ ಮೇಲೆ ಬಿದ್ದು ಆತನ ಎಡ ಎದೆಗೆ ಭಾರಿ ಒಳಪೆಟ್ಟಾಗಿ ಎಡಗಾಲ ಮೊಣಕಾಲ ಮೇಲೆ ತರಚಿದ ಗಾಯವಾಗಿದ್ದು ಇರುತ್ತದೆ ಈ ಅಪಘಾತವು ಶಿವರಾಜ ಸಾಃ ರಬ್ಬಣ್ ಈತನ ನಿರ್ಲಕ್ಷತನದಿಂದ ಜರುಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯನ್ನು ಪಡೆದುಕೊಂಡು ಸಂಜೆ 6-00 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 328/2018 ಕಲಂ 279. 338 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
7c39a4de1e392db7b7b43aea2dbfdca2.jpg

ಪ್ರಕರಣ ಸಾರಾಂಶ : ದಿನಾಂಕ-03/11/2018 ರಂದು ಮದ್ಯಾಹ್ನ  13-00 ಗಂಟೆಗೆ ಪಿ ಎಸ್ ಐರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ 3 ಜನ  ಆರೋಪಿತನನ್ನು ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ.ದಿನಾಂಕ-03/11/2018 ರಂದು ಬಳಗಾನೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ಮಹಾದೇವಯ್ಯ ಎ ಎಸ್ ಐ  ಪಿ.ಸಿ.550,697 ರವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ ಕೆ.-36 ಜಿ-211 ನೇದ್ದರಲ್ಲಿ  ಠಾಣೆಯಿಂದ ಹೊರಟು ಬಳಗಾನೂರು  ಗ್ರಾಮದ ಪುಟ್ಟಿ ಖಾನಾವಳಿ  ಹತ್ತಿರ ಜೀಪನ್ನು  ಮರೆಯಾಗಿ ನಿಲ್ಲಿಸಿ ಇಳಿದು ನೋಡಲಾಗಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕೆ ಸ್ಥಳದಲ್ಲಿ  ಈ ಪ್ರಕರಣದಲ್ಲಿಯ ಆರೋಪಿತರು  ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಲಾಗಿ 3 ಜನ ಸಿಕ್ಕಿಬಿದ್ದಿದ್ದು ಸದರಿಯವರನ್ನು ತಾಭಕ್ಕೆ ತೆಗೆದುಕೊಂಡು ಸದರಿಯವರಿಂದ 1).ಮಟಕಾ ಜೂಜಾಟದ ನಗದು ಹಣ 2545/- 2).2-ಬಾಲ್ ಪೆನ್ನು  3). 3 ಮಟಕಾ ನಂಬರ್ ಬರೆದ ಚೀಟಿ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತರೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಮತ್ತು ಎ ರವರು  ಮಟಕಾ ನಂಬರ ಪಟ್ಟಿಯನ್ನು    ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ.
689f3dbb3366bba9dee5bcdcfa42b6cf.jpg

ಪ್ರಕರಣ ಸಾರಾಂಶÀ :  ಇಂದು ದಿನಾಂಕ- 03/11/2018 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಮಾನ್ಯ ಪಿ.ಎಸ್. ಲಿಂಗಸುಗೂರ ರವರು ಮರಳು ತುಂಬಿ ಟಿಪ್ಪರನೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಪಂಚನಾಮೆ & ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಸವೆನೆಂದರೆ ದಿನಾಂಕ 03/11/2018 ರಂದು ರಾತ್ರಿ 7-30 ಗಂಟೆ ಸುಮಾರು ಕಲಬುರಗಿ-ಲಿಂಗಸುಗೂರ ಮುಖ್ಯ ರಸ್ತೆಯ ಎಮ್ ಎಲ್ ರವರ ವಾಹನ ನಿಲುಗಡೆ ಹತ್ತಿರ ಗುರುಗುಂಟಾ ಕಡೆಯಿಂದ ಒಂದು ಟಿಪ್ಪರ ಬಂದಿದ್ದು, ಫಿರ್ಯಾದಿದಾರರು ತಮ್ಮ ಪೊಲೀಸ ಸಿಬ್ಬಂದಿಯೊಂದಿಗೆ ವಾಹನವನ್ನು ತಪಾಸಣೆ ಮಾಡುತ್ತಿದ್ದಾಗ ಕಲಬುರಗಿ ಕಡೆಯಿಂದ ಒಂದು ಟಿಪ್ಪರ ವಾಹನವನ್ನು ಲಿಂಗಸುಗೂರ ಕಡೆಗೆ ಬರುತ್ತಿರುವುದನ್ನು ಗಮನಿಸಿದ ಪಿಎಸ್ಐ ರವರು ಅದನ್ನು ತಡೆದು ನಿಲ್ಲಿಸಿ,ಚಾಲಕನನ್ನು ವಿಚಾರಿಸಲಾಗಿ ಆತನು ತನ್ನ ಹೆಸರನ್ನು ಮೇಲಿನಂತೆ ಹೇಳಿದ್ದು, ಟಿಪ್ಪರ ಪರಿಶೀಲಿಸಿದಾಗ ಅದರಲ್ಲಿ   ಮರಳು ತುಂಬಿದ್ದು  ಚಾಲಕನಿಗೆ ಮರಳು ತಂದೆ ಬಗ್ಗೆ ರಾಜಧನ ಇದೆಯೇನು ಅಂತಾ ಕೇಳಿದಾಗ ಇರುವುದಿಲ್ಲಾ ಅಂತಾ ತಿಳಿಸಿ, ಸದರಿ ಮರಳನ್ನು ಟಿಪ್ಪರ ಮಾಲೀಕನಾದ ಆರೋಪಿ ನಂ 2 ನೇದ್ದವನ ತಿಳಿಸಿದ ಮೇರೆಗೆ  ಮರಳು ತುಂಬಿಕೊಂಡು ಬಂದಿದ್ದು ಅಂತಾ  ಹೇಳಿದ್ದು,ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಆರೋಪಿ ಮಂಜುನಾಥನು ವಾಹನ ಬಿಟ್ಟು ಓಡಿ ಹೋಗಿದ್ದು ಸುಮಾರು 15,000/- ರೂ ಬೆಲೆಭಾಳುವ ಮರಳನ್ನು ಯಾವುದೊ ನದಿಯಿಂದ ಆರೋಪಿ ನಂ 2 ನೇದ್ದವನ ತಿಳಿಸಿದ ಮೇರೆಗೆ  ಆರೋಪಿ ನಂ 1 ನೇದ್ದವನು ಕಳ್ಳತನ ಮಾಡಿಕೊಂಡು ಬಂದಿದ್ದು ಇರುತ್ತದೆ. ಟಿಪ್ಪರ ಚಾಲಕ ಮಂಜುನಾಥನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವ ಕುರಿತು ತಮ್ಮ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮೇಲಿನಂತೆ ಕ್ರಮ ಜರುಗಿಸಿದ್ದು ಇರುತ್ತದೆ     
3ce3de0230d7224ffd0aefb91be1c568.jpg

ಇಂದು ದಿನಾಂಕ:03.11.2018 ರಂದು ರಾತ್ರಿ 10.30 ಗಂಟೆಗೆ ಪಿರ್ಯಾದಿದಾರಳು ಠಾಣೆಗೆಹಾಜರಾಗಿ ಕಂಪ್ಯೂಟರ ಟೈಪ ಮಾಡಿಸಿದ ದೂರು ನೀಡಿದ್ದು ದೂರು ನೀಡಿದ್ದುಅದರ ಸಾರಾಂಶವೇನೆಂದರೆಪಿರ್ಯಾದಿ ಮತ್ತು ಆಕಯ ಗಂಡ ಲಾಲಪ್ಪ ಕೂಡಿಕೊಂಡು ದಿನಾಂಕ;31.10.2018 ರಂದು ಬೆಳಿಗ್ಗೆ 08.00 ಗಂಟೆಗೆ ತನ್ನ ಹಳೆ ಮನೆಯನ್ನು ಕಿತ್ತಿ ಹೊಸ ಮನೆ ಕಟ್ಟಲು ಬುನಾದಿ ತಗೆಯುತ್ತಿದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ಪಿರ್ಯದಿ & ಆಕೆಯ ಗಂಡನೊಂದಿಗೆ ಜಗಳ ತಗೆದು ಲೇ ಸೂಳೆ ಮಕ್ಕಳೆ ಇಲ್ಲಿ ಯಾಕೆ ಬುನಾದಿ ತಗೆಯುತ್ತೀರಿ ಇದು ಜಾಗ ನಮ್ದು ಇರುತ್ತದೆಅಂತಾ ಅಂದು ಜಗಳ ತಗೆದಾಗ ಪಿರ್ಯಾದಿ & ಆಕೆಯ ಗಂಡ ಕೂಡಿ  ಜಾಗ ನಮ್ಮದು ಇಲ್ಲಿ ಬುನಾದಿ ತಗೆಯುತ್ತೇವೆ ಅಂತಾ ಅಂದಾಗ ಆರೋಪಿನಂ.01 ನೇದ್ದವನು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲು ತಗೆದುಕೊಂಡು ಲಾಪ್ಪನ ಬಲಗಡೆಕಣ್ಣಿನ ಕೆಳಗಡೆ ಹೊಡೆದಿದ್ದರಿಂದ ರಕ್ತ ಮಜ್ಜುಗಟ್ಟಿದ್ದು ಎದೆಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ ಜಗಳ ಬಿಡಿಸಲು ಹೋದ ಪಿರ್ಯಾದಿದಾರಳಿಗೆ  ಸೂಳೆದು ಏನು ಕೇಳುತ್ತಿರಲೇ ಅಂತಾ ಅಂದು  ಆರೋಪಿ ನಂ.01,04&05 ನೇದ್ದವರು ಕೂಡಿಕೊಂಡು ಪಿರ್ಯಾದಿದಾರಳ ಸೀರೆಯನ್ನು ಹಿಡಿದು ಏಳದಾಡಿ  ಜಂಪರ ಹರಿದು ಮಾನಭಂಗ ಮಾಡಲು

ಪ್ರಯತ್ನಿಸಿದ್ದು ಇರುತ್ತದೆಆಗ ಪಿರ್ಯಾದಿದಾರಳು ಚೀರಾಡುತ್ತಿದ್ದಾಗ ಆರೋಪಿ ನಂ.07&08 ನೇದ್ದವರು ಬಂದು ಅವಾಚ್ಯವಾಗಿ ಸೂಳೆ ಬೋಸುಡಿ ಅಂತಾ ಬೈದು ಇವಳನ್ನು ಹೇಗಾದರೂ ಮಾಡಿ ಮಾನಭಂಗ ಮಾಡಿ ನಾವು ನೋಡಿಕೊಳ್ಳುತ್ತೇವೆ ಅಂತಾ ಅಂದು ನಂತರ ಎಲ್ಲರೂ ಸೇರಿಕೊಂಡು ಪಿರ್ಯಾದಿದಾರಳಿಗೆ ಇಲ್ಲಿಇನ್ನೊಮ್ಮೆ ಬುನಾದಿ ತಗಯಲು ಬಂದರೆ ನಿಮಗೆ ಜೀವ ಸಹೀತ ಬೀಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದರುನಂತರ ಪಿರ್ಯಾದಿದಾರಳು ತನ್ನಗಂಡನಿಗೆ ಮುದಗಲ್  ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿ ಅಲ್ಲಿಂದ ಲಿಂಗಸಗೂರು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ರೀಮ್ಸ ಆಸ್ಪತ್ರೆ ರಾಯಚೂರಿಗೆ ಸೇರಿಕೆ ಮಾಡಿ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿಡುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ 
ಕೈಕೊಂಡಿದ್ದು ಇರುತ್ತದೆ.     
c9850cf0f7b4be00b4e21b785c0d8db1.jpg

ಇಂದು ದಿ.03.11.2018 ರಂದು ಸಾಯಂಕಾಲ 5-20 ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ಇಂದು ದಿ.03.11.2018 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೃತ ತನ್ನ ತಮ್ಮ ಗೋವಿಂದಪ್ಪನು ಹಟ್ಟಿ ಸೀಮಾಂತರದ ತಮ್ಮ ಜಮೀನು ಸರ್ವೆ ನಂ.85 ಕ್ಷೇತ್ರ 2-ಎಕರೆ 21 ಗುಂಟೆ ಜಮೀನಿನಲ್ಲಿ ಬೆಳೆದ ಭತ್ತದ ಗದ್ದೆಗೆ ನೀರು ಕಟ್ಟಲು ಹೋಗಿರುವಾಗ ಮದ್ಯಾಹ್ನ 2 ಗಂಟೆ ಸುಮಾರಿಗೆ ಹೊಲದಲ್ಲಿ ಎಡಕಾಲು ಮುಂಗಾಲು ಹತ್ತಿರ ಹಾವು ಕಚ್ಚಿದ್ದು. ಹಾವಿನ ವಿಷವೆಲ್ಲಾ ಮೈಯಲ್ಲಾ ಆವರಿಸಿಕೊಂಡು ಚೇತರಿಸಿಕೊಳ್ಳದೆ ಮದ್ಯಾಹ್ನ 3 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಮೃತ ದೇಹವನ್ನು ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಿಂಧನೂರಿಗೆ ತೆಗೆದುಕೊಂಡು ಬಂದಿರುತ್ತೇವೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡಿದೆ.
7753b3b963c0b62871452921cba494e0.jpg

ಪ್ರಕರಣ ಸಾರಾಂಶ  ಫಿರ್ಯಾದಿದಾರನ ಅಣ್ಣನ ಮಗಳಾದ ಕುಮಾರಿ ಹುಲಿಗಮ್ಮ ಈಕೆಯು ದಿನಾಂಕ:03-11-2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಅಲಬನೂರು ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಮಲಗಿಕೊಂಡಾಗ ಆಕೆಯ ಬಲಕಿವಿಗೆ ಹಾವು ಕಚ್ಚಿದ್ದು, ಸದರಿಯವಳನ್ನು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಚಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿ ಇಲಾಜು ಕಾಲಕ್ಕೆ ಚೇತರಿಸಿಕೊಳ್ಳದೇ ದಿನಾಂಕ:     04-11-2018 ರಂದು ಬೆಳಿಗ್ಗೆ 05-30 ಗಂಟೆಗೆ ಮೃತಪಟ್ಟಿರುತ್ತಾಳೆ . ಮೃತಳ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲವೆಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಯುಡಿಆರ  ನಂ.31/2018, ಕಲಂ.174 ಸಿ.ಆರ್.ಪಿ.ಸಿ ರೀತ್ಯ ದಾಖಲಿಸಿರುತ್ತೇನೆ.
a5428f426a74ba7b80080cbdbfa8969b.jpg

ಪ್ರಕರಣ ಸಾರಾಂಶ ಈ ದಿನ ದಿನಾಂಕ 04/11/2018 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿಯು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಸಾರಾಂಸವೆನೆಂದರೆ ತನ್ನ ಚಿಕ್ಕಪ್ಪನ ಮಗನಾದ ಮಲ್ಲಯ್ಯ ತಂದೆ ಬೀರಪ್ಪ ವಯಾ: 30ವರ್ಷ ಈತನು ಲಿಂಗಸುಗೂರ ಪುರಸಭೆಯ ಚರಂಡಿ ಗುತ್ತೆದಾರ ಆರೋಪಿ ನಂ 1 ನೇದ್ದವನ ಹತ್ತಿರ ಮಶೀನ ಕೆಲಸ ಮಾಡುತ್ತಿದ್ದು ಈ ದಿನ ಬೆಳಿಗ್ಗೆ 8-00 ಗಂಟೆಗೆ ತನ್ನ ಗೆಳೆಯರೊಂದಿಗೆ  ಡ್ರೈನಜ ಕೆಲಸಕ್ಕೆ ಮಾಜಿ ಎಂ.ಎಲ್.ಎ ರವರ ಮನೆ ಕಡೆ ಕೆಲಸಕ್ಕೆ ಹೋಗಿದ್ದು, ಅಲ್ಲಿ ಕೆಲಸ ಮಾಡುವಾಗ ರಾಡುಗಳನ್ನು ಬೆಂಡು ಮಾಡಿದರೆ ಮೇಲೆ ಕರೆಂಟಿಗೆ ಟಚ್ ಆಗುತ್ತದೆ ಅಂತಾ ಆರೋಪಿ ನಂ 1,2 ನೇದ್ದವರಿಗೆ ತಿಳಿಸಿದಾಗ್ಯೂ ಸದರಿಯವರು ಎಲ್ಲಾವನ್ನು ತಾವು ನೋಡಿಕೊಳ್ಳುತ್ತೇವೆ ಲೈನು ಬಂದ್ ಮಾಡಿಸುತ್ತೇವೆ ನೀನು ಕೆಲಸ ಮಾಡು ಅಂತಾಹೇಳಿ ಲೈನ ಬಂದ್ ಮಾಡಿಸಿದೆ ಆತನಿಗೆ ಕೆಲಸಕ್ಕೆ ಹಚ್ಚಿದ್ದರಿಂದ ರಾಡ ಬೆಂಡ ಮಾಡುವಾಗ ವಿದ್ಯುತ್ ತಂತಿಗೆ ತಗುಲಿ ಶಾಕ ಹೊಡೆದು ಮದ್ಯಾಹ್ನ 12-00 ಗಂಟೆಗೆ ಮೃತಪಟ್ಟಿದ್ದು ಆರೋಪಿತರು ತಮ್ಮ ಕೆಲಸದಲ್ಲಿ ನಿರ್ಲಕ್ಷತನ ತೋರಿ ತರಾತುರಿಯಲ್ಲಿ ತನ್ನ ತಮ್ಮನಿಂದ ಕೆಲಸ ಮಾಡಿದ್ದರಿಂದ ಆತನಿಗೆ ವಿದ್ಯುತ ತಗಲು ಮೃತಪಟ್ಟಿದ್ದು ಇದೆ ಅಂತಾ ವೈಗೈರೆ ಇದ್ದುದ್ದರ ಸಾರಾಂಶದ ಮೇಲಿಂದ  ಮೇಲಿನಂತೆ  ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಯಿತು