Raichur District Police

Daily News

73ba6d403e2894d14ef13dd503977d27.jpg

ಇಂದು ದಿನಾಂಕ:04-11-2018 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರಾದ ನಾಗೇಂದ್ರಪ್ಪ ಹೆಚ್.ಸಿ 236 ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿತನನ್ನು ಹಾಜರುಪಡಿಸಿ, ಸದರಿಯವನ ವಿರುದ್ಧ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದು, ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ:04-11-2018 ರಂದು ಬೆಳಿಗ್ಗೆ 9.00 ಗಂಟೆಯಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಕರ್ತವ್ಯಕ್ಕೆ ಹೋಗಿ, ಬಸ್ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ತಿರುಗಾಡುತ್ತಾ ಆಂಧ್ರ ಬಸ್ ನಿಲುಗಡೆಯ ಪ್ಲಾಟ್ ಫಾರಂ ರಲ್ಲಿ ಹೋದಾಗ ಒಬ್ಬನು ಬಸ್ ಗಳನ್ನು ಏರುವ ಮತ್ತು ಇಳಿಯುವ ಪ್ರಯಾಣಿಕರ ಮಧ್ಯೆ ನುಸುಳಿಕೊಂಡು ಬಸ್ ಗಳಲ್ಲಿ ಹತ್ತುವುದು ಮತ್ತು ಇಳಿಯುವುದ ಮಾಡುತ್ತಿದ್ದನು. ಅವನ ಮೇಲೆ ತಮಗೆ ಸಂಶಯ ಬಂದ ಕಾರಣ ತಾವು ಅವನ ಹತ್ತಿರ ಹೋಗಲು ಅವನು ತಮ್ಮನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದ್ದು, ಸದರಿಯವನನ್ನು ಹಿಡಿದು ವಿಚಾರಿಸಿದಾಗ ಅವನು ತನ್ನ ಹೆಸರು ವಿಳಾಸವನ್ನು ತಪ್ಪು ತಪ್ಪಾಗಿ ಹೇಳಿ, ನಂತರ ಮೇಲಿನಂತೆ ಹೇಳಿದ್ದು, ಸದರಿಯವನು ಸ್ಥಳದಲ್ಲಿದ್ದ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು, ಇವನನ್ನು ಹೀಗೆ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಕಳುವಿನ ಅಪರಾಧ ಮಾಡುವ ಬಲವಾದ ಸಂಭವಗಳು ಕಂಡುಬಂದಿದ್ದರಿಂದ ಸದರಿಯವನನ್ನು ಬೆಳಿಗ್ಗೆ 10.00 ಗಂಟೆಗೆ ವಶಕ್ಕೆ ತೆಗೆದುಕೊಂಡು, ಈತನ ವಿರುದ್ಧ ಮುಂದಿನ ಕ್ರಮ ಜರುಗಿಸಬೇಕೆಂದು ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಸದರಿಯವನ ವಿರುದ್ಧ ಮುಂಜಾಗೃತಾ ಕ್ರಮವಾಗಿ ಠಾಣಾ ಪಿ..ಆರ್ ನಂಬರ್ 16/2018 ಕಲಂ:109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮಾನ್ಯ ತಹಸೀಲ್ದಾರರು ಹಾಗೂ ತಾಲ್ಲೂಕ ದಂಡಾಧಿಕಾರಿಗಳು ರಾಯಚೂರು ರವರಲ್ಲಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದು ಇರುತ್ತದೆ
b2129ff4878367a9d330fd068c33d969.jpg

ಇಂದು ದಿನಾಂಕ 04.11.2018 ರಂದು 1845 ಗಂಟೆಗೆ ಫಿರ್ಯಾದಿದಾರರು  ಠಾಣೆಗೆ ಹಾಜರಾಗಿ ನೀಡಿದ ದೂರಿನಸಾರಾಂಶವೆನೆಂದರೆ ದಿನಾಂಕ04-11-2018, 1700 ಗಂಟೆ ಸುಮಾರಿಗೆ  ರಾಯಚೂರು ನಗರದ ಕಾಟಿ ದಾರವಾಜ ಹತ್ತಿರ ಅಪರಿಚಿತ ಬಿಳಿ ಕಾರ್ ಚಾಲಕನು ತನ್ನ ಕಾರನ್ನು ಸೂಪರ್ ಮಾರ್ಕೇಟ್ ಕಡೆಯಿಂದ ತೀನ್ ಖಂದಿಲ್ ಕಡೆಗೆ  ಹೋಗುವಾಗ ಕಾರನ್ನು  ಅತೀವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರವಾದ ರೀತಿಯಲ್ಲಿ  ಚಲಾಯಿಸಿ ನಡೆದುಕೊಂಡು ಹೊರಟಿದ ನರಸಿಂಹಲು ಈತನಿಗೆ ಟಕ್ಕರ್ ಕೊಟ್ಟಿದ್ದರಿಂದ ಆತನಿಗೆ  ತಲೆಯ ಮೇಲೆ ಭಾರೀ ರಕ್ತಗಾಯವಾಗಿ ರಕ್ತ ಸೋರಿಎಡಗಣ್ಣಿ ಹುಬ್ಬಿನ ಹತ್ತಿರ ರಕ್ತಗಾಯಬಲ ಹೊಕ್ಕಳದ ಹತ್ತಿರ ತರಚಿದ ಗಾಯಎದೆಗೆ ತರಚಿದ ಗಾಯವಾಗಿದ್ದು ಆರೋಪಿತನು ತನ್ನ ಕಾರನು ನಿಲ್ಲಿಸದೆ ಹಾಗೇಯೇ ಕಾರ್ ಸಮೇತ ಹೋಗಿದ್ದು ಇರುತ್ತದೆನಂತರ ಗಾಯಾಳುವನ್ನು 108 ವಾಹನಕ್ಕೆ ಕರೆಮಾಡಿ ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದುಇರುತ್ತದೆಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದಠಾಣಾ ಗುನ್ನೆ ನಂ.85/2018 ಕಲಂ 279,338IPC&187IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
16ed03d514f329d50d87e8ac945dac19.jpg

ಪ್ರಕರಣದಸಾರಾಂಶ: ಇಂದು ದಿನಾಂಕ 04-11-2018 ರಂದು  ಸಾಯಾಂಕಾಲ 0530 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಮೃತನು  ಫೀರ್ಯಾದಿ ಮಗನಿದ್ದು ಮೃತನಾದ ರಂಗನಾಥ ಈತನಿಗೆ ಕುಡಿಯುವ ಚಟವಿದ್ದು ಇಂದು ದಿನಾಂಕ 04-11-2018 ರಂದು ಮಧ್ಯಾಹ್ನ 0200 ಗಂಟೆಯ ಸುಮಾರಿಗೆ ತನ್ನ  ಗೆಳಯರಾದ 1] ಪ್ರಕಾಶದ ನಾಯಕ 2] ಮಾರೇಪ್ಪ ನಾಯಕ ಎಲ್ಲರೂ ಸೇರಿ ಮೋಟರ್ ಸೈಕಲ್ ಮೇಲೆ   ಚೀಕಲ ಪರ್ವಿ ಗ್ರಾಮದ ಹೊಳೆ ಹತ್ತಿರ ಹೋಗಿ ಆಂದ್ರಲ್ಲಿಂದ ಹೆಂಡವನ್ನು(ಸೆಂದಿತೆಗೆದುಕೊಂಡು ಬಂದು ಕುಡಿದಿದ್ದು ಆದರೆ ಮೃತನು ಹೆಚ್ಚಿನ ಪ್ರಮಾಣದಲ್ಲಿ ಹೆಂಡವನ್ನು ಕುಡಿದಿದ್ದು  ವಾಪಸ್ ಮಾನವಿಗೆ ಚೀಕಲಪರ್ವಿ ಹೊಳೆಯಿಂದ ಬರುತ್ತಿರುವಾಗ ಇಂದು ಮಧ್ಯಾಹ್ನ 0300 ಗಂಟೆಯ ಸುಮಾರಿಗೆ ರಂಗನಾಥ ಈತನು  ಹೊಳೆಯ  ದಂಡೆಯ  ಹತ್ತಿರ ಜೋಲಿ ಹೋಗಿ  ಬಿದ್ದಿದ್ದು ಕೂಡಲೇ ಆತನನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಆಸ್ಪತ್ರೆಯ ಸಮೀಪ ರಂಗನಾಥ ಈತನು ಮಧ್ಯಾಹ್ನ 034ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ  ಬಗ್ಗೆ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲ ದೂರು ವೈಗೆರೆ ಇರುವುದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ  ಯು.ಡಿ.ಆರ್ ನಂ 32/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4ce5e8d7aa33ea075ab43ecf96fa5be7.jpg

ಪ್ರಕರಣ ಸಾರಾಂಶ : ದಿನಾಂಕ 03-11-2018 ರಂದು ರಾತ್ರಿ 1100 ಪಿ.ಎಂಕ್ಕೆ  ಬೋಗಾಪೂರ ಗ್ರಾಮದ ಬಸ್ ನಿಲ್ದಾಣ  ಮುಂದಿನ  ಸಾರ್ವಜನಿಕ ರಸ್ತೆಯಲ್ಲಿ  ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಗೋಪಾಲ ಪಿ ಸಿ 679 ರವರ  ಮಾಹಿತಿ ಮೇರೆಗೆ  ಹನುಮಂತ  .ಎಸ್.  ರವರು ಮಾನ್ಯ ಸಿಪಿಐ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ.ಸಿಬ್ಬಂದಿಯವರಾದ ಹೆಚ್.ಸಿ.124, ಹೆಚ್.ಸಿ233.346, ಪಿಸಿ-679.681.99.ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ 11-45 ಪಿ.ಎಂ ಕ್ಕೆ ದಾಳಿ ಮಾಡಿ ಮೇಲ್ಕಂಡ 09 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.4010 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ದಿನಾಂಕ 04-11-2018 ರಂದು ರಾತ್ರಿ 01-15 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.34/2018 ರ ಪ್ರಕಾರ ದಾಖಲು ಮಾಡಿಕೊಂಡುಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ  ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪರವಾನಿಗೆ ಬಂದ ನಂತರ ಇಂದು ದಿನಾಂಕ 04-11-2018 ರಂದು 7-15 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ಠಾಣೆ ಗುನ್ನೆ ನಂ. 262/2018 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
7dfa43a0b0eb8c3cf894ed3c53e940fa.jpg

ಪ್ರಕರಣ ಸಾರಾಂಶ : ಫಿರ್ಯಾದಿದಾರಳು 10 ವರ್ಷಗಳಿಂದ ಆಶಾ ಕಾರ್ಯಕರ್ತೆ ಎಂದು ಕೆಲಸ ಮಾಡಿಕೊಂಡಿದ್ದುದಿನಾಂಕ:28-10-2018 ರಂದು ಬೆಳಿಗ್ಗೆ ಫಿರ್ಯಾದಿದಾರಳು ಬೆಳಗುರ್ಕಿಯಲ್ಲಿ ತಮ್ಮ ಮನೆಯಲ್ಲಿದ್ದಾಗ ಆರೋಪಿತನಾದ ಮೊಬೈಲ್ ನಂ.7760361823 ನೇದ್ದರ ಗ್ರಾಹಕನು ತನ್ನ ಸದರಿ ಮೊಬೈಲ್ ನಂಬರಿನಿಂದ ಫಿರ್ಯಾದಿದಾರಳ ಮೊಬೈಲ್ ನಂ.8277848590 ಗೆ ಕರೆ ಮಾಡಿ ಕೆಟ್ಟ ರೀತಿಯಿಂದ ಮಾತಾಡಿದ್ದುಅಲ್ಲದೇ 3-40 ಪಿ.ಎಮ್ ಸಮಯದಲ್ಲಿ ಫಿರ್ಯಾದಿದಾರಳಿಗೆ ಸದರಿಯವನು ಪುನಃ ಫೋನ್ ಮಾಡಿ ಸೂಳೆ ನನ್ನ ಹತ್ತಿರ ಮಲಗಲು ಬರುತ್ತೀಯಾ ನಿನ್ನನ್ನು ಎಷ್ಟು ಬಾರಿ ಮುಟ್ಟಿದ್ದೇನೆ ಎಂದು ಮುಂತಾಗಿ ಅವಾಚ್ಯವಾಗಿ ಮಾತಾಡಿ ಬೈದು ನಂತರ ಫಿರ್ಯಾದಿದಾರಳ ಗಂಡನಿಗೆ ಬೈದು ಜೀವದ ಬೆದರಿಕೆ ಹಾಕಿರುತ್ತಾನೆ ಎಂದು ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ  ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ  ಠಾಣಾ ಎನ್.ಸಿ ಸಂಖ್ಯೆ:65/2018 ರಲ್ಲಿ ದಾಖಲಿಸಿಕೊಂಡು ನಂತರ ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಅನುಮತಿ ಪಡೆದು ಠಾಣಾ ಗುನ್ನೆ ನಂ.245/2018, ಕಲಂ. 504, 506 ಐಪಿಸಿ ಪ್ರಕಾರ ದಾಖಲಿಸಿಕೊಂಡಿದ್ದು ಇರುತ್ತದೆ.  
416fcc6b9658355288759aa2c1cdf5b4.jpg

ಪ್ರಕರಣದ ಸಾರಾಂಶ: ಫಿರ್ಯಾದಿದಾರಳ ಮಗನಾದ ಟಿ.ಚೈತನ್ಯ ವಯಸ್ಸು 16 ವರ್ಷ ಈತನು ಹೊಸಳ್ಳಿ ಇ.ಜೆ ಕ್ಯಾಂಪಿನ ಶ್ರೀಕ್ರಿಷ್ಣದೇವರಾಯ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಅದೇ ಶಾಲೆಯ ವಸತಿ ನಿಲಯದಲ್ಲಿದ್ದುದಿನಾಂಕ: 28-10-2018 ರಂದು ಮದ್ಯಾಹ್ನ 12-00 ಗಂಟೆಯಿಂದ 1-00 ಗಂಟೆಯ ಸಮಯದಲ್ಲಿ ಸದರಿ ಟಿ.ಚೈತನ್ಯ ಈತನು ಸದರಿ ಶಾಲೆಯ ವಸತಿನಿಲಯದಿಂದ ಕಾಣೆಯಾಗಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ ಕಾರಣ ಪತ್ತೆ ಮಾಡಿಕೊಡಲು ವಿನಂತಿ ಎಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ. 246/2018, ಕಲಂ.363 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
5e4099ed22777a80cfe281fe48727e9f.jpg

ಪ್ರಕರಣ ಸಾರಾಂಶ:ಮೇಲ್ಕಂಡದಿನಾಂಕಸಮಯ ಸ್ಥಳದಲ್ಲಿ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾನ್ಯ ಸಿಪಿಐ ಸಾಹೇಬರು ಸಿಂಧನೂರುರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 1,850/ರೂಪಾಯಿ,52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದು ಇರುತ್ತದೆ.ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಜೂಜಾಟದ ಸಾಮಾಗ್ರಿಗಳು ಮತ್ತು ಸಿಕ್ಕಿಬಿದ್ದ ಆರೋಪಿತರೊಂದಿಗೆ ಮರಳಿ ಠಾಣೆಗೆ ಬಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಜ್ಞಾಪನ ಪತ್ರವನ್ನು ನೀಡಿದ್ದರ ಮೇಲಿಂದ ಮಾನ್ಯ ನ್ಯಾಯಾಧೀಶರಿಂದ ಆರೋಪಿತರ ಮೇಲೆ ಪ್ರಕರಣದ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ರಾತ್ರಿ 0815 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
52c7c373bf15fae5fffc6bfef6cb1a29.jpg

ದಿನಾಂಕ: 04-11-2018 ರಂದು 2-00 ಪಿ.ಎಂ ಕ್ಕೆ ಠಾಣಾ ಎ.ಎಸ್.ಐ (ಹೆಚ್ ) ರವರು ಒಂದು ಅಕ್ರಮ ಮರಳು ಜಪ್ತಿ ಪಂಚನಾಮೆ ವರದಿ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರುಪಡಿಸಿದ್ದುದರ ಸಾರಾಂಶವೇನೆಂದರೆತಾವು ದಿನಾಂಕ: 04-11-2018 ರಂದು ತುರುವಿಹಾಳ ಪಟ್ಟಣದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ 12-45 ಪಿ.ಎಂ ಕ್ಕೆ ಹತ್ತಿಗುಡ್ಡ ರಸ್ತೆ ಕಡೆಯಿಂದ ತುರುವಿಹಾಳ ಪಟ್ಟಣ ಕಡೆಗೆ ಒಂದು Swaraj 735 X Tractor Eng No.39.1357/SYE06215  ನೇದ್ದರ ಚಾಲಕನು ಟ್ರಾಕ್ಟರ್ ಗೆ ಅಟ್ಯಾಚ್ ಇದ್ದ ನಂಬರಿಲ್ಲದ ಟ್ರಾಲಿ ನೇದ್ದರಲ್ಲಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಹಳ್ಳದಲ್ಲಿ ಕಳ್ಳತನದಿಂದ ಮರಳು ತುಂಬುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಬೀಟ್ ಪಿ.ಸಿ 472 ರವರ ಭಾತ್ಮಿ ಮೇರೆಗೆ ಎ.ಎಸ್.ಐ(ಹೆಚ್ ) ರವರು ಮಾನ್ಯ ಸಿಪಿಐ ಸಿಂಧನೂರು ಸಾಹೇಬರ ನಿರ್ದೇಶನದಂತೆ ಪಿಸಿ-472, 679 ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಟ್ರಾಕ್ಟರ್ ಚಾಲಕನು ಅಲ್ಲಿಂದ ಓಡಿ ಹೋಗಿದ್ದು, ನಂತರ ಟ್ರಾಕ್ಟರ್ ಹಾಗೂ ಕಳ್ಳತನದ ಮರಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಹಾಜರುಪಡಿಸಿದ ಮೇರೆಗೆ ಪ್ರ.ವ ವರದಿ ಜಾರಿ ಮಾಡಿದ್ದು ಇದೆ.
4a029aa7b393c956ebdbb03c90a50376.jpg

ದಿನಾಂಕ 01-11-2018 ರಂದು 11-30 .ಎಂ.ಕ್ಕೆ ಕೆ.ಹೊಸಳ್ಳಿ ಸೀಮಾದಲ್ಲಿ ಸರ್ವೆ ನಂ. 106 ರಲ್ಲಿ ರಾಯಪ್ಪ ತಂದೆ ಪಂಪಣ್ಣ ಜುಂಗಿ  ಇವರ ಭತ್ತದ ಹೊಲದ ಕೆರೆದಡದಲ್ಲಿ ಗಾಂಜಾ ಗಿಡಗಳು ಬೆಳೆಸಿದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪತ್ರಾಂಕಿತ ಅಧಿಕಾರಿಗಳಾದ ಶ್ರೀ.ಚಿದಾನಂದ ಗುರುವಿನ್ತುರುವಿಹಾಳ ರವರ ನೇತೃತ್ವದಲ್ಲಿ ಸಿಪಿಐಸಿಂಧನೂರುಹಾಗೂ ಸಿಬ್ಬಂದಿಗಳಾದ ಪಿಸಿ-679,454,637,324,99ಎಪಿಸಿ- 162 ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ 0200ಪಿ.ಎಂ.ಕ್ಕೆ ದಾಳಿ ಮಾಡಿ ಹೊಲದಲ್ಲಿ ಆರೋಪಿ ರಾಯಪ್ಪ ತಂದೆ ಪಂಪಣ್ಣ ಜುಂಗಿ ವಯಸ್ಸು-55, ಜಾತಿ ನಾಯಕ, -ಒಕ್ಕಲುತನಸಾ:ಕೆ.ಹೊಸ್ಸಳ್ಳಿಹಾವ:ನಾಗಲಿಂಗೇಶ್ವರ ಕ್ಯಾಂಪ್ ತಾ:ಸಿಂಧನೂರು ಈತನು ಬೆಳೆಸಿದ್ದ 86 ಹಸಿ ಸಣ್ಣ ಮತ್ತು ದೊಡ್ಡ ಗಾಂಜಾ ಗಿಡಗಳು ಸುಮಾರು 23.6 ಕೆ.ಜಿ.ಕಿ.ರೂ. 10,300/ನೇದ್ದನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕುರಿತು ದಾಳಿ ಪಂಚನಾಮೆ ಮತ್ತು

3a8f7b0a593e104d82722c3928cdee8e.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ :- ಇಂದು ದಿನಾಂಕ. 05-11-2018 ರಂದು ಸಂಜೆ 5-00 ಗಂಟೆಗೆ ಪಿ.ಎಸ್.ಐ ರವರಿಗೆ   ಕಸಬಾ ಲಿಂಗಸುಗೂರ ಸೀಮಾದಲ್ಲಿರುವ ಭೀಮಪ್ಪನ ಹೊಲದಲ್ಲಿ ಅನಧಿಕೃತವಾಗಿ ಗಾಂಜಾ ಬೆಳೆದಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರು, ಸಿಬ್ಬಂದಿಯವರು ಹಾಗೂ ಪತ್ರಾಂಕಿತ ಅಧಿಕಾರಿ ಇವರೊಂದಿಗೆ ಸ್ಥಳಕ್ಕೆ ಹೋಗಿ ಮದ್ಯಾಹ್ನ 1-00 ಗಂಟೆಗೆ ದಾಳಿ ನಡೆಸಿ ಸದರಿ ಜಮೀನಿನಲ್ಲಿ ಬೆಳದ ಸುಮಾರು 70 ಗಿಡಗಳ ಸುಮಾರು 35 ಕೆ.ಜಿ ಯಷ್ಟು ಅ.ಕಿ.80,000/-ರೂ. ಬೆಲೆಭಾಳವುದನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯಒಬ್ಬ ಆರೋಪಿತನನ್ನು ತಂದು ಮುಂದಿನ ಕ್ರಮಕ್ಕಾಗಿ ಫಿರ್ಯಾದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

 
59cbb226a26fc8b8dbd9a93fac239f4a.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ:- ಈ ಪ್ರಕರಣದಲ್ಲಿಯ ಪಿರ್ಯಾದಿದಾರರ ಮತ್ತು ಆರೋಪಿತರ ಹೊಲಗಳು ಕಲ್ಲೂರು ಸೀಮಾಂತರದಲ್ಲಿ ಅಕ್ಕಪಕ್ಕದಲ್ಲಿದ್ದು ಆರೋಪಿತರು ಪಿರ್ಯಾದಿದಾರರ ಹೊಲದಲ್ಲಿಯ ಹತ್ತಿ ಬೆಳೆ, ಜೋಳದ ಬೆಳೆ ಮತ್ತು ಹೊಲದ ಬದವನ್ನು ಕೆಡಿಸಿದ್ದರಿಂದ ಪಿರ್ಯಾದಿದಾರನು ತಮ್ಮ ಹೊಲಕ್ಕೆ ಹೋಗಿ ನೋಡಿ ದಿ.04-11-2018 ರಂದು ರಾತ್ರಿ 9-00ಗಂಟೆ ಸುಮಾರಿಗೆ ಕಲ್ಲೂರು ಗ್ರಾಮದಲ್ಲಿ ತಮ್ಮ ಮನೆಯ ಸಮೀಪ ಕರೆಂಟಿನ ಕಂಬದ ಲೈಟಿನ ಬೆಳಕಿನಲ್ಲಿ ದಾರಿಯಲ್ಲಿ ತಮ್ಮ ಮನೆ ಕಡೆಗೆ ಹೊರಟಿದ್ದಾಗ ಆರೋಪಿತರು ಎದುರಾಗಿ ಬಂದಿದ್ದು ಅವರನ್ನು ಕಂಡ ಪಿರ್ಯಾದಿದಾರನು ನಮ್ಮ ಹೊಲದಲ್ಲಿ ಹತ್ತಿ ಬೆಳೆ,ಜೋಳದ ಬೆಳೆ ಮತ್ತು ಹೊಲದ ಬದುವುಯಾಕೆ ಕೆಡಿಸಿದ್ದೀರೆಂದು ಕೇಳಿದ್ದಕ್ಕೆ ಪಿರ್ಯಾದಿದಾರನನ್ನುಮುಂದೆ ಹೋಗದಂತೆ ತಡೆದು ನಿಲ್ಲಿಸಿ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಗಳಿಂದ ಹೊಡೆದಿದ್ದು ಬಿಡಿಸಲು ಹೋದ ಪಿರ್ಯಾದಿದಾರನ ತಮ್ಮನಿಗೆ ಸಹ ಅವಾಚ್ಯವಾಗಿ ಬೈದಾಡಿ ಕೈಗಳಿಂದ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು ಸೂಳೇ ಮಕ್ಕಳೆ ಇನ್ನೊಂದು ಸಲ ಹೊಲದ ಸುದ್ದಿ ಎತ್ತಿದರೆ ನಿಮ್ಮ ಕೈ ಕಾಲು ಮುರಿಯುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರ.ವ.ವರದಿ ಜಾರಿ ಮಾಡಿದೆ.
5c40951c8b1e9c8d3fad09a5db66337d.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ:- ಸಂಕ್ಷಿಪ್ತ ಸಾರಾಂಶ : ಪಿರಿಯಾದುದಾರನ ತಂದೆ ಈಗ್ಗೆ ಸುಮಾರು 08 ವರ್ಷದ ಹಿಂದೆ ಜಾಲಹಳ್ಳಿಯ ಪ್ರಗತಿ ಕೃಷ್ಣಾ ಬ್ಯಾಂಕ್ ಸದ್ಯ ಪ್ರಗತಿ ಕೃಷ್ಣಾ ಬ್ಯಾಂಕಿನಲ್ಲಿ ಮನೆ ಕಟ್ಟಲು 3,50,000/- ರೂ ಸಾಲವನ್ನು ಪಡೆದುಕೊಂಡು ಮನೆ ಕಟ್ಟಿದ್ದು ಮನೆ ಕಟ್ಟಿದ ನಂತರ ಪಿಯರ್ಾದಿ ತಂದೆ, ತಾಯಿ, ಅಜ್ಜಿ ಒಂದೇ ವರ್ಷದಲ್ಲಿ ಮೃತಪಟ್ಟಿದ್ದರಿಂದ ಭಯಗೊಂಡು ಪಿರಿಯಾದುದಾರನು ಹಾಗೂ ಪಿರಿಯಾದುದಾರನ ಅಣ್ಣ ಮೃತ ಅಯ್ಯನಗೌಡನು ಸದರಿ ಮನೆಯಲ್ಲಿ ವಾಸ ಮಾಡದೇ ಊರ ಮುಂದೆ ಹೊಟೆಲ್  ಇಟ್ಟುಕೊಂಡು ಹೋಟೆಲ್ದಲ್ಲಿ ಕೆಲಸ ಮಾಡಿ ಪಿರಿಯಾದುದಾರನ ಹೋಟೆಲ್ದಲ್ಲೆ ಮಲಗಿಕೊಳ್ಳುತ್ತಿದ್ದು, ಪಿರಿಯಾದಿ ಅಣ್ಣ ಅಯ್ಯನಗೌಡನು  ಹೋಟೆಲ್. ಪಕ್ಕದಲ್ಲಿರುವ ಹೇರುಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲೆ ಮಲಗಿಕೊಳ್ಳುತ್ತಿದ್ದು, ಪಿರಿಯಾದುದಾರನು ಕೆಲಸ ಮಾಡಲು ಬೆಳಿಗ್ಗೆ 06-00 ಗಂಟೆಗೆ ಎಳುತ್ತಿದ್ದು ಪಿರಿಯಾದಿ ಅಣ್ಣ ಮೃತನು  ಬೆಳಿಗ್ಗೆ 06-30 ಗಂಟೆಗೆ  ಶಾಲೆ ಮೇಲಿಂದ ಎದ್ದು ಕೆಲಸ ಮಾಡಲು ಬರುತ್ತಿದ್ದುಪಿರಿಯಾದುದಾರನ ತಂದೆಯು ಮನೆ ಕಟ್ಟಲು ಜಾಲಹಳ್ಳಿಯ ತುಂಗಭದ್ರಾ ಗ್ರಾಮೀಣ ಬ್ಯಾಂಕ್ ಸದ್ಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನಲ್ಲಿ ಮಾಡಿದ 350,000/- ರೂ ಸಾಲವನ್ನು ಬಡ್ಡಿ ಸಮೇತ ಮರುಪಾವತಿ ಮಾಡಲು ಬ್ಯಾಂಕಿನವರು ಪಿರಿಯಾದುದಾರನಿಗೆ ಹಾಗೂ ಪಿರಿಯಾದಿ ಅಣ್ಣನಿಗೆ ಆಗಾಗ ನೋಟಿಸನ್ನು ನೀಡಿದ್ದು, ಇದೇ ವಿಚಾರವಾಗಿ ಪಿರಿಯಾದಿ ಅಣ್ಣನು ಸಾಲವನ್ನು ಹೇಗೆ ಕಟ್ಟುವುದು ಅಂತಾ ಚಿಂತೆ ಹಚ್ಚಿಕೊಂಡು ಇತ್ತಿಚಿಗೆ  ಮದ್ಯ ಸೇವನೆ ಮಾಡುವ ಚಟವನ್ನು ಹಚ್ಚಿಕೊಂಡಿದ್ದುಸಾಲದ ವಿಚಾರವಾಗಿ ಮನನೊಂದು ದಿನಾಂಕ 04/11/2018 ರಂದು ರಾತ್ರಿ 10-00 ಗಂಟೆಯಿಂದ 05/11/2018 ರಂದು ಬೆಳಿಗಿನ ಜಾವ 07-30 ಗಂಟೆಯ ಅವಧಿಯಲ್ಲಿ ಯಾರೂ ವಾಸ ಮಾಡದ ಪಿರಿಯಾದುದಾರನ ವಾಸದ ಮನೆಯ ಪಡಸಾಲೆಯ ಚತ್ತಿನ ಪ್ಯಾನಿಗೆ ಲುಂಗಿಯಿಂದ ನೇಣು ಹಾಕಿಕೊಂಡು   ಮೃತಪಟ್ಟಿದ್ದು ಇರುತ್ತದೆ. ಸದರಿ ಘಟನೆಗೆ ಸಂಬಂದಿಸಿದಂತೆ ಯಾರ ಮೇಲೆಯೂ ಸಂಶಯ ವಗೈರಾ ಇರುವುದಿಲ್ಲಾ. ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ಲಿಖಿತ ದೂರಿನ ಸಾರಾಂಶ ಮೇಲಿಂದ ಠಾಣೆ ಯುಡಿಆರ್. ನಂಬರ 15/2018 ಕಲಂ 174 ಸಿ,ಆರ್.ಪಿಸಿ ನೇದ್ದರಲ್ಲಿ ಪ್ರಕರಣ ದಾಲಿಸಿಕೊಂಡು ತನಿಖೆ ಕೈಗೊಂಡೆನು.
0fd2af9e6de05bed462ecfe893b1adfc.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ:- ದಿನಾಂಕ:05-11-2018 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಫಿರ್ಯಾದಿದಾರನ ತಂದೆಯಾದ ಆರೋಪಿ 03 ನೇದ್ದವನು ಫಿರ್ಯಾದಿದಾರನೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡು ಆರೋಪಿ 01 ನೇದ್ದವನ ಮನೆಗೆ ಹೋಗಿದ್ದು, ಸದರಿ ಆರೋಪಿ 03 ನೇದ್ದವನನ್ನು ಕರೆಯಲೆಂದು ಫಿರ್ಯಾದಿದಾರನು ಆರೋಪಿ 01 ನೇದ್ದವನ ಮನೆಯ ಮುಂದೆ ಹೋದಾಗ ಅಲ್ಲಿ ಆರೋಪಿ 01 ರಿಂದ 03 ರವರು ಏಕಾಏಕಿಯಾಗಿ ಬಂದು ಫಿರ್ಯಾದಿದಾರನ ಎದೆಯ ಮೇಲಿನ ಅಂಗಿ ಹಿಡಿದು  ಏನಲೇ ಬೋಸುಡಿ ಸೂಳೆ ಮಗನೆ ನೀನು ನಮ್ಮ ಮನೆಗಿಂತ ಉತ್ತಮ ರೀತಿಯಲ್ಲಿ ಮನೆ ಕಟ್ಟಿಸುತ್ತೀಯಾ ಅಂತಾ ಬೈದು ಕೈ ಮುಷ್ಟಿ ಮಾಡಿ ಬಾಯಿಗೆ ಗುದ್ದಿ ರಕ್ತಗಾಯಗೊಳಿಸಿ , ಎದೆಗೆ ಹೊಟ್ಟೆಗೆ ಗುದ್ದಿ ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಒಳಪೆಟ್ಟುಗೊಳಿಸಿದ್ದಲ್ಲದೇ ಪೊಲೀಸ ಪ್ರಕರಣ ದಾಖಲು ಮಾಡಿದರೆ ಜೀವಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.248/2018, ಕಲಂ.341, 504, 323, 506 ಸಹಿತ 34 ಐಪಿಸಿ ಪ್ರಕಾರ ದಾಖಲಿಸಿಕೊಂಡಿರುತ್ತೇನೆ
a1b9f6dc5baa93806ca61e84aa4a12b0.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ:- ದಿನಾಂಕ:05-11-2018 ರಂದು  08-30 ಗಂಟೆಗೆ ಖಾನಾಪೂರ ಗ್ರಾಮಕ್ಕೆ ಪೆಟ್ರೊಲಿಂಗ್ ಕರ್ತವ್ಯ ಕುರಿತು  ಹೋದಾಗ ಮಾಹಿತಿ ತಿಳಿದು  ಬಂದಿದ್ದೇನೆಂದರೆ  ಈ ಹಿಂದೆ ವಾಲ್ಮೀಕಿ ಕಟ್ಟೆ  ಕಿತ್ತಿದ್ದರ ವಿಚಾರವಾಗಿ ಗುನ್ನೆ ಪ್ರತಿ ಗುನ್ನೆಗಳು ದಾಖಲಾಗಿದ್ದು  ಎರಡು ಕೋಮಿನ ನಡುವೆ  ದ್ವೇಷಮಯ ವಾತಾವರಣ ಇದ್ದು ಬೇರೆ ಕೋಮಿನವರಿಗೂ ಸಹಾ ಪ್ರಚೋಧಿಸಿ  ಗ್ರಾಮದಲ್ಲಿ ಕಲುಷಿತ ವಾತಾವರಣ ಉಂಟು ಮಾಡುತ್ತಿದ್ದು   ಅದೇ ವೈಷಮ್ಯದಿಂದ ಪುನಃ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿ ಪ್ರಾಣ ಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ದಕ್ಕೆಯನ್ನುಂಟು ಮಾಡುವದು ,ಸದ್ರಿಯವರಿಂದ ಗ್ರಾಮದಲ್ಲಿ ಶಾಂತತಾ ಭಂಗವುಂಟಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸುವ ಕುರಿತು ಮುಂಜಾಗ್ರತಾ ಕ್ರಮಕ್ಕಾಗಿ ಸ್ವಂತ ಪಿರ್ಯಾದಿ ಮೇಲಿಂದ ಆರೋಪಿತರ ವಿರುದ್ಧ ಮೇಲಿನಂತೆ ಕ್ರಮ ಜರುಗಿಸಿದೆ
16014782962ad22a5f26f217995cd197.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ:-  ದಿನಾಂಕ:05-11-2018 ರಂದು  08-30 ಗಂಟೆಗೆ ಖಾನಾಪೂರ ಗ್ರಾಮಕ್ಕೆ ಪೆಟ್ರೊಲಿಂಗ್ ಕರ್ತವ್ಯ ಕುರಿತು  ಹೋದಾಗ ಮಾಹಿತಿ ತಿಳಿದು  ಬಂದಿದ್ದೇನೆಂದರೆ  ಈ ಹಿಂದೆ ವಾಲ್ಮೀಕಿ ಕಟ್ಟೆ  ಕಿತ್ತಿದ್ದರ ವಿಚಾರವಾಗಿ ಗುನ್ನೆ ಪ್ರತಿ ಗುನ್ನೆಗಳು ದಾಖಲಾಗಿದ್ದು  ಎರಡು ಕೋಮಿನ ನಡುವೆ  ದ್ವೇಷಮಯ ವಾತಾವರಣ ಇದ್ದು ಆರೋಪಿತರು ಕುರುಬ ಸಮಾಜದವರೊಂದಿಗೆ ಅಸಮದಾನ ಹೊಂದಿದ್ದು ಇವರು ಯಾವುದೇ ಸಮಯದಲ್ಲಿ ಇತರೇ ಸಮಾಜದವರೊಂದಿಗೆ ಬೇರೆ ಊರುಗಳಿಂದ ತಮ್ಮ ಬೆಂಬಲಿಗರಿಗೆ ಕರೆಯಿಸಿ ಗಲಾಟೆ ಮಾಡುವ ಸ್ವಭಾವದರಿದ್ದು ಅದೇ ವೈಷಮ್ಯದಿಂದ ಪುನಃ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿ ಪ್ರಾಣ ಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ದಕ್ಕೆಯನ್ನುಂಟು ಮಾಡುವದು ,ಸದ್ರಿಯವರಿಂದ ಗ್ರಾಮದಲ್ಲಿ ಶಾಂತತಾ ಭಂಗವುಂಟಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸುವ ಕುರಿತು ಮುಂಜಾಗ್ರತಾ ಕ್ರಮಕ್ಕಾಗಿ ಸ್ವಂತ ಪಿರ್ಯಾದಿ ಮೇಲಿಂದ ಆರೋಪಿತರ ವಿರುದ್ಧ ಮೇಲಿನಂತೆ ಕ್ರಮ ಜರುಗಿಸಿದೆದಿನಾಂಕ:05-11-2018 ರಂದು  08-30 ಗಂಟೆಗೆ ಖಾನಾಪೂರ ಗ್ರಾಮಕ್ಕೆ ಪೆಟ್ರೊಲಿಂಗ್ ಕರ್ತವ್ಯ ಕುರಿತು  ಹೋದಾಗ ಮಾಹಿತಿ ತಿಳಿದು  ಬಂದಿದ್ದೇನೆಂದರೆ  ಈ ಹಿಂದೆ ವಾಲ್ಮೀಕಿ ಕಟ್ಟೆ  ಕಿತ್ತಿದ್ದರ ವಿಚಾರವಾಗಿ ಗುನ್ನೆ ಪ್ರತಿ ಗುನ್ನೆಗಳು ದಾಖಲಾಗಿದ್ದು  ಎರಡು ಕೋಮಿನ ನಡುವೆ  ದ್ವೇಷಮಯ ವಾತಾವರಣ ಇದ್ದು ಬೇರೆ ಕೋಮಿನವರಿಗೂ ಸಹಾ ಪ್ರಚೋಧಿಸಿ  ಗ್ರಾಮದಲ್ಲಿ ಕಲುಷಿತ ವಾತಾವರಣ ಉಂಟು ಮಾಡುತ್ತಿದ್ದು   ಅದೇ ವೈಷಮ್ಯದಿಂದ ಪುನಃ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿ ಪ್ರಾಣ ಹಾನಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ದಕ್ಕೆಯನ್ನುಂಟು ಮಾಡುವದು ,ಸದ್ರಿಯವರಿಂದ ಗ್ರಾಮದಲ್ಲಿ ಶಾಂತತಾ ಭಂಗವುಂಟಾಗುವ ಸಾದ್ಯತೆ ಕಂಡು ಬಂದಿದ್ದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸುವ ಕುರಿತು ಮುಂಜಾಗ್ರತಾ ಕ್ರಮಕ್ಕಾಗಿ ಸ್ವಂತ ಪಿರ್ಯಾದಿ ಮೇಲಿಂದ ಆರೋಪಿತರ ವಿರುದ್ಧ ಮೇಲಿನಂತೆ ಕ್ರಮ ಜರುಗಿಸಿದೆ