Raichur District Police

Daily News

109045747754b3eb54a4cd81a1d25eb8.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ:-ದಿನಾಂಕ-05-11-2018 ರಂದು ಬೆಟದೂರು ಆಸ್ಪತ್ರೆ ರಾಯಚೂರುದಿಂದ ಒಂದು ಎಮ್ ಎಲ್ ಸಿ ವಸೂಲಾಗಿದ್ದರ ಮೇರೆಗೆ ಆಸ್ಪತ್ರೆಗೆ ಬೇಟಿನೀಡಿ ಹೇಳಿಕೆ ಫೀರ್ಯಾಧಿ ಪಡೆದುಕೊಂಡು ಬಂದ ಸಾರಾಂಶವೇನೆಂದರೆ ಫಿರ್ಯಾದಿ ಮತ್ತು ಆಕೆಯ ಗಂಡ ಪ್ರಭು ಈತನು ಹೊಂಡಾ ಅಕ್ಟಿವ್ ಸ್ಕೂಟಿ ನಂ-ಕೆಎ-36ಇಪಿ-9041 ನೇದ್ದನ್ನು ತೆಗೆದುಕೊಂಡು ದಿ:04-11-2018 ರಂದು ಹಿರೆರಾಯಕುಂಪಿ ಗ್ರಾಮಕ್ಕೆ ಹೋಗುತ್ತಿದ್ದಾಗ ಮದ್ಯಾಹ್ನ 12.30 ಗಂಟೆಗೆ ಶಾವಂತಗೇರಾ ದಾಟಿದ ನಂತರ ಸ್ವಲ್ಪ ಮುಂದೆ ತಿರುವಿನ ಬಳಿ ಒಮ್ಮಿಂದೊಮ್ಮೆಲೆ ಹೋಲದಲ್ಲಿದ್ದ  ದನಗಳು ರೋಡಿಗೆ ಓಡಿ ಬಂದಾಗ ಅಡ್ಡಬಂದಿದ್ದರಿಂದ ನನ್ನ ಗಂಡ ಸ್ಕೂಟಿಯನ್ನು ನಡೆಸುತ್ತಿದ್ದು ದನಗಳಿಂದ ತಪ್ಪಿಸಲು ಹೋಗಿ ನಿಂತ್ರಿಸಲು ಆಗದೆ ಸ್ಕೂಟಿಯನ್ನು ಕೆಳಗೆ ಬೀಳಿಸಿದ್ದರಿಂದ ನನಗೆ ಬಲಗೈ ಮುಂಗೈ ಮತ್ತು ಎಡ ಭುಜಕ್ಕೆ ತರಚಿದ ಗಾಯಗಾಳಾಗಿದ್ದು ನನ್ನ ಗಂಡನಿಗೆ ನೋಡಲು ಆತನ ಬಲಗಣ್ಣಿನ ಉಬ್ಬಿಗೆ ರಕ್ತಗಾಯವಾಗಿದ್ದು ಬಲ ಭುಜಕ್ಕೆ ಬಲಗೈ ಮೋಣಕೈ ಹತ್ತಿರ ತರಚಿದ ಗಾಯಗಾಳಾಗಿದ್ದು ಬಲಗಾಲು ಮೋಣಕಾಲಿಗೆ ಓಳಗಡೆ ಭಾಕಿ ಓಳಪೆಟ್ಟಾಗಿ ಬಾವು ಬಂದಿದ್ದು ಮತ್ತು ಬಲಗಾಲು ಪಾದದ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-213/2018 ಕಲಂ 279,337,338ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2ce4c82ae00a98040c3d8744dd80b1f9.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ :-ಇಂದು ದಿನಾಂಕ-05-11-2018 ರಂದು ಮುಂಜಾನೆ 11.00ಗಂಟೆ ಸುಮಾರಿಗೆ ಫಿರಿಯಾಧಿಯು ಕೆಲಸದ ನಿಮಿತ್ಯ  ರಾಯಚೂರಿಗೆ ಹೋಗಿ ತನ್ನ ಕೆಲಸಗಳನ್ನು ಮುಗಿಸಿಕೊಂಡು ವಾಪಸ್ ಗಬ್ಬೂರುಗೆ ಬಂದು ಉಡುಪಿ ಹೋಟಲ್ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ  ನಮ್ಮೂರಿನ ಬೂದೆಪ್ಪಗೌಡ ತಂದೆ ಅಮ್ರಣಗೌಡ ಈತನೊಂದಿಗೆ ಮಾತನಾಡುತ್ತಾ ನಿಂತುಕೊಂಡಿದ್ದಾಗ ಸುಮಾರು ಸಾಯಂಕಾಲ 4.30 ಗಂಟೆ ಸಮಯಕ್ಕೆ ಪಿಯರ್ಾದಿಯು ತಮ್ಮೂರಿನ ಅಮರೇಶ ತಂದೆ ಹನುಮಣ್ಣ ಈತನು ಬಂದು ಏ ಗೌಡ ಈ ಸೂಳೆ ಮಗನ ತಂಗಿಯನ್ನು ಹಿಂದಕ್ಕೆ ಒಂದು ಕೈ ನೋಡಿಕೊಂಡಿದ್ದೆ ಈಗ ಈ ಬ್ಯಾಡರ ಸೂಳೆ ಮಗನೊಂದಿಗೆ ಏನು ಮಾತಾಡಿಕೊಂಡು ನಿಂತಿದ್ದಿ ಎಂದು ಏಕಾಏಕಿ ಬಂದು ಫಿರಿಯಾದಿಗೆ ಕಲ್ಲಿನಿಂದ ನನ್ನ ಎಡಕಪಾಳಕ್ಕೆ ಹೊಡೆದು ರಕ್ತಗಾಯ ಮಾಡಿದ್ದು ಕೂಡಲೇ ಪಿರಿಯಾದಿಯೊಂದಿಗೆ ನಿಂತುಕೊಂಡಿದ್ದ ಬೂದೆಪ್ಪಗೌಡ ಹಾಗೂ ಅಲ್ಲಿಯೇ  ಹತ್ತಿರದಲ್ಲಿದ್ದ  ಮಹಿಪಾಲ ಗೌಡ ಇವರು  ಜಗಳ ಬಿಡಿಸಿಕೊಂಡಿದ್ದು  ಗೌಡ್ರೆ ನೀವು ಬಿಡಿಸಿಕೊಂಡಿದ್ದಕ್ಕೆ ಈ ಬ್ಯಾಡರ ಸೂಳೆ ಮಗ ಉಳಿದನಾ ಇಲ್ಲದಿದ್ದರೆ ಈ ಸಣ್ಣ ಜಾತಿ ಸೂಳೆ ಮಗನನ್ನ ಮುಗಿಸಿಯೇ ಬಿಡುತ್ತದ್ದೆ ಅಂತಾ ಅಂದು ಇವತ್ತು ಬದುಕಿದ್ದಿ ಇನ್ನೊಮ್ಮೆ ನನ್ನ ಕೈಯಾಗ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ನಿನ್ನನ್ನು ಸಾಯಿಸಿಯೇ  ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ತನ್ನ ಕೈಯಲ್ಲಿದ್ದ ಕಲ್ಲನ್ನು ಅಲ್ಲಿಯೇ ಬಿಸಾಕಿ ಅಲ್ಲಿಂದ ಹೊರಟು ಹೋದನು.

      ಕಾರಣ ಪಿರಿಯಾದಿಗೆ ಅವಾಚ್ಚವಾಗಿ ಬೈದು ಜಾತಿನಿಂದನೆ ಮಾಡಿ ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿದವನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಗಣಕೀಕೃತ ಫಿರಿಯಾದಿಯನ್ನು ತಂದು ಹಾಜರು ಪಡಿಸಿದ ಮೇರೆಗೆ  ಫಿರ್ಯಾದಿ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿದ್ದು ಇರುತ್ತದೆ.                
28fc5305a5c4dbdcd0a1e3d2ea8c7069.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ :-ಇಂದು ದಿನಾಂಕ: 05-11-2018 ರಂದು 11-30 ಎ.ಎಂ ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ಸಲ್ಲಿಸಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಮೃತನು ಪಿರ್ಯಾದಿಯ ಗಂಡನಿದ್ದು,ಮೃತನು 4-5 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರಿಂದ ಮೃತನು ಚಿಕಿತ್ಸೆ ಪಡೆದುಕೊಂಡು ಗುಣಮುಖನಾಗದೇ ಇರುವ ಕಾರಣ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಇಂದು ದಿನಾಂಕ:-05-11-2018 ರಂದು ಬೆಳಿಗ್ಗೆ 07-00 ಗಂಟೆ ಸುಮಾರು ಮನೆಯಿಂದ ತಾನು ಕೆಲಸ ಮಾಡುವ ಜಿನ್ನ್ ಗೆ ಹೋಗುತ್ತೇನೆಂದು ಹೇಳಿ ಹೋಗಿ ನಿಡಿಗೋಳ ಸೀಮಾದ ಸರ್ವೆ ನಂ-44 ರಲ್ಲಿ ತಮ್ಮ ಜಮೀನಿನಲ್ಲಿ ಹೋಗಿ ಬೆಳಿಗ್ಗೆ 9-00 ಗಂಟೆ ಸುಮಾರು ಹೊಲದಲ್ಲಿದ್ದ ಹುಣಸೆ ಮರಕ್ಕೆ ಕರೆಂಟ್ ಸರ್ವಿಸ್ ವೈರದಿಂದ ಉರಲು ಹಾಕಿಕೊಂಡು ಮೃತಪಟ್ಟಿದ್ದು, ಕಾರಣ ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ  ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶ.
c10757731012e9ac920789692376994e.jpg

ಇಂದು ದಿನಾಂಕ:05.11.2018 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆಪಿರ್ಯಾದಿದಾರನ ತಮ್ಮನ ಹೆಂಡತಿಯಾದ ಪೀರಾನ ಬೀ ಈಕೆಗೆ ಈಗ್ಗೆ 08 ತಿಂಗಳಿನಿಂದ ಮೈಯಲ್ಲಿ ಆರಾಮವಿಲ್ಲದ್ದರಿಂದ ಆಕೆಗೆ ನನ್ನ ತಮ್ಮನು ಲಿಂಗಸಗೂರಿನಲ್ಲಿ ವೈದ್ಯರ ಹತ್ತಿರ ತೋರಿಸಿದ್ದು ಆರಾಮವಾಗಿದ್ದು ಇರುತ್ತದೆಆರಾಮವಾದ ಮೇಲೆ ಪಿರ್ಯಾದಿದಾರನ ತಮ್ಮನಾದ ಸೈಯ್ಯದ ಅಲಿ ಖಾದ್ರಿ ಇತನು ಸೌದಿಗೆ ಕೆಲಸ ಮಾಡಲು ಹೋಗಿದ್ದು ಇರುತ್ತದೆಈಗ್ಗೆ ಸುಮಾರು 20 ದಿನಗಳಿಂದ ಪಿರ್ಯಾದಿದಾರನ ತಮ್ಮನ ಹೆಂಡತಿ ಪೀರಾನ ಬೀ ಈಕೆಗೆ ಮೈಯ್ಯಲ್ಲಿ ಆರಾಮವಿಲ್ಲದ್ದರಿಂದ ಆಕೆಯನ್ನು ವೈದ್ಯರ ಹತ್ತಿರ ತೋರಿಸಿದ್ದು ಚಿಕಿತ್ಸೆ ಮುಂದುವರೆದಿದ್ದು ಇರುತ್ತದೆಇದರಿಂದ ಪಿರ್ಯಾದಿದಾರನ ತಮ್ಮನ ಹೆಂಡತಿ ಮಾನಸಿಕಳಾಗಿದ್ದು ಇರುತ್ತದೆಹೀಗಿರವಾಗ ದಿನಾಂಕ:01.11.2018 ರಂದು ರಾತ್ರಿ ಸಮಯದಲ್ಲಿ ಪಿರ್ಯಾದಿದಾರನ ತಮ್ಮನ ಹೆಂಡತಿ ಮತ್ತು ಆಕೆಯ ಮಕ್ಕಳು ಕೂಡಿಕೊಂಡು  ಮಲಗಿಕೊಂಡಿದ್ದು ದಿನಾಂಕ:02.11.2018 ರಂದು ಬೆಳಿಗ್ಗೆ 06.00 ಗಂಟೆಗೆ ಮನೆಯಲ್ಲಿ ಎದ್ದು  ನೋಡಲಾಗಿ ಮನೆಯಲ್ಲಿ ಇರಲಿಲ್ಲ ನಂತರ ನಾನು ಮತ್ತು ನಮ್ಮ ಸಂಬಂದಿಕರು ಕೂಡಿಕೊಂಡು ಮುದಗಲ್ಲಿನಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲನಂತರ ಪೀರಾನ ಬೀ ಈಕೆಯ ತವರು ಮನೆ ಗೋಗಿ ಗ್ರಾಮಕ್ಕೆ ಆಕೆಯ ತಾಯಿಗೆ ಪೋನ ಮೂಲಕ ಅಲ್ಲಿಗೆ ಬಂದಿರುವುಳೊ ಹೇಗೆ ? ಎಂದು ವಿಚಾರ ಮಾಡಿದಾಗ ಸಿಕ್ಕಿರುವುದಿಲ್ಲ ಅಂತಾ ತಿಳಿಸಿದರು ನಾನು ಮತ್ತು ನಮ್ಮ ಸಂಬಂದಿಕರು ಕೂಡಕೊಂಡು ಇಲ್ಲಿಯವರೆಗೆ ಪೀರಾನಳನ್ನು ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ಪೀರನಾಳ ಮನೆಯಿಂದ ಕಾಣೆಯಾದ ಬಗ್ಗೆ ದೂರನ್ನಿ ನೀಡಿರುತ್ತೇನೆಪೀರಾನಳನ್ನು ಹುಡುಕಿ ಕೊಡಬೇಕೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3e9da477db60412acab24579f6e830fa.jpg

ಪ್ರಕಣರಣ ಸಾರಾಂಶ:-ದಿ.05.11.18 ರಂದು ಮದ್ಯಾಹ್ನ 3-45 ಗಂಟೆಗೆ ಕೊಪ್ಪಳ ಕೀಮ್ಸ್ ಆಸ್ಪತ್ರೆಯಿಂದ ಪೋನ್ ಮೂಖಾಂತರ ರಾಜಾಸಾಬ ಸಾ;-ಸಿದ್ರಾಂಪೂರು ಗ್ರಾಮ ಈತನು ಕ್ರಿಮಿನಾಷಕ ಸೇವನೆಯಿಂದ ಸೇರಿಕೆಯಾಗಿ ಮದ್ಯಾಹ್ನ 2-30 ಗಂಟೆಗೆ ಮೃತಪಟ್ಟಿರುತ್ತಾನೆಂದು ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ಮೃತ ರಾಜಾಸಾಬನ ಮೃತ ದೇಹವನ್ನು ಪರಿಶೀಲಿಸಿ,ಹಾಜರಿದ್ದ ಮೃತನ ಹೆಂಡತಿ ಮೈಮೂದ ಈಕೆಯನ್ನು ವಿಚಾರಿಸಿದ್ದು,ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು, ಸಾರಾಂಶವನೆಂದರೆ,ತನ್ನ ಅತ್ತೆ ಖಾಸಿಂಭೀ ಈಕೆಯ ಹೆಸರಿನಲ್ಲಿ ಸಿದ್ರಾಂಪೂರು ಸೀಮಾದಲ್ಲಿ ಸರ್ವೆ ನಂ.117 ರಲ್ಲಿ 1 ಎಕರೆ ಜಮೀನು ಇದ್ದು. ಮಾವ ಪೀರಸಾಬನಿಗೆ ವಯಸ್ಸಾಗಿದ್ದರಿಂದ ತನ್ನ ಗಂಡನೆ ಸಾಗುವಳಿ ಮಾಡಿಕೊಂಡಿದ್ದನು.ಅಲ್ಲದೆ ವಿರುಪಾಕ್ಷಗೌಡ ಹಂಚಿನಾಳ ಇವರ 7-ಎಕರೆ 35 ಗುಂಟೆ ಜಮೀನನ್ನು ಸಹ ಕಳೆದ 4-5 ವರ್ಷಗಳಿಂದ ಲೀಜಿಗೆ ಮಾಡಿಕೊಂಡು ಬಂದಿದ್ದು, ಕಳೆದ 4 ವರ್ಷಗಳಿಂದ ತಮ್ಮ ಮತ್ತು ಲೀಜಿಗೆ ಮಾಡಿದ ಹೊಲದಲ್ಲಿ ಬೆಳೆದ ಭತ್ತದ ಬೆಳೆ ಸರಿಯಾಗಿ ಮಳೆ,ನೀರು ಇಲ್ಲದೆ ಇಳುವರಿ ಕಡಿಮೆಯಾಗಿ ಲುಕ್ಸಾನಾಗಿತ್ತು.ರಾಜಾಸಾಬನು ರೈತ ಸೇವಾ ಸಹಕಾರಿ ಬ್ಯಾಂಕ ಹಂಚಿನಾಳ ಕ್ಯಾಂಪಿನಲ್ಲಿ 11,000/-ರೂ ಬೆಳೆ ಸಾಲ ಹಾಗೂ ಗೊಬ್ಬರ,ಎಣ್ಣೆಗಾಗಿ ಕೈಗಡವಾಗಿ 4-ಲಕ್ಷ ರೂ ಸಾಲ ಮಾಡಿದ್ದನು.ಹೊಲದಲ್ಲಿ ಬೆಳೆ ಸರಿಯಾಗಿ ಬಾರದ ಕಾರಣ ಮಾಡಿದ ಸಾಲ ತೀರಿಸಲಾಗದೆ.ದಿ.22.10.18 ರಂದು ಸಾಯಂಕಾಲ ರಾಜಾಸಾಬನು ಹೊಲ ನೋಡಿಕೊಂಡು ಬಂದು ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಪಕ್ಕದ ದನಕಟ್ಟುವ ಶೆಡ್ಡಿನಲ್ಲಿ ಹೋಗಿ ಕ್ರಿಮಿನಾಷಕ ಸೇವನೆ ಮಾಡಿದ್ದು. ಚಿಕಿತ್ಸೆ ಕುರಿತು ಕಾರಟಗಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೆವು.ಅಲ್ಲಿಂದ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು.ಗುಣಮುಖನಾಗದ ಕಾರಣ ದಿ.25.10.18 ರಂದು ಮರಳಿ ಗಂಗಾವತಿಯ ವರಸಿದ್ದಿ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು,ಇಲ್ಲಿಯೂ ಸಹ ಚೇತರಿಸಿಕೊಳ್ಳದೆ ಸಿರಿಯಾಸ್ ಆದ ಕಾರಣ ಇಂದು ದಿ.05.11.2018 ರಂದು ಗಂಗಾವತಿಯಿಂದ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಇಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಕಿಮ್ಸ್ ಆಸ್ಪತ್ರೆಯ ಹತ್ತಿರ ಮೃತ ಪಟ್ಟಿರುತ್ತಾನೆ.ನನ್ನ ಗಂಡ ರಾಜಾಸಾಬನು ಸಾಲದ ಬಾದೆಯಿಂದ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಮರಳಿ ಠಾಣೆಗೆ ಬಂದು ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡಿದೆ.
5ee0874c09b5ef18c7fa779b5b21898c.jpg

ಪ್ರಕರಣ ಸಂಕ್ಷಿಪ್ತ ಸಾರಾಂಶ:-ಇಂದು ದಿನಾಂಕ:- 06/11/2018 ರಂದು ರಾತ್ರಿ 01-00 ಗಂಟೆಗೆ ಪಿ ಎಸ್ ಐ ಸಾಹೇಬರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 05-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.ಇಂದು ದಿ;-05/11/2018 ರಂದು ನಾನು ಠಾಣೆಯಲ್ಲಿರುವಾಗ  ಗುಡದೂರು ಗ್ರಾಮದ ಸುಂಕಲಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಮಹಾದೇವಯ್ಯ ಎ ಎಸ್ ಐ ಪಿ.ಸಿ.697,550,174,128,80,34 ರವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ಗುಡದೂರು ಗ್ರಾಮಕ್ಕೆ  ಹೋಗಿ ಮರೆಯಾಗಿ ನಿಂತು ನೋಡಲಾಗಿ ಸುಂಕಲಮ್ಮ ಗುಡಿಯ ಪಕ್ಕದ  ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 05 ಜನ  ಸಿಕ್ಕಿಬಿದ್ದಿದ್ದು  ಕೆಲವರು ಓಡಿ ಹೋಗಿದ್ದು ಓಡಿ ಹೋದವರ ಹೆಸರು ವಿಚಾರಿಸಲಾಗಿ ಆರೋಪಿ ನಂಬರ 6 ಈತನ ಹೆಸರು ತಿಳಿದು ಬಂದಿರುತ್ತದೆ.  ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ 20780 /- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಈ ದಿವಸ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಠಾಣಾ ಗುನ್ನೆ ನಂ.135/2018 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
d2e11d883e6cb3294c30f2144aaf1b12.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ :  ದಿನಾಂಕ: 06-11-2018 ರಂದು 9-45 ಎ.ಎಂ ಕ್ಕೆ ಠಾಣಾ ಎ.ಎಸ್.ಐ (ಹೆಚ್ ) ರವರು ಒಂದು ಅಕ್ರಮ ಮರಳು ಜಪ್ತಿ ಪಂಚನಾಮೆ ವರದಿ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರುಪಡಿಸಿದ್ದುದರ ಸಾರಾಂಶವೇನೆಂದರೆಇಂದು ದಿನಾಂಕ: 05-11-2018 ರಂದು ಬೆಳಿಗ್ಗೆ ಬೀಟ್ ನಂ.17 ರ ಬೀಟ್ ಪಿಸಿ-95 ರವರಿಂದ ಹಂಪನಾಳ ಹಳ್ಳದಲ್ಲಿ ಟ್ರಾಕ್ಟರ್ ಗಳಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಮಾನ್ಯ ಸಿಪಿಐ ಸಿಂಧನೂರು ಸಾಹೇಬರ ನಿರ್ದೇಶನದಂತೆ ನಾನು ಹಾಗೂ ಪಿಸಿ-95, 99 ರವರೊಂದಿಗೆ ಇಬ್ಬರು ಪಂಚರ ಸಮಕ್ಷಮ ದಾಳಿ ಕುರಿತು ಹಂಪನಾಳ ಹಳ್ಳಕ್ಕೆ ಹೋಗುತ್ತಿದ್ದಾಗ ಹಳ್ಳದ ಬ್ರಿಡ್ಜ್  ಹತ್ತಿರ ರಸ್ತೆಗೆ ಬರುತ್ತಿದ್ದ ಒಂದು Mahindra 575 DI Tractor Eng No. ZJA2MBA2251 ನೇದ್ದರ ಚಾಲಕನು ಟ್ರಾಕ್ಟರ್ ಗೆ ಅಟ್ಯಾಚ್ ಇದ್ದ ಟ್ರಾಲಿ Chassis No. YKEW 200/2018 ನೇದ್ದರಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದುದನ್ನು ನೋಡಿ 8-00 .ಎಂ ಕ್ಕೆ ದಾಳಿ ಮಾಡಲು ಟ್ರಾಕ್ಟರ್ ಚಾಲಕನು ಸ್ಥಳದಿಂದ ಓಡಿ ಹೋಗಿದ್ದುಸದರಿ ಚಾಲಕನು ತಮ್ಮ ಟ್ರಾಕ್ಟರ್ ಮಾಲೀಕನ ಮಾತು ಕೇಳಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಹಳ್ಳದಲ್ಲಿ ಕಳ್ಳತನದಿಂದ ಮರಳು ತುಂಬುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಖಾತ್ರಿಯಾಗಿದ್ದುದರಿಂದ ಸದರಿ ಟ್ರಾಕ್ಟರ್ ಹಾಗೂ ಕಳ್ಳತನದ ಮರಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಹಾಜರುಪಡಿಸಿದ ಮೇರೆಗೆ ಪ್ರ.ವ ವರದಿ ಜಾರಿ ಮಾಡಿದ್ದು ಇದೆ.
5a66a9c471aab75410add40637f5f612.jpg

ಪ್ರಕರಣದ ಸಂಕ್ಷಿಪ್ತ ಸಾರಾಂಶ :-ದಿನಾಂಕ: 06-11-2018 ರಂದು 09-20 .ಎಮ್ ಸುಮಾರಿಗೆ ಸಿಂಧನೂರು-ಸಿರುಗುಪ್ಪ ಮುಖ್ಯ ರಸ್ತೆಯ ಸಾಸಲಮರಿ ಕ್ಯಾಂಪಿನ  ರಾಮಬಾಬು ರವರ ಮನೆಯ ಹತ್ತಿರದ ರಸ್ತೆ ಪಕ್ಕ ನಾಗೇಶ್ವರ ರಾವ್ ರವರ ಹೊಲದ ಮುಂದಿನ ರಸ್ತೆಯಲ್ಲಿ ಆರೋಪಿ 1 ಇತನು ತನ್ನ ಮೋ.ಸೈ ನಂ KA-36-EA-3203 ನೇದ್ದರ ಹಿಂದುಗಡೆ ಮೃತ ಹುಲಗೇಶನನ್ನು ಕೂಡಿಸಿಕೊಂಡು ತನ್ನ ಮೋ.ಸೈನ್ನು ಅತೀವೇಗ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಹೋಗಿ ತನ್ನ ಹೊಲದ ರಸ್ತೆಯ ಕಡೆ ಹೋಗಲು ಒಮ್ಮಲೆ ಯಾವುದೆ ಇಂಡಿಕೇಟರ್ ಇನ್ನಿತರ ಸಿಗ್ನಲ್ ಕೊಡದೇ ತಿರುಗಿಸಿದಾಗ ಹಿಂದುಗಡೆ ಸಾಸಲಮರಿ ಕ್ಯಾಂಪಿನ ಕಡೆಯಿಂದ ಆರೋಪಿ 2 ಇತನು ತನ್ನ ಮೋ.ಸೈ ನಂ KA-36-Y-953 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ನಿಯಂತ್ರಿಸದೇ ಮುಂದೆ ತಿರುಗುತಿದ್ದ ಮೋಟರ ಸೈಕಲ್ಲಿಗೆ  ಪರಸ್ಪರ ಟಕ್ಕರ ಕೊಟ್ಟ ಪರಿಣಾಮವಾಗಿ ಆರೋಪಿ 1 ಇತನಿಗೆ ಗದ್ದಕ್ಕೆ ಒಳಪೆಟ್ಟು.ಎರಡು ಕಾಲಿನ ಮೋಣಕಾಲಿಗೆ ರಕ್ತಗಾಯ ಮತ್ತು ಎಡಗಾಲ ಪಾದಕ್ಕೆ ತರೆಚಿದಗಾಯ ಹಾಗೂ ಮೋಟರ್ ಸೈಕಲ್ ಹಿಂದೆ ಕುಳಿತ ಮೃತ ಹುಲಗೇಶನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟು.ಬಲಗಡೆಯ ಕಪಾಳಕ್ಕೆ ಭಾರಿ ಒಳಪೆಟ್ಟು ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10-15 ಗಂಟೆಗೆ  ಮೃತಪಟ್ಟಿದ್ದು. ಆರೋಪಿ 2 ಸುಬ್ರಹ್ಮಣನಿಗೆ ತಲೆಗೆ ಮತ್ತು ಬಲಗಡೆಯ ಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟು ಆಗಿದ್ದು ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿ ಕಳುಹಿಸಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 55/2018 ಕಲಂ 279.337.338.304() .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2ab1f713ea680874833a38d5507e0056.jpg

ಪ್ರಕರಣ ಸಾರಾಂಶ:- ದಿನಾಂಕ.06-11-2018 ರಂದು ಸಂಜೆ 06-00 ಗಂಟೆಗೆ ಫಿರ್ಯಾದಿದಾರನು ಪೊಲೀಸ್ ಠಾಣೆಗೆ ಹಾಜರಾಗಿ ನೀಡುದ ದೂರಿನ ಸಾರಾಂಶವೆನೆಂದರೆದಿನಾಂಕ 30-10-2018 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರ ಮತ್ತು ಆತನ ಮಕ್ಕಳು ಮತ್ತು ಆತನ ಅಣ್ಣ ಎಲ್ಲಾರು ಸೇರಿ ಹುಲಿಗೆಮ್ಮನ ಗುಂಡಿಯ ಮುಂದೆ ತಮ್ಮ ಹೊಲಕ್ಕೆ ಹೋಗುತ್ತಿರುವಾಗ ಆರೋಪಿತರೆಲ್ಲಾರು ಬಂದು ತಡೆದು ನಿಲ್ಲಿಸಿ ಆರೋಪಿ ಬಸವರಾಜನು ಬಸವರಾಜನಿಗೆ ಎಲೇ ಸೂಳೆ ಮಗನೆ ನಮ್ಮ ಮಗಳ ಪೊಟೋವನ್ನು ನಿನ್ನ ಜೊತೆಯಲ್ಲಿ ಸೇರಿಸಿಕೊಂಡು ಯಾಕೆ ವಾಟ್ಸ್ ಆಪ್ ನಲ್ಲಿ ಹಾಕಿದ್ದಿಯಲೇ ಅಂತಾ ಬೈದು ಕಟ್ಟಿಗೆಯಿಂದ ಎಡಗೈ ಮೊಣಕೈ ಹತ್ತಿರ ಹೊಡೆದು ರಕ್ತಗಾಯಗೊಳಿಸಿ ದೇವಿಂದ್ರಪ್ಪನಿಗೆ ಆರೋಪಿ ಯಲ್ಲಪ್ಪನು ಕಟ್ಟಿಗೆಯಿಂದ ತಲೆಗೆ ಹೊಡೆದುಪಿರ್ಯಾದಿ ರಾಮಸ್ವಾಮಿಗೆ ಸಣಜೀವಪ್ಪನು ಕೈಯಿಂದ ಕಲ್ಲಿನಿಂದ ಹೊಡೆದುದುರಗಯ್ಯನಿಗೆ ಯಂಕೋಬನು ಕಟ್ಟಿಗೆಯಿಂದ ಹೊಡೆದು ರಕ್ತಗಾಯಗಿಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಪ್ರಕಾರ ಕ್ರಮ ಕೈಗೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
ed44201a5d562910eb79468b0431ff7e.jpg

ಇಂದು ದಿನಾಂಕ:06.11.2018 ರಂದು ರಾತ್ರಿ 7.30 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರಳಿಗೆ ಈಗ್ಗೆ ಸುಮಾರು 20 ವರ್ಷಗಳಿಂದೆ ಕಾಚಾಪೂರು ಗ್ರಾಮದ ಚನ್ನಪ್ಪನೊಂದಿಗೆ ಮದುವೆಯಾಗಿದ್ದು ಮದುವೆಯಾಗಿ ಸುಮಾರು 10 ವರ್ಷಗಳ ಕಾಲ ಗಂಡ ಹೆಂಡತಿ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ಸದ್ಯ ಒಂದು ಗಂಡು ಒಂದು ಹೆಣ್ಣು ಮಗು ಇರುತ್ತದೆ. ಆರೋಪಿತನು ಸಂಸಾರದ ವಿಷಯದಲ್ಲಿ ದಿನಾಲು ಪಿರ್ಯಾದಿದಾರಳೊಂದಿಗೆ ಜಗಳ ತಗೆದು ಹೊಡೆ ಬಡೆ ಮಾಡಿ ಮಾನಸಿಕವಾಗ & ದೈಹಿಕವಾಗಿ ಕಿರುಕುಳ ನೀಡಿದ್ದರಿಂದ ಪಿರ್ಯಾದಿದಾರಳು ತನ್ನ ತವರು ಮನೆಗೆ ಹೋಗಿದ್ದು ನಂತರ ಪಿರ್ಯಾದಿದಾರಳನ್ನ ಆರೋಪಿತನು ವಾಪಾಸ ತನ್ನ ಮನೆಗೆ ಕರದುಕೊಂಡು ಬಂದಿದ್ದು ಇರುತ್ತದೆ. ನಂತರ ಆರೋಪಿತನು ಪಿರ್ಯಾದಿದಾರಳಿಗೆ ನಿನ್ನ ತವರು ಮನೆಯಿಂದ ನಿನ್ನ ಬಾಗಕ್ಕೆ ಬಂದಂತಹ ಒಂದು ಎಕರೆ ಜಮೀನಿನನ್ನು ಮಾರಾಟ ಮಾಡಿಕೊಂಡು ಅದರಿಂದ ಬಂದಂತಹ ಹಣವನ್ನು ನನಗೆ ತಂದು ಕೊಡು ಅಂತಾ ಆರೋಪಿತನು  ದಿನಾಲು ಮಾನಸಿಕವಾಗಿ & ದೈಹಿಕವಾಗಿ  ಹೊಡೆ ಬಡೆ ಮಾಡಿ ಕಿರುಕುಳ  ನೀಡುತ್ತಿದ್ದು ಇರುತ್ತದೆ. ದಿ:01.11.2018 ರಂದು ರಾತ್ರಿ 10.00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಮನೆಯಲ್ಲಿ ತನ್ನ  ಮಕ್ಕಳೊಂದಿಗೆ ಮಲಗಿಕೊಂಡಿದ್ದಾಗ ಆರೋಪಿತನು ಅಲ್ಲಿಗೆ ಬಂದು ಪಿರ್ಯಾದಿದಾರಳೊಂದಿಗೆ ಜಗಳ ತಗೆದು  ನೀನು ನಿನ್ನ ಬಾಗಕ್ಕೆ ಬಂದಂತಹ ಜಮೀನಿನನ್ನು ಮಾರಿಕೊಂಡು ಬರಲಿಲ್ಲ ಸೂಳೆ ಗರತಿ ಅಂತಾ ಅವಾಚ್ಯವಾಗಿ ಬೈದು  ಮಾನಸಿಕವಾಗಿ & ದೈಹಿಕವಾಗಿ  ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಮನೆ ಬಿಟ್ಟು ಹೊರ ಹಾಕಿ ನಿನ್ನ ಬಾಗಕ್ಕೆ ಬಂದಂತಹ ಜಮೀನನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣವನ್ನು ನನಗೆ ತಂದು ಕೊಡದಿದ್ದರೆ ನೀನಗೆ ಜೀವ ಸಹೀತ ಬೀಡುವುದಿಲ್ಲ ಪೆಟ್ರೋಲ್ ಹಾಕಿ ಸುಟ್ಟು ಬೀಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಸದರಿ ಜಗಳವು ಸಮಾಜದ ಹಿರಿಯರಿಂದ ಬಗೆಹರಿಯದ ಕಾರಣ ಇಂದು ತಡವಾಗಿ ಪೊಲೀಸ ಠಾಣೆಗೆ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ae6cb25af78736af1876825dad2fcf45.jpg

ಪ್ರಕರಣದ ಸಾರಾಂಶ: ಅಂದಾಜು 45-50 ವರ್ಷದ ಅನಾಥ ಸ್ತ್ರೀಯು ಈಗ್ಗೆ 2-3 ವರ್ಷಗಳಿಂದ ಅಂಬಾಮಠದಲ್ಲಿ ದೇವಸ್ಥಾನದ ಹತ್ತಿರ ಭಿಕ್ಷೆ ಬೇಡುತ್ತಾ ದೇವಸ್ಥಾನದ ಹತ್ತಿರ ವಾಸವಾಗಿದ್ದು, ಸದರಿಯವಳು ಈಗ್ಗೆ 10-15 ದಿನಗಳಿಂದ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೇ ಮತ್ತು ಯಾವುದೋ ಖಾಯಿಲೆಯಿಂದ ಬಳಲಿ ನಿಶ್ಯಕ್ತಳಾಗಿದ್ದು, ಸದರಿಯವಳನ್ನು ಅಂಬಾದೇವಿ ದೇವಸ್ಥಾನದ ಹತ್ತಿರದಿಂದ ಚಿದಾನಂದ ಮಠದ ಎದುರಿಗೆ ಇರುವ ಹೊನ್ನಾಳಪ್ಪನ ಗವಿಕಟ್ಟೆಯ ಮೇಲೆ ಹಾಕಿದ್ದು, ಸದರಿಯವಳು ಹೊಟ್ಟೆಗೆ ಊಟವಿಲ್ಲದೇ ಮತ್ತು ಯಾವುದೋ ಖಾಯಿಲೆಯಿಂದ ಬಳಲಿ ದಿನಾಂಕ:                 06-11-2018 ರಂದು ಮದ್ಯಾಹ್ನ 12-00 ಗಂಟೆಯ ನಂತರದಿಂದ ಮದ್ಯಾಹ್ನ 1-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಮೃತಪಟ್ಟಿರುತ್ತಾಳೆ . ಮೃತಳ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲವೆಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಯುಡಿಆರ  ನಂ.33/2018, ಕಲಂ.174 ಸಿ.ಆರ್.ಪಿ.ಸಿ ರೀತ್ಯ ದಾಖಲಿಸಿರುತ್ತೇನೆ.
a68b991a76b7d8504d9ba626b1ae0577.jpg

ದಿನಾಂಕ  06/11/2018 ರಂದು ಸಾಯಾಂಕಾಲ 5-00 ಗಂಟೆಗೆ ನಾನು ಠಾಣೆಯ ಚಾಂದಪಾಶಾ ಪಿ.ಸಿ 686 ರವರಿಗೆ ಕರೆದುಕೊಂಡು ಮಾನವಿ  ನಗರದಲ್ಲಿ ಪೆಟ್ರೊಲಿಂಗ್  ಕರ್ತವ್ಯದಲ್ಲಿದ್ದಾಗ ಇಂದು ದಿನಾಂಕ 06/11/18 ರಂದು ಸಾಯಾಂಕಾಲ    5-30 ಗಂಟೆಯ ಸುಮಾರಿಗೆ ಪೆಟ್ರೊಲಿಂಗ್ ಮಾಡುತ್ತಾ ಮಾನವಿ ಬಸ್ ಸ್ಟಾಂಡ್ ಹತ್ತಿರ ಬಂದಾಗ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು  ಕೂಡಲೇ ಮೋಟರ್ ಸೈಕಲನ್ನು ನಿಲ್ಲಿಸಿ ಅವನ ಹತ್ತಿರ ಹೋಗಲು ಅವನು ಸಮವಸ್ತದಲ್ಲಿದ್ದ ನಮ್ಮನ್ನು ನೋಡಿ ತನ್ನ ಇರುವಿಕೆಯನ್ನು ಮರೆಮಾಚುತಿದ್ದು ಓಡಿ ಹೋಗಲು ಪ್ರಯತ್ನಿಸಿದಾಗ  ನಾವು ಅವನನ್ನು ಹಿಡಿದುಕೊಂಡು ಸದರಿಯವನ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರನ್ನು ತಪ್ಪು ತಪ್ಪಾಗಿ ತಡವರಿಸಿ ಹೇಳುತಿದ್ದು  ಸದರಿಯವನಿಗೆ ಪುನಃ ಪುನಃ ವಿಚಾರಿಸಿದಾಗ ತನ್ನ ಹೆಸರು ರಾಜೇಶ್ ತಂದೆ ನಾಗೇಶ್ವರಾವ್ ವಯಾಃ 19 ವರ್ಷ ಜಾತಿಃ ಯರ್ರಕುಲಂ ಸಾಃ ಕಲ್ಲೂರು ಏರಿಯಾ ಕರ್ನೂಲ್  ತೆಲಂಗಾಣ ರಾಜ್ಯ   ಅಂತಾ ತಿಳಿಸಿದಿದ್ದು  ಸದ್ರಿಯವನಿಗೆ ಅಲ್ಲಿ ಇರುವಿಕೆಯ ಬಗ್ಗೆ ಹಾಗೂ ಇಲ್ಲಿ ನಿಂತ ಬಗ್ಗೆ ವಿಚಾರಿಸಲು ಸದ್ರಿಯವನು ತನ್ನ ಇರುವಿಕೆಯ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರವನ್ನು ನೀಡದ ಕಾರಣ ಸದರಿಯವನಿಗೆ ಹಾಗೆಯೇ ಬಿಟ್ಟಲ್ಲಿ ಅವನು ಯಾವುದೋ ಸ್ವತ್ತಿನ ಅಪರಾಧ ಮಾಡುವ ಉದ್ದೇಶದಿಂದ ಇದ್ದ ಬಗ್ಗೆ ಬಲವಾದ ಸಂಶಯ ಬಂದಿದ್ದರಿಂದ ಸದ್ರಿಯವನನ್ನು ಸಾಯಾಂಕಾಲ 5-45 ಗಂಟೆಗೆ ತಾಬಾಕ್ಕೆ ಪಡೆದುಕೊಂಡು ಸಾಯಾಂಕಾಲ  6-00 ಗಂಟೆಗೆ ಪೊಲೀಸ್ ಠಾಣೆಗೆ ಬಂದು ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಅವನು ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಾದ್ಯತೆ ಇದ್ದುದ್ದರಿಂದ ಮುಂಜಾಗ್ರತ ಕ್ರಮವಾಗಿ ಸದರಿಯವನ ವಿರುದ್ದ ಮಾನವಿ ಠಾಣೆ  PAR ನಂ  27/2018 ಕಲಂ 109 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ
15784bd1338269376e27138e16d0276e.jpg

ದಿನಾಂಕ 10-11-2018 ರಂದು ಸರ್ಕಾರದ ವತಿಯಿಂದ ಆಚರಿಸಲಾಗುವ ಟಿಪ್ಪು  ಸುಲ್ತಾನ ಜಯಂತಿ ಅಂಗವಾಗಿ ಆ ಸಮಯದಲ್ಲಿ ಯಾವುದೇ ರೀತಿಯ ಅಹಿತರಕ ಘಟನೆಗಳು ಜರುಗದಂತೆ ನೋಡಿಕೊಳ್ಳುವ ಸಲುವಾಗಿ ಮಾನವಿ ಪಟ್ಟಣದಲ್ಲಿ  ಪೆಟ್ರೊಲಿಂಗ್ ಕುರಿತು  ಇಂದು ದಿನಾಂಕ 06-11-2018 ರಂದು ಮಧ್ಯಾಹ್ನ 2-00 ಗಂಟೆಗೆ ಹೊರಟು ಮಾನವಿ ಪಟ್ಟಣದಲ್ಲಿ  ಮಧ್ಯಾಹ್ನ 3-30 ಗಂಟೆಯವರೆಗೆ ಪೆಟ್ರೊಲಿಂಗ್ ಮಾಡಿ ಪೊಲೀಸ್ ಬಾತ್ಮಿದಾರರಿಗೆ ಹಾಗೂ ಸಾರ್ವಜನಿಕರಿಗೆ ಸಂಪರ್ಕಿಸಿ ಗುಪ್ತವಾಗಿ ವಿಚಾರಿಸಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೇನೆಂದರೆ ಮೇಲ್ಕಂಡ ರೌಡಿ ಶೀಟ್ ದಾರರು ಟಿಪ್ಪು ಸುಲ್ತಾನ  ಜಯಂತಿ ಸಮಯದಲ್ಲಿ ಕೋಮು ಸಾಮರಸ್ಯಕ್ಕೆ ದಕ್ಕೆಯನ್ನುಂಟು ಮಾಡಿ ಗಲಬೆಗಳನ್ನುಂಟು ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿ ಸಮಾಜದಲ್ಲಿ ಶಾಂತಿ ಕದಡಿಸುವ ಸಾಧ್ಯತೆಗಳಿರುತ್ತವೆ ಅಂತಾ ತಿಳಿದು ಬಂದಿದ್ದು ಇರುತ್ತದೆ. ಕಾರಣ  ಟಿಪ್ಪು ಸುಲ್ತಾನ ಜಯಂತಿ ಶಾಂತಿಯುತವಾಗಿ ಜರುಗುವ ದೃಷ್ಟಿಯಿಂದ  ಹಾಗೂ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ  ನಿಟ್ಟಿನಲ್ಲಿ  ಈ ಮೇಲ್ಕಂಡ ಜನರು ಮೇಲೆ ಮುಂಜಾಗ್ರತೆ ಅಂಗವಾಗಿ ಕ್ರಮ ಕೈ ಕೊಳ್ಳುವದು ಅವಶ್ಯಕ ಅಂತಾ ಕಂಡು ಬಂದ ಕಾರಣ ಇಂದು ದಿನಾಂಕ 06/11/18 ರಂದು ಮಧ್ಯಾಹ್ನ 4-00 ಗಂಟೆಗೆ ವಾಪಾಸ ಠಾಣೆಗೆ ಬಂದು ಸ್ವಂತ ದೂರಿನ ಮೇಲಿಂದ ಮಾನವಿ ಠಾಣಾ ಪಿ..ಆರ್  ನಂ 26/2018 ಕಲಂ 107 ಸಿ.ಅರ್.ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ
1b6dae51e627525c730fc77647f47708.jpg

ದಿನಾಂಕ 10-11-2018 ರಂದು ಸರ್ಕಾರದ ವತಿಯಿಂದ ಆಚರಿಸಲಾಗುವ ಟಿಪ್ಪು  ಸುಲ್ತಾನ ಜಯಂತಿ ಅಂಗವಾಗಿ ಆ ಸಮಯದಲ್ಲಿ ಯಾವುದೇ ರೀತಿಯ ಅಹಿತರಕ ಘಟನೆಗಳು ಜರುಗದಂತೆ ನೋಡಿಕೊಳ್ಳುವ ಸಲುವಾಗಿ ಮಾನವಿ ಪಟ್ಟಣದಲ್ಲಿ  ಪೆಟ್ರೊಲಿಂಗ್ ಕುರಿತು  ಇಂದು ದಿನಾಂಕ 06-11-2018 ರಂದು ಬೆಳಿಗ್ಗೆ 10-00 ಗಂಟೆಗೆ ಹೊರಟು ಮಾನವಿ ಪಟ್ಟಣದಲ್ಲಿ  ಮಧ್ಯಾಹ್ನ 12-00 ಗಂಟೆಯವರೆಗೆ ಪೆಟ್ರೊಲಿಂಗ್ ಮಾಡಿ ಪೊಲೀಸ್ ಬಾತ್ಮಿದಾರರಿಗೆ ಹಾಗೂ ಸಾರ್ವಜನಿಕರಿಗೆ ಸಂಪರ್ಕಿಸಿ ಗುಪ್ತವಾಗಿ ವಿಚಾರಿಸಿ ಮಾಹಿತಿ ಸಂಗ್ರಹಿಸಲಾಗಿ ತಿಳಿದು ಬಂದಿದ್ದೇನೆಂದರೆ ಮೇಲ್ಕಂಡ ರೌಡಿ ಶೀಟ್ ದಾರರು ಟಿಪ್ಪು ಸುಲ್ತಾನ  ಜಯಂತಿ ಸಮಯದಲ್ಲಿ ಕೋಮು ಸಾಮರಸ್ಯಕ್ಕೆ ದಕ್ಕೆಯನ್ನುಂಟು ಮಾಡಿ ಗಲಬೆಗಳನ್ನುಂಟು ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿ ಸಮಾಜದಲ್ಲಿ ಶಾಂತಿ ಕದಡಿಸುವ ಸಾಧ್ಯತೆಗಳಿರುತ್ತವೆ ಅಂತಾ ತಿಳಿದು ಬಂದಿದ್ದು ಇರುತ್ತದೆ. ಕಾರಣ  ಟಿಪ್ಪು ಸುಲ್ತಾನ ಜಯಂತಿ ಶಾಂತಿಯುತವಾಗಿ ಜರುಗುವ ದೃಷ್ಟಿಯಿಂದ  ಹಾಗೂ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ  ನಿಟ್ಟಿನಲ್ಲಿ  ಈ ಮೇಲ್ಕಂಡ ಜನರು ಮೇಲೆ ಮುಂಜಾಗ್ರತೆ ಅಂಗವಾಗಿ ಕ್ರಮ ಕೈ ಕೊಳ್ಳುವದು ಅವಶ್ಯಕ ಅಂತಾ ಕಂಡು ಬಂದ ಕಾರಣ ಇಂದು ದಿನಾಂಕ 06/11/18 ರಂದು ಮಧ್ಯಾಹ್ನ 12-30 ಗಂಟೆಗೆ ವಾಪಾಸ ಠಾಣೆಗೆ ಬಂದು ಸ್ವಂತ ದೂರಿನ ಮೇಲಿಂದ ಮಾನವಿ ಠಾಣಾ ಪಿ..ಆರ್  ನಂ 25/2018 ಕಲಂ 107 ಸಿ.ಅರ್.ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ
86fb66a7df3605f46fa5a694b91458f0.png

ಈ ಪ್ರಕರಣದಲ್ಲಿ  ಫಿರ್ಯಾಧಿದಾರನ ಮಗನಾದ ವಿಜಯ ಇತನು ದಿನಾಂಕ :-ದಿ.24-09-2018 ರಂದು ಬೆಳಿಗ್ಗೆ 10-00 ಗಂಟೆ ಸುಮಾರು ಮಲ್ಲಟ ಗ್ರಾಮದ ತಮ್ಮ ಮನೆಯಿಂದ ಹೊಲಕ್ಕೆ ಹೊಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೊದಾತ ತಿರುಗು ಮರಳಿ ಮನಗೆ ಬಾರದೆ ಕಾಣೆಯಾಗಿರುತ್ತಾನೆ ಅಂತಾ ಇರುತ್ತದೆ ಫಿರ್ಯಾಧಿ ಮತ್ತು ಅವರ ಮನೆಯವರು ಹುಡುಕಾಡಿ ತಡವಾಗಿ ಇಂದು ಠಾಣೆಗೆ ಬಂದು ಗಣಕಿಕೃತ ಮಾಡಿದ ದೂರನ್ನು ಕೊಟ್ಟಿದ್ದು ಅದರಲ್ಲಿಯ ಸಾರಾಂಶದ ಮೇಲಿಂದ ಪ್ರ..ವರದಿ ಜಾರಿ ಮಾಡಿದೆ