ಪತ್ರಿಕಾ ಪ್ರಕಟಣೆಗಳು

 • 29
 • May

On 29.05.2019 conducted Traffic rules awareness programs to Goods vehicle owners and driver

On 29.05.2019 conducted Traffic rules awareness programs to Goods vehicle owners and driver BY District Police, RTO. Labour Inspector Education department,


 • 01
 • Mar

ಸಿರುವಾರ ಪೊಲೀಸರ ಯಶಸ್ವಿ ಕಾರ್ಯಚರಣೆ, ಐದು ಜನ ದರೋಡೆಕೊರರ ಬಂಧನ, ರೂ 1,54,000/- ನಗದು ಹಣ ವಶ

ಸಿರುವಾರ ಪೊಲೀಸರ ಯಶಸ್ವಿ ಕಾರ್ಯಚರಣೆ, ಐದು ಜನ ದರೋಡೆಕೊರರ ಬಂಧನ, ರೂ 1,54,000/- ನಗದು ಹಣ ವಶ


 • 16
 • Dec

ಕುಖ್ಯಾತ ಅಂತರ್ ರಾಜ್ಯ ಕಳ್ಳರ ಬಂಧನ

ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ, ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿರುವ ರೈಸ್ ಮಿಲ್ ಗಳು, ಹ್ಯುಂಡೈ ಶೋ ರೂಮ್, ಗ್ರಾನೈಟ್ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಮೇಲಿಂದ ಮೇಲೆ ಸರಣಿ ಕಳ್ಳತನ ಪ್ರಕರಣಗಳು ಸಂಭವಿಸಿದ್ದವು. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ಹನುಮರಡ್ಡೆಪ್ಪ ಸಿ.ಪಿ.ಐ. ಗ್ರಾಮೀಣ ವೃತ್ತ ರಾಯಚೂರು, ಮತ್ತು ಶ್ರೀ ಚಂದ್ರಶೇಖರ ಸಿ.ಪಿ.ಐ. ಮಾನವಿ ಹಾಗೂ ಶ್ರೀ ನಿಂಗಪ್ಪ ಪಿಎಸ್ಐ ರಾಯಚೂರು ಗ್ರಾಮೀಣ, ಶ್ರೀ ಮಲ್ಲಿಕಾರ್ಜುನ ಇಕ್ಕಳಕಿ ಪಿಎಸ್ಐ ಮಾರ್ಕೆಟ್ ಯಾರ್ಡ್, ಶ್ರೀ ಸಾಬಯ್ಯ ಪಿಎಸ್ಐ ಗಬ್ಬೂರು ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರನ್ನೊಳಗೊಂಡಂತೆ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ರಚನೆ ಮಾಡಿದ ಎರಡೂ ತಂಡಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ವರದಿಯಾದ ಪ್ರಕರಣಗಳ ಬಗ್ಗೆ ತನಿಖೆ ಮಾಡಿ ಘಟನಾ ಸ್ಥಳದಲ್ಲಿ ದೊರೆತ ಸಿ.ಸಿ. ಟಿವಿ ಕ್ಯಾಮೇರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಆಧಾರಿಸಿ ಮಹಾರಾಷ್ಟ್ರ ರಾಜ್ಯದ ಸೋಲಾಪೂರು ಜಿಲ್ಲೆಯ 1] ಬಾಲು ದೇವಿದಾಸ್ ಕಾಳೆ ತಂದೆ ದೇವಿದಾಸ್ ಕಾಳೆ ವ||38ವರ್ಷ, ಜಾ||ಹಿಂದು ಪಾರ್ಧಿ, ಉ||ತೂಫಾನ್ ಕ್ರೂಜರ್ ಚಾಲಕ ಕೆಲಸ ಸಾ||ತಳೆ ಹಿಪ್ಪರಗ, ತಾ||ಉತ್ತರ ಸೋಲಾಪೂರು, ಜಿ||ಸೋಲಾಪೂರು 2] ಸಾಗರ ಭಾರತ್ ಪವಾರ್ ತಂದೆ ಭಾರತ್ ಪವಾರ್ ವ||24ವರ್ಷ, ಜಾ||ಹಿಂದು ಪಾರ್ಧಿ, ಉ||ಸಫಾಯಿ ಕರ್ಮಚಾರಿ ಸಾ||ಮಾಹಿ ನಗರ, ತಾ||ಮಾಳೀಸಿರಸ್, ಜಿ||ಸೋಲಾಪೂರು ರಾಜ್ಯ||ಮಹಾರಾಷ್ಟ್ರ, ರವರನ್ನು ಬಂಧಿಸಿದ ವಿಚಾರಣೆಗೊಳಪಡಿಸಿ ಒಟ್ಟು 13 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು ದಸ್ತಗಿರಿಯಾದ ಇಬ್ಬರು ಆರೋಪಿತರಿಂದ 64 ಗ್ರಾಮ್ ಬಂಗಾರದ ಆಭರಣಗಳು ಅ.ಕಿ.ರೂ.1,92,000/-, 250 ಗ್ರಾಮ್ ಬೆಳ್ಳಿ ಆಭರಣಗಳು ಅ.ಕಿ.ರೂ.15000/- ಮತ್ತು ನಗದು ಹಣ ರೂ.1,70,000/- ಹೀಗೆ ಎಲ್ಲಾ ಸೇರಿ ಒಟ್ಟು 3,77,000/- ಬೆಲೆ ಬಾಳುವ ವಸ್ತುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ತೂಫಾನ್ ಕ್ರೂಶರ್ ವಾಹನ ಸಂ:MH13/N7683 ನೇದ್ದನ್ನು ಸಹ ಜಪ್ತಿಪಡಿಸಿಕೊಂಡಿದ್ದು, ಕಳುವು ಮಾಡಲು ಉಪಯೋಗಿಸುತ್ತಿದ್ದ ಹಾರೆ ಮತ್ತು ಇನ್ನಿತರೆ ವಸ್ತುಗಳನ್ನು ಸಹ ಜಪ್ತಿಪಡಿಸಿಕೊಳ್ಳಲಾಗಿರುತ್ತದೆ. ಪ್ರಕರಣದಲ್ಲಿ ಭಾಗಿಯಾಗಿ ಉಳಿದ ಆರೋಪಿತರ ಬಗ್ಗೆ ನಿಖರವಾದ ಸುಳಿವು ದೊರೆತಿದ್ದು, ಅವರನ್ನೂ ಸಹ ಪತ್ತೆ ಮಾಡಿ ಬಂಧಿಸುವ ಕಾರ್ಯ ಮುಂದುವರೆದಿರುತ್ತದೆ. ಸಿ.ಪಿ.ಐ. ಗ್ರಾಮೀಣ, ಮತ್ತು ಸಿ.ಪಿ.ಐ. ಮಾನವಿ ರವರುಗಳ ತಂಡಗಳ ಕಾರ್ಯ ಸಾಧನೆಯನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು, ಉಳಿದ ಆರೋಪಿತರನ್ನು ಆದಷ್ಟು ಬೇಗನೇ ಪತ್ತೆ ಮಾಡಿ ಬಂಧಿಸಿ ತನಿಖೆಗೆ ಒಳಪಡಿಸಲಾಗುವುದು.


 • 16
 • Dec

ಭೂ-ವಿಜ್ಞಾನ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಚರಣೆಯಿಂದ ಉಸಿಕಿನ ನಕಲಿ ಪರ್ಮಿಟ್ ಭಾರಿ ಜಾಲ ಪತ್ತೆ ಪ್ರಕರಣ

ಭೂ-ವಿಜ್ಞಾನ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಚರಣೆಯಿಂದ ಉಸಿಕಿನ ನಕಲಿ ಪರ್ಮಿಟ್ ಭಾರಿ ಜಾಲ ಪತ್ತೆ ಪ್ರಕರಣ


 • 16
 • Dec

Taxi drivers meeting in Lingasugur sub division office

Taxi drivers meeting in sub division office


 • 01
 • Dec

ರಾಯಚೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ದಿನಾಂಕ 01.12.2018 ರಂದು ಅಪರಾಧ ತಡೆ ಮಸಾಚರಣೆ 2018 ಉದ್ಘಾಟನಾ ಸಮಾರಂಭ ಮಾನ್ಯ ಜಿಲ್ಲಾಧಿಕಾರಿಗಳಿಂದ ಜರುಗಿತು.

ರಾಯಚೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ದಿನಾಂಕ 01.12.2018 ರಂದು ಅಪರಾಧ ತಡೆ ಮಸಾಚರಣೆ 2018 ಉದ್ಘಾಟನಾ ಸಮಾರಂಭ ಮಾನ್ಯ ಜಿಲ್ಲಾಧಿಕಾರಿಗಳಿಂದ ಜರುಗಿತು.


 • 04
 • Nov

ಮಾನವಿ ಪೊಲೀಸರ ಕಾರ್ಯಚರಣೆ

ಮಾನವಿ ಪೊಲೀಸರ ಕಾರ್ಯಚರಣೆ :- ಅಂತರಾಜ್ಯ ಕಳ್ಳನ ಬಂದನ: ಮಾನ್ಯ ಶ್ರೀ.ಡಿ.ಕಿಶೋರ ಬಾಬು ಎಸ್.ಪಿ. ಸಾಹೇಬರು ರಾಯಚೂರು ಮತ್ತು ಮಾನ್ಯ ಹೆಚ್ಚುವರಿ ಎಸ್.ಪಿ. ಸಾಹೇಬರು ರಾಯಚೂರು ಮಾನ್ಯ ಡಿ. ಎಸ್.ಪಿ. ಸಾಹೇಬರು ಸಿಂಧನೂರು ಹಾಗು ಮಾನ್ಯ ಡಿ. ಎಸ್.ಪಿ. ಸಾಹೇಬರು ರಾಯಚೂರುರವರ ಮಾಗðದಶðನದಲ್ಲಿ ಜಿ.ಚಂದ್ರಶೇಕರ ಸಿ.ಪಿ.ಐ.ಮಾನವಿರವರ ಮತ್ತು ಅವರ ಸಿಬ್ಬಂದಿರವರಾದ ಮಾನವಿ ಠಾಣೆಯ ಗೋವಿಂದರಾಜ ಹೆಚ್.ಸಿ.132 ಹುಸೇನ ಸಾಬ ಪಿ.ಸಿ.290 ಸಿರವಾರ ಠಾಣೆಯ ದೇವಪ್ಪ ಪಿ.ಸಿ.584 ಹಾಗು ಸಿಂಧನೂರು ನಗರ ಠಾಣೆಯ ಮಹೆಬೂಬು.ಪಿ.ಸಿ.675 ಇವರು ಕಳುವಿನ ಪ್ರಕರಣದಲ್ಲಿ ಚಾಕಚಕ್ಯತೆಯಿಂದ ಕಾರ್ಯಚರಣೆ ಮಾಡಿ ಅಂತರಾಜ್ಯ ಕಳ್ಳನಾದ ಕಿರಣ ತಂದೆ ದಯಾನಂದ ಕಾಳೆ ವಯ:24 ವಷð ಜಾತಿ:ಪಾದ್ರಿ ಉ: ಚಾಲಕ ಸಾ:ಅಂಬೇಡ್ಕರ್ ನಗರ ಸಾಂಗ್ಲಿ ರೋಡ ಜತ್ತ ಜಿ:ಸಾಂಗ್ಲಿ (ಮಹಾರಾಷ್ಟ್ರ) ರವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು ಇರುತ್ತದೆ . ಮಾನವಿ ಮತ್ತು ಸಿರವಾರ ಹಾಗು ರಾಯಚೂರು ನಗರಗಳಲ್ಲಿ ಜರುಗಿದ ಒಟ್ಟು 5 ಮನೆ ಕಳ್ಳತನ ಪ್ರಕರಣಗಳ ಪೈಕಿ ಆರೋಪಿತನಿಂದ 6,70,000ರೂ ಬೆಲೆ ಬಾಳುವ 21.4 ತೊಲೆ ಬಂಗಗಾರವನ್ನು ಮತ್ತು 20 ತೊಲೆ ಬೆಳ್ಳಿಯನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ ಈ ಕಾರ್ಯವನ್ನು ಮಾನ್ಯ ಎಸ್.ಪಿ. ಸಾಹೇಬರು ರಾಯಚೂರುರವರು ಶ್ಲಾಘಿಸಿರುತ್ತಾರೆ.


 • 03
 • Dec

ರಾಯಚೂರು ಬಿ.ಆರ್.ಬಿ. ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಬಿ.ಆರ್.ಬಿ ಕಾಲೇಜ್ ರಾಯಚೂರು ರವರ ಸಹಯೋಗದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆ ಕುರಿತು ಅರಿವು/ಜಾಗೃತಿ ಕಾರ್ಯಕ್ರಮ

ರಾಯಚೂರು ಬಿ.ಆರ್.ಬಿ. ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಬಿ.ಆರ್.ಬಿ ಕಾಲೇಜ್ ರಾಯಚೂರು ರವರ ಸಹಯೋಗದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆ ಕುರಿತು ಅರಿವು/ಜಾಗೃತಿ ಕಾರ್ಯಕ್ರಮ ಶ್ರೀ ಡಿ.ಕಿಶೋರ್ ಬಾಬು. ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಅಧ್ಯಕ್ಷತೆಯಲ್ಲಿ ಜರುಗಿದ್ದು, ಉದ್ಘಾಟನೆಯನ್ನು ಗೌರವಾನ್ವಿತ ಸನ್ಮಾನ್ಯ ಶ್ರೀ ಬೈಲೂರು ಶಂಕರ ರಾಮಾ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರು ರವರು ನೇರವೇರಿಸಿರುತ್ತಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಎಂ.ಸಿ ನಾಡಗೌಡ,ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗು ಕಾರ್ಯದಶರ್ಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ, ರಾಯಚೂರು. ಶ್ರೀ ಶ್ರೀನಿವಾಸ್ ಸುವರ್ಣ, ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಧೀಶರು, ರಾಯಚೂರು. ಶ್ರೀ ಎಮ್. ನಾಗರಾಜ್ ಹಿರಿಯ ವಕೀಲರು ಹಾಗು ಕಾರ್ಯದರ್ಶಿಗಳು ತಾರನಾಥ ಶಿಕ್ಷಣ ಸಂಸ್ಥೆ, ರಾಯಚೂರು. ಶ್ರೀ ರತಿಲಾಲ್ ಪಟೇಲ್ ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಬಿ.ಆರ್.ಬಿ ಕಾಲೇಜ್, ರಾಯಚೂರು, ಶ್ರೀ ಟಿ.ನಾರಾಯಣಸ್ವಾಮಿ, ಎಸ್.ಸಿ.ಎ.ಬಿ ಕಾನೂನು, ಲಾ ಕಾಲೇಜ್ ರಾಯಚೂರು, ಶ್ರೀ ಜಿ.ಹರೀಶ ಪೊಲೀಸ್ ಉಪಾಧೀಕ್ಷಕರು, ರಾಯಚೂರುರವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಾನವ ಕಳ್ಳ ಸಾಗಣಿಕೆ ಅಪರಾಧ ತಡೆಗಟ್ಟುವ ಕುರಿತು ಪ್ರಸ್ತುತವಾಗಿ ಚಾಲ್ತಿಯಲ್ಲಿರುವ ಕಾನೂನಿನ ಕಲಂಗಳನ್ವಯ ಅಪರಾಧ ಮತ್ತು ಅಪರಾಧಕ್ಕೆ ಸಂಬಂಧಿಸಿದ ಶಿಕ್ಷೆಯ ಕುರಿತು ಮತ್ತು ಇಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ಕಾನೂನಿನ ಅರಿವು/ನೆರವಿನ ಮೂಲಕ ಕೈಕೊಳ್ಳಬಹುದಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು/ಜಾಗೃತಿ ಮೂಡಿಸಲಾಗಿರುತ್ತದೆ.