ನಾಗರಿಕರ ಹಕ್ಕುಗಳನ್ನು ಕಾನೂನಿನಲ್ಲಿ ಕ್ರೋಢಿಕರಿ ಈ ಕೆಳಗಿನಂತೆ ಸೇರಿಸಲಾಗಿದೆ.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಮಹಿಳೆಯರು ಠಾಣೆಗೆ ಹೋಗಲು ನಿರಾಕರಿಸಬಹುದು ಮತ್ತು ಅವರ ಮನೆಯಲ್ಲಿಯೆ ಸಂದರ್ಶನ ನಡೆಸಲು ಸೂಚಿಸಬಹುದು.
- ಸಂಜ್ಞೇಯ ಅಪರಾಧದ ಸಮಯದಲ್ಲಿ ಸಾಮಾನ್ಯವಾಗಿ ಬಂಧನ ವಾರಂಟ್ ಇಲ್ಲದೆ ಬಂಧಿಸಬಹುದು.
- ಬಂಧಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತನ್ನ ಗುರುತನ್ನು ಸ್ಪಷ್ಟವಾಗಿ ಪ್ರದರ್ಶಿಸಿಬೇಕು.
- ವಾರೆಂಟ್ ಜಾರಿಯಾದ ನಂತರ ಬಂಧಿಸುವ ಸಮಯದಲ್ಲಿ ಪೊಲೀಸರು ಒತ್ತಾಯ ಮಾಡಬಹುದು. ಆದರೆ ಬಂಧಿಸಿದ ವ್ಯಕ್ತಿ ಘನತೆಯನ್ನು ಕಾಪಾಡಬೇಕು. ಬಂಧಿಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಥವಾ ಪರೇಡ ಮಾಡಬಾರದು.
- ಬಂಧಿಸುವಕ್ಕಿಂತ ಮುಂಚೆ ಪೊಲೀಸ್ ಅಧಿಕಾರಿಯು ಬಂಧನದ ಜ್ಞಾಪನವನ್ನು ತಯಾರಿಸಿರಬೇಕು, ಅದು ಸ್ಥಳದಲ್ಲಿ ಲಭ್ಯವಿರುವ ಸಾಕ್ಷಿಯಿಂದ ದೃಢೀಕರಿಸಿರಬೇಕು. ಮುಖ್ಯವಾಗಿ ಬಂಧಿಸಿದ ವ್ಯಕ್ತಿಗೆ ತನ್ನ ಸಂಬಂದಿಕ ಮತ್ತು ನ್ಯಾಯಾವಾದಿಯೊಂದಿಗೆ ಸಂಪರ್ಕಿಸಲು ಅನುವು ಮಾಡಬೇಕು.
- ಮಕ್ಕಳು ಮತ್ತು ಬಾಲಾಪರಾಧಿಗಳನ್ನು ಬಂಧನಕ್ಕೆ ತೆಗೆದುಕೊಳ್ಳುವಾಗ ಯಾವುದೇ ಬಲವಂತವಾಗದಂತೆ ವಿಶೇಷ ಗಮನ ಹರಿಸಬೇಕು. ಇಂತಹ ಸಂದರ್ಭಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಜವಾಬ್ದಾರಿಯುತ ಸ್ಥಳಿಯ ನಾಗರಿಕರ ಸಹಾಯ ಪಡೆದು ಕನಿಷ್ಠ ಒತ್ತಾಯ ಮಾಡಬೇಕು.
- ಬಂಧಿತರನ್ನು 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆ ಹಾಜರ ಪಡಿಸಬೇಕು. ಅಪರಾಧಿಯ ವಿಚಾರಣೆಯನ್ನು ಆರೋಪಿಯ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು.
- ಮಾನ್ಯ ನ್ಯಾಯಾಲಯವು ಬಂಧಿತ ವ್ಯಕ್ತಿಯನ್ನು ಪೊಲೀಸ್ ಬಂಧನಕ್ಕೆ ನೀಡುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪರೀಕ್ಷಿಸಿ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದು ಒಪ್ಪಿಸುತ್ತದೆ. ಬಂಧಿತನಿಂದ ಜಪ್ತಿಮಾಡಿಕೊಂಡ ವಸ್ತುಗಳನ್ನು ಮಾನ್ಯ ನ್ಯಾಯಾಲಯದಲ್ಲಿ ಹಾಜರ ಪಡಿಸಲಾಗುತ್ತದೆ. ಆ ವ್ಯಕ್ತಿಯು ತನ್ನ ಜಪ್ತಿ ಮಾಡಿದ ವಸ್ತುಗಳನ್ನು ಮಾನ್ಯ ನ್ಯಾಯಾಲಯದ ಆದೇಶದನ್ವಯ ಮರಳಿ ಪಡೆಯಬಹುದು.