ಪೊಲೀಸ್ ಠಾಣೆಯಲ್ಲಿ ಸೇವೆಗಳು

 • ಎಲ್ಲಾ ಸಂಜ್ಞೇಯ ಅಪರಾದಗಳ ನೊಂದಣಿ ನಂತರ ಪ್ರಥಮ ವರ್ತಮಾನ ವರದಿ ಒಂದು ಪ್ರತಿಯನ್ನು ದೂರುದಾರರಿಗೆ ಉಚಿತವಾಗಿ ನೀಡಲಾಗುತ್ತದೆ.
 • ಘಟನೆ ಘಟಿಸಿದ ಪೊಲೀಸ್ ಠಾಣಾ ಹದ್ದಿಯಲ್ಲಿ ದೂರನ್ನು ಕಡ್ಡಾಯವಾಗಿ ದಾಖಲಿಸಿಲಾಗುವುದು, ಅದಲ್ಲದೆ ದೂರನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು. ಸರಹದ್ದಿನ ಕಾರಣದಿಂದ ಪ್ರಕರಣ ದಾಖಲಿಸಲು ನಿರಾಕರಿಸುವಂತಿಲ್ಲ. ಆದರೆ ಸರಹದ್ದಿನ ಠಾಣೆಗೆ ಪ್ರಕರಣದ ವರ್ಗಾವಣೆಯಲ್ಲಿ ಅಲ್ಪ ವಿಳಂಬವಾಗಬಹುದು.  
 • ಅಸಂಜ್ಞೇಯ ಪ್ರಕರಣ, ಲಘು ಪ್ರಕರಣಗಳು, ಅರ್ಜಿಗಳು, ಇತ್ಯಾದಿಗಳಿಗೆ ಸ್ವೀಕೃತಿಯನ್ನು (ಫಾರ್ಮ್ 76ಎ ನ ಮೂಲಕ) ನೀಡಲಾಗುವುದು.  
 • ಕೃತ್ಯ ನಡೆದ ಸ್ಥಳಕ್ಕೆ ಭೇಟಿ  ಸೇರಿದಂತೆ ದಾಖಲಾದ ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗುವುದು.
 • ಪೊಲೀಸ್ ಮತ್ತು ಸಾರ್ವಜನಿಕರ ಸಂಪರ್ಕ:
  • ನಾಗರಿಕ ಸಮಿತಿಯ ಸಭೆ  
  • ಶಾಂತಿ ಸಭೆ
  • ಮೊಹಲ್ಲಾ ಸಮಿತಿ ಸಭೆ  
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಪ್ರದೇಶಗಳಿಗೆ ಭೇಟಿ.
 • ಸಾರ್ವಜನಿಕ ಸ್ಥಳ, ಪೆಂಡಾಲ್, ಮೇರವಣಿಗೆಗಳಲ್ಲಿ, ಸಭೆಗಳಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸುವ ಅನುಮತಿಯನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನೀಡಲಾಗುವುದು. 
 • ಠಾಣೆಗಳಲ್ಲಿ ಸೌಜನ್ಯದ ಶಿಷ್ಠಾಚಾರ ಪಾಲಿಸಲಾಗುವುದು.
 • ದೂರನ್ನು ಸೂಕ್ಷ್ಮವಾಗಿ ಮತ್ತು ಸಹಾನುಭೂತಿಯಿಂದ ನೋಡಲಾಗುವುದು.
 • ಕೂಳಿತುಕೊಳ್ಳಲು ಆಸನ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಇರುತ್ತದೆ.
 • ಠಾಣಾಧೀಕಾರಿ ಅಥವಾ ಉಸ್ತುವಾರಿ ಅಧೀಕಾರಿಯೊಂದಿಗೆ ಭೇಟಿ. ಠಾಣಾಧೀಕಾರಿ ಪೊಲೀಸ್ ನಿರೀಕ್ಷಕರು ಅಥವಾ ಪೊಲೀಸ್ ಉಪನಿರೀಕ್ಷಕರು ಆಗಿರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಠಾಣೆಯ ಹೆಡ್ ಕಾನ್ಸಟೇಬಲ್ ದರ್ಜೆಗಿಂತ ಕಡಿಮೆ ಇಲ್ಲದ ಹಿರಿಯ ಅಧಿಕಾರಿ ಠಾಣೆಯ ಕರ್ತವ್ಯ ಮತ್ತು ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.