News

10
  • February

Raichur rural PS PAR.No.55/2019 U/s 107 CRPC

ಎದುರುಗಾರನು ತನ್ನ ಸಹಚರರೊಂದಿಗೆ ಕೂಡಿ ಯರಮರಸ್ ಕ್ಯಾಂಪ್ ನ ನಿವಾಸಿಯಾದ ಹಾಜಪ್ಪ ತಂದೆ ಹುಸ್ಸೇನಪ್ಪ ವಯಾ-61 ವರ್ಷ, ಜಾತಿ-ಮಾದಿಗ, ಉ-ನಿವೃತ್ತ ನೌಕರ ರವರು ಯರಮರಸ ಕ್ಯಾಂಪ ಗಾಂಧಿನಗರ ಪೊತಗಲ್ ರಸ್ತೆ ಮನೆ ನಂ 13-3-6/1 ಎಂ.ಐ.ಜಿ.2 ನೇದ್ದನ್ನು ಈ ಮೊದಲು ಎದುರುದಾರರಿಗೆ ವಾಸಮಾಡಲು ಕೊಟ್ಟಿದ್ದು ಸದರಿಯವರು ಮನೆಯನ್ನು ಖಾಲಿ ಮಾಡದೆ ಇದ್ದಾಗ ಸಮಾನ ಉದ್ದೇಶದಿಂದ ಒಡಗೂಡಿ ಅಕ್ರಮವಾಗಿ ಎದುರುಗಾರನು ತನ್ನ ಸಹಚರರೊಂದಿಗೆ ಕೂಡಿ ದಿನಾಂಕ: 24.06.2016 ರಂದು 08.00 ಗಂಟೆಯ ಸುಮಾರಿಗೆ ಬಂದು “ಏನಲೇ ಮಾದಿಗ ಸೂಳೆ ಮಗನೆ ಈ ಮನೆ ಬಿಡುವದಿಲ್ಲ” ಅಂತಾ ವಗೈರೆ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ಬೈದಾಡಿದಲ್ಲದೇ ಇನ್ನೊಮ್ಮೆ ಈ ಮನೆ ಹತ್ತಿರ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಗೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದು ಮೇಲಿಂದ ಠಾಣಾ ಗುನ್ನೆ ಸಂ; 118/2016 ಕಲಂ. 506 ಸಹಿತ 34 ಐಪಿಸಿ ಮತ್ತು ಕಲಂ: 3(1)(10) ಹರಿಜನ ಗಿರಿಜನ ದೌರ್ಜನ್ಯ ನಿಷೇದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೀಟ್ ಸಿಬ್ಬಂದಿಯವರು ಸಂಗ್ರಹಿಸಿದ ಮಾಹಿತಿ ಮೇಲಿಂದ, ಹಾಗೂ ನಾನು ಖುದ್ದಾಗಿ ಸಂಗ್ರಹಿಸಿದ ಮಾಹಿತಿ ಮೇಲಿಂದ ಸದರಿ ಎದುರುಗಾರನು ಪುನಃ ತಮ್ಮ ಚಟುವಟಿಕೆಲ್ಲಿ ತೊಡಗಿದ್ದು, ಇದನ್ನು ಪ್ರಶ್ನಿಸುವವರಿಗೆ ಹೊಡೆ ಬಡೆಯಲು ಬರುವುದಾಗಿ ಸದರಿಯವರ ಈ ವರ್ತನೆಯಿಂದಾಗಿ ಮೇಲಿನ ಗಳಲ್ಲಿ ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದಾಗಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಸಹಾ ಇದೇ ಪ್ರವೃತ್ತಿಯನ್ನು ಮುಂದುವರೆಸುವದಾಗಿ ತಿಳಿದು ಬಂದಿದ್ದು ಆ ಮೇರೆಗೆ ಸ್ವಂತ ದೂರಿನ ಮೇಲಿಂದ ಈ ಪ್ರಕರಣ ದಾಖಲಿಸಿದ್ದು ಇರುತ್ತದೆ