News

11
  • February

Hutti PS PAR.No:-14/ 2019 107 CRPC

¥ÀæPÀgÀtzÀ ¸ÁgÁA±À: ಮೇಲ್ಕಂಡ ಆರೋಪಿತನು ಠಾಣೆಯ ದಾಖಲಾತಿಗಳಲ್ಲಿ ರೌಡಿ ಆಸಾಮಿಯಾಗಿದ್ದು, ಸದರಿಯವನು ಗ್ರಾಮದಲ್ಲಿ ಚಟುವಟಿಕೆಯಿಂದ ಕೂಡಿರುತ್ತಾನೆ. ಸದರಿಯವನು ಮುಂಬರುವ ಲೋಕಸಭಾ ಚುನಾವಣೆ ಸಮಯದಲ್ಲಿ ಗ್ರಾಮದಲ್ಲಿ ಸಂಘಟನೆಗಳನ್ನು ಮಾಡಿ ತಮ್ಮ ಕೋಮಿನ ಜನರನ್ನು ಒಂದುಗೂಡಿಸಿ ಬೇರೆ ಬೇರೆ ಜಾತಿಯವರ ವಿರುದ್ದ ವಿನಾ ಕಾರಣ ಪ್ರಚೋದಿಸುವುದು, ಪ್ರತಿಭಟಿಸುವುದು ಹಾಗೂ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಜನರ ನೆಮ್ಮದಿ ಹಾಳು ಮಾಡುವ ಸಂಭವವಿರುತ್ತದೆ. ಅಲ್ಲದೇ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ವಿನಾ ಕಾರಣ ಜಗಳ ಮಾಡಿಕೊಂಡು ಅಹಿತಕರ ಘಟನೆಗಳು ಜರುಗುವ ಸಂಭವವಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವ & ಶಾಂತತಾ ಭಂಗ ಉಂಟಾಗುವ ಸಾಧ್ಯತೆ ಇರುತ್ತದೆ. ಕಾರಣ ಸದರಿ ಪ್ರತಿವಾದಿಯು ಗ್ರಾಮದಲ್ಲಿ ಯೋಗ್ಯ ಸದ್ಭಾವಳಿಕೆಯಿಂದ ಇರಲು ಮತ್ತು ಆತನಿಂದ ಗ್ರಾಮದಲ್ಲಿ ಮುಂದಿನ ದಿನಮಾನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಅವರಿಂದ ಕಲಂ.111, 117 ಸಿ.ಆರ್.ಪಿ.ಸಿ. ಅಡಿಯಲ್ಲಿ ಮುಚ್ಚಳಿಕೆ ಬರೆಯಿಸಿಕೊಳ್ಳಬೇಕೆಂದು ಕ್ರಮ ಜರುಗಿಸಿದ್ದು ಇರುತ್ತದೆ.