News

12
  • February

Raichur traffic Ps.Cr.No. 13/2019 U/S 279, 338 IPC

ಸಂಕ್ಷೀಪ್ತ ಸಾರಾಂಶ:-  ಇಂದು ದಿನಾಂಕ: 12-02-2019 ರಂದು1030 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ MLC ಸ್ವೀಕೃತಗೊಂಡ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಪರಿಶೀಲಿಸಿ ಅಲ್ಲಿಯೇ ಇದ್ದ ಪಿರ್ಯಾಧಿದಾರರಿಗೆ ವಿಚಾರಿಸಿ ಲಿಖಿತವಾಗಿ ಬರೆದುಕೊಟ್ಟ   ದೂರನ್ನು  ಪಡೆದುಕೊಂಡು 1130 ಗಂಟೆಗೆ ಠಾಣೆಗೆ ಬಂದಿದ್ದು ದೂರಿನ ಸಾರಾಂಶವೆನೆಂದರೆ,, ದಿನಾಂಕ;-12-02-2019 ರಂದು 0830 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ರಾಯಚೂರು-ಮಂತ್ರಾಲಯ ರಸ್ತೆಯ ಎಸ್.ಎಸ್.ಆರ್.ಜಿ ಕಾಲೇಜು ಮುಂದಿನ ರಸ್ತೆಯಲ್ಲಿ ಕ್ಯಾಂಟಿನಗೆ ಹಾಲು ತರುವ ಕುರಿತು ರಸ್ತೆ ದಾಟುತ್ತಿದ್ದಾಗ, ಆರೋಪಿತನು ಅಂಬೇಡ್ಕರ್ ವೃತ್ತದ ಕಡೆಯಿಂದ ಜೆ. ಜೆ. ವೃತ್ತದ ಕಡೆಗೆ ಹೋಗುವಾಗ HONDA  ACTIVA M/C  NO. KA36EA 0810 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರರು ಕೆಳಗಡೆ ಬೀಳಲು ಬಲಗಾಲಿನ ಪಾದದ ಕಳಗಡೆ ಎಲುಬು ಮುರಿದು ಭಾರೀ ಗಾಯವಾಗಿದ್ದು, ಸೊಂಟದ ಎಡಗಡೆ ಒಳಪೆಟ್ಟಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ  ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 13/2019 ಕಲಂ: 279, 338  IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.