News

12
  • February

Kowthal PS : Cr. No.17/2019 U/S 447,427,323,504,506 R/W 34 IPC

ಪ್ರಕರಣದ ಸಂಕ್ಷೀಪ್ತ ಸಾರಾಂಶ :  ದಿನಾಂಕ:12/02/2019 ರಂದು 13-45 ಗಂಟೆಗೆ ಠಾಣೆಗೆ ಬಂದ ಪಿರ್ಯಾಧಿದಾರರು ಹಾಜರು ಪಡಿಸಿದ ಲಿಖಿತ ಪಿರ್ಯಾಧಿಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿ//ಬೆನಕಪ್ಪ ಸಾ:ಬಾಗಲವಾಡ ಇವರ ಜಾಗೆಯನ್ನು ಖರೀದಿ ಮಾಡಿ ಅಲ್ಲಿಯೇ ಮನೆಯನ್ನು ಮಾಡಿಕೊಂಡು ತನ್ನ ಕುಟುಂಬದೊಂದಿಗೆ ಇರುತ್ತಾರೆ. ದಿನಾಂಕ 11/02/2019 ರಂದು ಸಂಜೆ 17-30 ಗಂಟೆಗೆ  ಅಪಾದಿತರೇಲ್ಲರೂ ಸೇರಿಕೊಂಡು  ಜೆಸಿಬಿ ( JCB ) ನಂಬರು KA 29 M: 6794 ದೊಂದಿಗೆ ಬಂದು ಪಿರ್ಯಾದಿಯ ಮನೆಯ ಮುಂದೆ ಇರುವ ಹುಲ್ಲಿನ ಬಣವಿ ದೊಡ್ಡಿಯ ಸುತ್ತಲು ಕಲ್ಲಿನ ಕಂಪೌಂಡ್ ಒಳಗೆ ಅತಿಕ್ರಮವಾಗಿ ಪ್ರವೇಶ ಮಾಡಿ ಕಲ್ಲಿನ ಕಂಪೌಂಡ್ ಹಾಗೂ ಹುಲ್ಲಿನ ಬಣವೆಯನ್ನು ಕಿತ್ತಿ ಹಾಕಿದ್ದನ್ನು ವಿಚಾರಣೆ ಮಾಡಲು ಹೋದ ಪಿರ್ಯಾದಿಗೆ ಆಪಾದಿತರು ಜಾಗೆಯು ನಮ್ಮದು ಸೂಳೆ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ಪಿರ್ಯಾದಿಯ ಮೈಕೈ   ಹೊಡೆದು ಹಲ್ಲೆಯನ್ನು ಮಾಡಿ ಜೀವದ ಬೇದರಿಕೆಯನ್ನು  ಹಾಕಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ಪಿರ್ಯಾಧಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 17/2019 ಕಲಂ:447.427.323.504.506 ಸಹಿತ 34 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.