News

15
  • April

BALGANOOR PS Cr No 26/2019 U/S 87 KP ACT

ಪ್ರಕರಣ ಸಂಕ್ಷಿಪ್ತ ಸಾರಾಂಶ:-ಇಂದು ದಿನಾಂಕ:- 15/04/2019 ರಂದು ಸಾಯಂಕಾಲ 17-30 ಗಂಟೆಗೆ ಪಿ ಎಸ್ ಐ ಸಾಹೇಬರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 07-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.ಇಂದು ದಿ-15/04/2019 ರಂದು ಮಧ್ಯಾಹ್ನ 13.30 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿರುವಾಗ  ಉದ್ಬಾಳ ಸೀಮಾ ದೀನಸಮುದ್ರ ರಸ್ತೆಯ ಕಾಲೂವೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ಉದ್ಬಾಳ ಸೀಮಾ ದೀನಸಮುದ್ರ ರಸ್ತೆಯ ಕಾಲೂವೆ ಪಕ್ಕದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಪಕ್ಕದ  ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 07 ಜನರು  ಸಿಕ್ಕಿಬಿದ್ದಿದ್ದು.ಕೆಲವು ಜನ ಓಡಿ ಹೋಗಿದ್ದು.ಓಡಿ ಹೋದವರ ಹೆಸರು ತಿಳಿಯಬೇಕಾಗಿರುತ್ತದೆ.ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  68650/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-15/04/2019 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಠಾಣಾ ಗುನ್ನೆ ನಂ.26/2019 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.