News

15
  • May

Mudgal PS Cr.No. 56/2019 U/S. 78(III) KP ACT

ದಿನಾಂಕ 14-05-2019 ರಂದು ರಾತ್ರಿ 7.30  ಗಂಟೆಗೆ ಆರೋಪಿತನು ವ್ಯಾಕರನಾಳ ಗ್ರಾಮದ ಬನ್ನಿಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿ.ಸಿ-  214, 283, 592  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 1820/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡಿದ್ದು  ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡು & ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ಕೇಳಿದಾಗ A-2 ಹನುಮೇಶ ತಂದೆ ಹನುಮಂತಪ್ಪ ಜೂಲಗುಡ್ಡ ಸಾ: ವ್ಯಾಕರನಾಳ ಇವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ರಾತ್ರಿ 9.15 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತರ ಮೇಲೆ ಠಾಣಾ ಎನ್.ಸಿ ನಂ. 06/2019 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಸದರಿ ಪ್ರಕರಣವು ಅಂಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:15.05.2019 ರಂದು ಮದ್ಯಾಹ್ನ 3.00 ಗಂಟೆಗೆ ನ್ಯಾಯಾಲಯ ಸಿಬ್ಬಂದಿ ಪಿ.ಸಿ-22 ರವರು ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಆರೋಪಿತರ ಮೇಲೆ ಠಾಣಾ ಅ.ಸಂಖ್ಯೆ 56/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.