News

15
  • May

Balaganoor PS Cr.No. 32/219 U/S 143,147,148,323,324,504,506 R/W 149 IPC 3(1)(r)(s) and 3(2) (v-a) SC/ST PA AMENDMENT ACT 2015

ದಿನಾಂಕ-15/05/2019 ರಂದು ಸಂಜೆ 05.00 ಗಂಟೆ ಸುಮಾರಿಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಜಗಳದಲ್ಲಿ ಗಾಯಗೊಂಡ ರೇಣುಕಮ್ಮ ಈಕೆಯು ಇಲಾಜ ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಿಲಾಗಿ ಲಿಖಿತದೂರು ಹಾಜರುಪಡಿಸಿದ್ದು ಸಾರಂಶವೆನೇಂದರೆ,ಪಿರ್ಯಾಧಿ ಗಂಡನು ಮಸ್ಕಿ ಪಟ್ಟಣದ ವಿರುಪಣ್ಣ ನಾಯಕ ಇವರ 7 ಎಕರೆ ಹೊಲದಲ್ಲಿರುವ ಪಿಳ್ಳಿ ಪಿಸಿರು ಕುರಿಗಳಿಗೆ ಮೆಯಿಸಲು 37500/- ರೂಪಾಯಿಗಳಿಗೆ ತೆಗೆದುಕೊಂಡಿದ್ದನು.ಆರೋಪಿತರು ತಾವು ಪಿಳ್ಳಿ ಪಿಸಿರು ಖರೀದಿ ಮಾಡಬೇಕಾದ ಹೊಲವನ್ನು ಪಿರ್ಯಾಧಿ ಗಂಡನು ತನ್ನ ಕುರಿಗಳಿಗೆ ಮೆಯಿಸಲು ಹೆಚ್ಚಿನ ಹಣಕ್ಕೆ ಪಡೆದುಕೊಂಡದಕ್ಕೆ  ಸಿಟ್ಟಿ ಇಟ್ಟುಕೊಂಡಿದ್ದರು.ದಿನಾಂಕ-13/05/2019 ರಂದು ಸಂಜೆ 06.00 ಗಂಟೆ ಸುಮಾರಿಗೆ ಉದ್ಬಾಳ ಶಿವಪ್ಪ ಇವರ ಹೊಲದ ಹತ್ತಿರ ತೆಂಗಿನ ಮರದ ಪಕ್ಕದಲ್ಲಿ ಕುರಿಗಳನ್ನು ಮೆಯಿಸುತ್ತಾ ರಸ್ತೆಯ ಪಕ್ಕದಲ್ಲಿ ಪಿರ್ಯಾಧಿ ಮತ್ತು ಪಿರ್ಯಾಧಿ ಗಂಡ ಹಾಗೂ ಇತರರು ಇರುವಾಗ ಆರೋಪಿತರೆಲ್ಲೂರು ಕೂಡಿಕೊಂಡು ಬಂದವರೆ,ಪಿರ್ಯಾಧಿ ಗಂಡನಿಗೆ ಎಲೆ ಯಂಕ ಕುರುಬ ಸೂಳೆ ಮಗನೆ ನೀನು ಎಷ್ಟು ರೊಕ್ಕ ಗಳಿಸಿದ್ದಿ ನಾವು ಖರೀದಿಸು ಪಿಳ್ಳಿ ಪಿಸಿರನ್ನು ಹೆಚ್ಚಿನ ಹಣಕ್ಕೆ ಖರೀದಿಸಿ ನಿನ್ನ ಸೊಕ್ಕು ಬಹಳ ಆಗಿದೆ ಅಂತಾ ಜಗಳ ತೆಗೆದು ಕೈಯಿಂದ ಹೊಡೆಯುತ್ತಿರುವಾಗ ಪಿರ್ಯಾಧಿದಾರಳು ಬಿಡಿಸಿಕೊಳ್ಳುತ್ತಿರುವಾಗ ಆರೋಪಿತರು ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡೆದು ಅವಚ್ಯಾವಾಗಿ ಬೈಯುದು ನಂತರ ಇನ್ನೊಮ್ಮೆ ನಾವು ಖರೀದಿಸುವ ಪಿಳ್ಳೆ ಪಿಸಿರಿನ ತಂಟೆಗೆ ಬಂದರೆ  ಜೀವಂತ ಉಳಿಸುವುದಿಲ್ಲ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ.ಘಟನೆಯ ನಂತರ ಕುರಿಗಳು ಮೆಯಿಸಲು ಯಾರು ಇಲ್ಲದ  ಕಾರಣ ಮತ್ತು ಮೈಕೈ ನೋವು ಜಾಸ್ತಿಯಾಗಿದ್ದರಿಂದ ಈ  ದಿವಸ ತಡವಾಗಿ ಬಂದು ದೂರು ಸಲ್ಲಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 32/2019  ಕಲಂ-143,147,323,354,504,506 ಸಹಿತ 149  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.