News

15
  • May

Manvi PS Cr.No.108/2019 U/S 4987(A),504,323,506 IPC

ಇಂದು ದಿನಾಂಕ  15-05-2019 ರಂದು ರಾತ್ರಿ 9-15 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರಳಿಗೆ ಈಗ್ಗೆ  20 ವರ್ಷಗಳ ಹಿಂದೆ ಆರೋಪಿ ದ್ಯಾವಣ್ಣ ಈತನೊಂದಿಗೆ ಮದುವೆಯಾಗಿದ್ದು  ಮದುವೆಯಾಗಿನಿಂದ ಆರೋಪಿತನು ಫಿರ್ಯಾದಿರಾಳೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು  ಈಗ್ಗೆ  4 ವರ್ಷಗಳಿಂದ ಆರೋಪಿತನು ಕುಡಿದು ಬಂದು ಫಿರ್ಯಾದಿದಾರಳೊಂದಿಗೆ ವಿನಾಃ ಕಾರಣ ಜಗಳ ತೆಗೆದು''  ನೀನು ಬರಿ ಹೆಣ್ಣು ಮಕ್ಕಳನ್ನು ಹಡೆದಿದ್ದಿಯಾ ಗಂಡು ಮಕ್ಕಳೇ ಹಡೆದಿಲ್ಲ ನಿನ್ನನ್ನು ಯಾವ ಗಳಿಗೆಯಲ್ಲಿ ಮದುವೆ ಮಾಡಿಕೊಂಡಿದ್ದೆನೆ ಏನೋ ''  ಅಂತಾ ಹಿಯಾಳಿಸಿ ಮಾತನಾಡುತ್ತಾ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದು  ಫಿರ್ಯಾದಿದಾರಳು ಸಂಸಾರದ ವಿಷಯ ಇವತ್ತಲ್ಲ ನಾಳೆ ಸರಿ ಹೋಗಬಹುದು ಅಂತಾ ಸುಮ್ಮನಿದ್ದು ನಿನ್ನೆ ದಿನಾಂಕ 14-05-2019 ರಂದು ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತಮ್ಮ ಮನೆಯಲ್ಲಿದ್ದಾಗ ಆರೋಪಿತನು ಹೊರಗಡೆಯಿಂದ ಮನೆಗೆ ಬಂದು  '' ಏನಲೇ ಬೋಸುಡೆ ಸೂಳೇ ನೀನು ಬರಿ ಹೆಣ್ಣು ಹಡೆದಿದ್ದಿ  ನೀನು ನಿನ್ನ ತವರು ಮನೆಗೆ ಹೋಗು ಇಲ್ಲಿ ಇರಬೇಡ''  ಅಂತಾ ಬೈದು ಫಿರ್ಯಾದಿರಾಳಿಗೆ  ಕೈಗಳಿಂದ ಮೈ ಕೈ ಗೆ ಹೊಡೆಬಡೆ ಮಾಡಿ  '' ಬೋಸುಡಿ ಸೂಳೇ ನೀನು ನಿನ್ನ ತವರು ಮನೆಗೆ ಹೋಗದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇನೆ '' ಅಂತಾ ಜೀವದ ಬೇದರಿಕೆ ಹಾಕಿದ್ದು ಫಿರ್ಯಾದಿದಾರಳು ತನ್ನ ತವರು ಮನೆಯವರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 108/2019 ಕಲಂ 498 (ಎ) 504.323.506 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.