News

16
  • May

MASKI PS UDR No 11/2019 U/S 174 CRPC

ಇಂದು ದಿನಾಂಕ 16/05/2019 ರಂದು ಬೆಳಿಗ್ಗೆ 11.00 ಗಂಟೆಗೆ ಫಿರ್ಯಾದಿದಾರನಾದ ಸಿದ್ದಪ್ಪ ನಾಯಕ ತಂದೆ ಅಯ್ಯಪ್ಪ ನಾಯಕ ಸಾ: ಚಿಕ್ಕದಿನ್ನಿ ಈತನು ಖುದ್ದಾಗಿ ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆತನ್ನ ಮಗನಾದ ಕುಮಾರ ನಾಯಕ  ಈತನು ಮಾನವಿ ಲೋಯೋಲ್ಲಾ ಕಾಲೇಜಿನಲ್ಲಿ ಪಿ.ಯು.ಸಿ. ವ್ಯಾಸಂಗ ಮುಗಿಸಿ ಬಿ.ಕಾಂ ದ್ವಿತಿಯ ಪದವಿಯನ್ನು ಅದೇ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆಇಂದು ದಿನಾಂಕ 16/05/19 ರಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಒಬ್ಬ ಹಾಸ್ಟೇಲ್  ವಿದ್ಯಾರ್ಥಿಯು ತನಗೆ ಫೋನ್ ಮಾಡಿ ನಿನ್ನೆ ದಿನಾಂಕ 15/05/19 ರಂದು ರಾತ್ರಿ ಸಮಯದಲ್ಲಿ ನಿನ್ನ ಮಗ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದ್ದರಿಂದ ಮಾನವಿಗೆ ಬಂದು ನೋಡಲಾಗಿ ಕುಮಾರ ನಾಯಕನು ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇತ್ತು. ತನ್ನ ಮಗ ಯಾವ ಕಾರಣಕ್ಕಾಗಿ ಮೃತಪಟ್ಟಿರುತ್ತಾನೆ ಎಂದು ಗೊತ್ತಿರುವದಿಲ್ಲ. ಮತ್ತು ಸಾವಿನ ಬಗ್ಗೆ ಯಾರ ಮೇಲೆ ಸಂಶಯ  ಇರುವದಿಲ್ಲ. ದಿನಾಂಕ 15/05/19 ರಂದು ರಾತ್ರಿ 8 ಗಂಟೆಯಿಂದ ದಿನಾಂಕ 16/05/19 ರಂದು ಬೆಳಿಗ್ಗೆ 6.00 ಗಂಟೆ ಅವಧಿಯಲ್ಲಿ  ಮೃತನಾಗಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಮಾನವಿ  ಠಾಣಾ ಯು.ಡಿ.ಅರ್ ನಂ 11/2019 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ