News

03
  • July

MARKET YARD PS Cr.No. 38/2019 U/S. 307,504 IPC

ಇಂದು ದಿನಾಂಕ: 09-06-2019 ರಂದು 2150 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಸ್ವೀಕೃತಗೊಂಡಿದ್ದು ಆಸ್ಪತ್ರೆಗೆ ಬೇಟಿನೀಡಿ ಫಿರ್ಯಾಧಿದಾರರಾದ ಗಾಯಾಳುವಿನ ಅಣ್ಣ ಮಹ್ಮದ್ ಫಯಾಜ್ ತಂದೆ ಮಹ್ಮದ್ ಶಾಲಂಇವರ ಲಿಖಿತ ದೂರನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯ ತಮ್ಮನಾದ ಮಹ್ಮದ್ ಅಯಾಜ್ ಈತನು ದಿನಾಂಕ:        09-06-2019 ರಂದು 21000 ಗಂಟೆಯ ಸುಮಾರಿಗೆ ಹಬೀಬಿಯಾ ಮಸೀದಿ ಹತ್ತಿರ ಇರುವ ಮುನ್ನಾ ಮಟನ್ ಶಾಪಗೆ ಹೋಗಿ ಅಲ್ಲಿ ತಾನು ಪ್ರೀತಿಸುವ ಹುಡುಗಿಗೆ ಗುಲಾಂ ಮಹ್ಮದ್ ತಂದೆ ಮಹಮ್ಮದ್ ಯುಸೂಫ್ ಈತನು ಎಸ್.ಎಮ್. ಎಸ್. ಮಾಡುತ್ತಿರುಬಗ್ಗೆ ಶಂಸಯಬಂದು ಕೇಳಲು ಹೋದಾಗ ಗುಲಾಂ ಮಹ್ಮದ್ ಈತನು ತನ್ನ ತಮ್ಮನಿಗೆ ಅವಾಚ್ಯ ವಾಗಿ ಬೈದು ಕೊಲೆ ಮಾಡುವ ಉದ್ದೇಶ ದಿಂದ ಮಟನ್ ಕಡಿಯುವ ಕತ್ತಿಯಿಂದ ಹೊಟ್ಟಯ ಎಡಭಾಗಕ್ಕೆ ಇರಿದು ರಕ್ತಗಾಯ ಗೊಳಿಸಿ ಕೊಲೆಮಾಡಲು ಪ್ರಯತ್ನಿಸಿದ್ದು ಈ ವಿಷಯವು ಮಹಮ್ಮದ್ ಸಾದಿಕ ಪಾಷಾ ಇವರಿಂದ ತಿಳಿದುಕೊಂಡಿದ್ದು ತನಗೆ ಸರಿಯಾಗಿ ಬರೆಯಲು ಬಾರದಿರುವುದರಿಂದ ತನ್ನ ಪರಿಚಯದವರಾದ ರವಿ ತಂದೆ ಹನುಮಂತಪ್ಪ ಇವರಿಂದ  ದೂರನ್ನು ಬರೆಯಿಸಿಕೊಟ್ಟಿದ್ದು ಕಾರಣ ತನ್ನ ತಮ್ಮನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿದ ಗುಲಾಂ ಮಹ್ಮದ್ ತಂದೆ ಮಹಮ್ಮದ್ ಯುಸೂಫ್, ವಯಾ:20 ವರ್ಷ, ಮುಸ್ಲೀಂ, ಚಿಕನ್ ವ್ಯಾಪಾರ, ಸಾ:ಎಲ್.ಬಿ.ಎಸ್.ನಗರ ರಾಯಚೂರು ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಮುಂತಾಗಿ ಇರುವ ಫಿರ್ಯಾದಿಯನ್ನು ಪಡೆದುಕೊಂಡು 2330 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಫಿರ್ಯಾದಿಯ  ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣಾ ಗುನ್ನೆ ನಂ.38/2019, ಕಲಂ.307,504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ