News

09
  • June

HUTTI P.S. UDR NO:08/2019 U/S 174 C.R.P.C

¥ÀæPÀgÀtzÀ ¸ÀAQëÃ¥ÀÛ ¸ÁgÁA±À : ಫಿರ್ಯಾದಿಯ ಮಗನಾದ ಮೃತ ಸೋಮಣ್ಣನು ದಿನಾಂಕ 09.06.2019 ರಂದು ಬೆಳಿಗ್ಗೆ 9.00 ಗಂಟೆಗೆ ತಮ್ಮ ಕುರಿಗಳನ್ನು ಮೇಯಿಸುವದಕ್ಕೆ ಅಡವಿಗೆ ಹೋಗಿದ್ದು, ರಾತ್ರಿ 8.00 ಗಂಟೆ ಸುಮಾರಿಗೆ ಗುಡುಗು, ಮಿಂಚು, ಸಿಡಿಲು ಸಹಿತ ಮಳೆಗಾಳಿ ಬಂದಿದ್ದರಿಂದ ತನ್ನ ಕುರಿಗಳನ್ನು ಹಳೆ ಬೆಂಚಲದೊಡ್ಡಿ ಸೀಮಾದ ತಿಮ್ಮಣ್ಣ ಹವಾಲ್ದಾರ ಇವರ ಹೊಲ ಸರ್ವೆ ನಂ 22 ರಲ್ಲಿ ಕುರಿಗಳನ್ನು ಬಿಟ್ಟು ಆತನು  ಹೊಲದ ಬದುವಿನಲ್ಲಿದ್ದಾಗ ಗುಡುಗು, ಮಿಂಚು, ಸಿಡಿಲು ಸಹಿತ ಮಳೆಗಾಳಿ ಬಂದಿದ್ದರಿಂದ ಜೋರಾದ ಸಿಡಿಲು ಮೃತ ಸೋಮಣ್ಣನಿಗೆ ಎಡಗಡೆ ಎದೆಗೆ,   ಎಡಗಡೆ ಸೊಂಟಕ್ಕೆ ಎಡಗಡೆ, ಎಡಗಡೆ ಪಕ್ಕಡಿಗೆ ಬಡಿಸಿದ್ದರಿಂದ ಸೋಮಣ್ಣನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆತನ ಮರಣದ ಮೇಲೆ ಯಾರ ವಿರುದ್ದ ದೂರು ಸಂಶಯ ಇರುವದಿಲ್ಲ ಅಂತಾ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ಪ್ರ.ವ.ವರದಿ ಜರುಗಿಸಲಾಗಿದೆ.