News

11
  • June

MUDGAL PS CR.NO 72/2019 U/S 498(A),323,324,504,506,AND 34 IPC & 3 &4 DP ACT

ಇಂದು ದಿನಾಂಕ:11.06.2019 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರಳ ಅಣ್ಣನಾದ ಜೀತು ನಾಯ್ಕ ಇವರು ಠಾಣೆಗೆ ಹಾಜರಾಗಿ ತನ್ನಅಕ್ಕಳಾದ ಫಿರ್ಯಾದಿದಾರಳು ಕಂಪ್ಯೂಟರದಲ್ಲಿ ಟೈಪ್ ಮಾಡಿಸಿದ ದೂರು ಕಳುಹಿಸಿಕೊಟ್ಟಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳಿಗೆ ಈಗ್ಗೆ 9 ವರ್ಷಗಳ ಹಿಂದೆ ಹೆಗ್ಗಾಪೂರ ತಾಂಡಾದ ಆರೋಪಿ ನಂ-3 ಇವರೊಂದಿಗೆ ಮದುವೆಯಾಗಿದ್ದು ಮದುವೆಯಾದ ಸ್ವಲ್ಪದಿನ ನಂತರ ಫಿರ್ಯಾದಿದಾರಳಿಗೆ ಆರೋಪಿತರು ಎಲ್ಲರೂ ಕೂಡಿಕೊಂಡು  ನಿನ್ನ ತವರು ಮನೆಯಿಂದ 8-10 ತೊಲೆ ಬಂಗಾರ ಹಾಗೂ 2 ಲಕ್ಷ ನಗದು ದುಡ್ಡು ತರಬೇಕೆಂದು ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಫಿರ್ಯಾದಿದಾರಳು ತನ್ನ ತವರು ಮನೆಯಾದ ಪೂಜಾರಿ ತಾಂಡಾಕ್ಕೆ ಬಂದು ಇದ್ದಾಗ ನಂತರ ಆರೋಪಿತರು ಫಿರ್ಯಾದಿದಾರಳಿಗೆ  ಆಕೆಯ ಗಂಡ  ಮತ್ತು ಮಾವ ಕೂಡಿಕೊಂಡು ಬಂದು ಹಿರಿಯರ ಸಮಕ್ಷಮ ಬಗೆಹರಿಸಿಕೊಂಡು ವಾಪಸ್ ಗಂಡನ ಮನಗೆ ಕರೆದುಕೊಂಡು ಹೋದಾಗ ಮತ್ತೆ ಆರೋಪಿತರು ನೀನು ನಾವು ಹೇಳಿದಷ್ಟು ವರದಕ್ಷಿಣೆ ತಂದಿರುವುದಿಲ್ಲ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದರಿಂದ  ಫೀರ್ಯಾದಿದಾರಳು ತನಗೆ ಸಾಯಿಸಿಬಿಡುತ್ತಾರೆಂದು ಭಯದಿಂದ  ತನ್ನ ತವರು ಮನೆಗೆ ಬಂದಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ : 10.06.2019 ರಂದು ಬೆಳಿಗ್ಗೆ 10-30 ಗಂಟೆಗೆ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿ ತವರು ಮನೆ ಪೂಜಾರಿ ತಾಂಡಾಕ್ಕೆ ಹೋಗಿ ಏ ಸೋಳೆ ನೀನು ಬಂದು ಎಷ್ಟು ದಿನಗಳು ಆಯ್ತು ಇಲ್ಲಿ ಯಾರಾದರೂ ಮಿಂಡಗಾರನನ್ನು ಇಟ್ಟುಕೊಂಡಿದ್ದೀಯಾ ಎಂದು ಜಗಳ ತೆಗೆದು ಆರೋಪಿ ನಂಬರ್ 02 & 03 ಕೂಡಿಕೊಂಡು ಕೂದಲು ಹಿಡಿದು ಎಳೆದಾಡಿ ಹೊಡೆದು ನಂತರ ಆರೋಪಿ ನಂ-01& 03 ರವರು ಕುತ್ತಿಗೆಗೆ ಬಲವಾಗಿ ಹಿಡಿದು ನಂತರ ಕಾಲಿನಿಂದ ಹೊಟ್ಟೆಗೆ ಜೋರಾಗಿ ಒದ್ದು ಮತ್ತು ಕೈ ಮುಷ್ಠಿಯಲ್ಲಿ ಕಲ್ಲನ್ನು ಹಿಡಿದು ಹೊಟ್ಟೆಗೆ ಹೊಡೆದು ಕಾಲಿನಿಂದ ಮನಬಂದಂತೆ ತುಳಿದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಜಗಳವನ್ನು ಬಿಡಸಲು ಹೋದ ಫಿರ್ಯಾದಿಯ ತಾಯಿ ಮತ್ತು ಅಣ್ಣನಾದ ಜೀತು ಇವರು ಹೋದಾಗ ಅವರಿಗೂ ಸಹಃ ಹೊಡೆದಿದ್ದು ಹಾಗೂ ಫೀರ್ಯಾದಿಯ ಅಣ್ಣನಿಗೆ ಆರೋಪಿ ನಂ-03 ನೇದ್ದವನು ಬಾಯಿಂದ ಕಚ್ಚಿದ್ದು ಇರುತ್ತದೆ. ನಂತರ ಫಿರ್ಯಾದಿಗೆ  ಮುದಗಲ್ಲ ಸರ್ಕಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.