News

12
  • June

TRAFFIC PS RCR CR.NO 36/2019 U/S 279,338 IPC

ಇಂದು ದಿನಾಂಕ;- 11-06-2019 ರಂದು 2030 ಗಂಟೆಗೆ ರಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ  ಪರಿಶೀಲಿಸಿ ಫಿರ್ಯಾದಿದಾರರ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 2130 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ದಿನಾಂಕ;-11-06-2019 ರಂದು 1800 ಗಂಟೆಗೆ ಫಿರ್ಯಾದಿದಾರರು ಆರೋಪಿತನು ನಡೆಸುತ್ತಿದ್ದ  HONDA SHINE M/C NO. KA36ER9961 ನೇದ್ದರ ಹಿಂದೆ ಕುಳಿತುಕೊಂಡಿದ್ದು, ಆರೋಪಿತನು ರಾಯಚೂರು –ಮಂತ್ರಾಲಯ ರಸ್ತೆಯ  ಶ್ರೀ ಚೈತನ್ಯ ಶಾಲೆಯ ಕ್ರಾಸ್ ನಲ್ಲಿ   ಮೋಟಾರ್ ಸೈಕಲ್ ನ್ನು ಆರ್.ಟಿ.ಓ ಸರ್ಕಲ್ ಕಡೆಯಿಂದ ಜೆ.ಜೆ. ಸರ್ಕಲ್ ಕಡೆಗೆ ಹೋಗುವಾಗ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಕ್ರಾಸ್ ನಲ್ಲಿ ಹೋಗುತ್ತಿದ್ದ ಅಮೀತ್ ರಾಜ್ ಈತನು ಚಲಾಯಿಸುತ್ತಿದ್ದ HONDA ACTIVA M/C NO. KA36EM9477 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿ ಮತ್ತು ಆರೋಪಿ ಹಾಗೂ HONDA ACTIVA ಮೋಟಾರ್ ಸೈಕಲ್ ಮೇಲೆ ಇದ್ದ ಇಬ್ಬರೂ ಕೆಳಗಡೆ ಬೀಳಲು ಫಿರ್ಯಾದಿಗೆ ಮತ್ತು HONDA ACTIVA ಮೋಟಾರ್ ಸೈಕಲ್ ಹಿಂದೆ ಕುಳಿತ ರಜತ್ ಇವರಿಗೆ ಯಾವುದೇ ಗಾಯಗಳು ಆಗಿರಲಿಲ್ಲ.ಅಮೀತ್ ರಾಜ್ ಈತನಿಗೆ ತಲೆಗೆ, ಹಣೆಗೆ ಭಾರೀ ರಕ್ತಗಾಯ, ಬಲಗಣ್ಣಿ ಹತ್ತಿರ ರಕ್ತಗಾಯವಾಗಿದ್ದು, ಆರೋಪಿತನಿಗೆ  ಬಲಗಣ್ಣಿನ ಹುಬ್ಬಿನ ಮೇಲೆ ಭಾರೀ ರಕ್ತ ಗಾಯ, ಎದೆಯ ನಡುಭಾಗದಲ್ಲಿ ಮೂಕ ಪೆಟ್ಟಾಗಿದೆ. ಹುಬ್ಬಿನ ಹತ್ತಿರ ರಕ್ತಗಾಯ, ತುಟಿಯ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 36/2019 ಕಲಂ 279, 338 IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.