News

12
  • June

MUDGAL PS UDR.NO 06/2019 U/S 174 CRPC

ಇಂದು ದಿನಾಂಕ:12.06.2019 ರಂದು ಮದ್ಯಾಹ್ನ 2-30 ಗಂಟೆಗೆ ಹೆಚ್.ಜಿ-605 ರವರು ಠಾಣೆಗೆ ಹಾಜರಾಗಿ, ಬಾಗಲಕೋಟ ಸರ್ಕಾರಿ ಆಸ್ಪತ್ರೆಯಿಂದ ಹೆಚ್.ಸಿ-173 ರವರು ಫಿರ್ಯಾದಿಯನ್ನು ಪಡೆದುಕೊಂಡಿದ್ದನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ, ತನ್ನ ಅಣ್ಣನ ಮಗನಾದ ಮೃತ ಶರಣಪ್ಪ ತಂದೆ ಸೋಮಪ್ಪ ಜಗ್ಲಿ ಇತನು ದಿನಾಂಕ :29.05.2019 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ತನ್ನ ಎರಡು ಹೊಸ ಎತ್ತುಗಳೊಂದಿಗೆ ಬಂಡಿ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ಎತ್ತಿನ ಹಗ್ಗವು ಹರಿದು ಬಿದ್ದಿದ್ದು ಅದನ್ನು ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಜೋಲಿಯಾಗಿ ಕೆಳಗೆ ಬಿದ್ದಿದ್ದರಿಂದ ಎತ್ತುಗಳು ಬಂಡಿ ಸಮೇತ ಮುಂದೆ ಹೋಗಿದ್ದರಿಂದ ಬಂಡಿಗಾಲಿಯು ಶರಣಪ್ಪನ ಹೊಟ್ಟೆಯ ಮೇಲೆ ಹಾದು ಬಲಗಡೆ ದುಬ್ಬದ ಮೇಲೆ ಹಾದು ಹೋಗಿದ್ದರಿಂದ ಹೊಟ್ಟೆಯ ಕರಳುಗಳಿಗೆ ಒಳಪೆಟ್ಟಾಗಿ ಮತ್ತು ದುಬ್ಬಕ್ಕೆ ಒಳಪೆಟ್ಟಾಗಿದ್ದು ನಂತರ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟ ಕೆರೂಡಿ  ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಶರಣಪ್ಪನಿಗೆ ಆದ ಗಾಯಗಳಿಂದ ಗುಣಮುಖನಾಗದೆ ಇಂದು ದಿನಾಂಕ :12.06.2019 ರಂದು ಬೆಳಗಿನ ಜಾವ 4-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಆತನ ಸಾವಿನಲ್ಲಿ ನಮ್ಮದು ಯಾರಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಕಾರಣ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.