News

14
  • June

KAVITHAL PS CR.No. 56/2019 U/S. 498(A), 504, 506, 323 ಐಪಿಸಿ

ದಿನಾಂಕ- 12/06/2019 ರಂದು 19-15 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಬಂದು ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾದಿಗೆ ನಿಂಗಪ್ಪನೊಂದಿಗೆ ಸುಮಾರು 15 ವರ್ಷಗಳ ಹಿಂದೆ ಸಂಪ್ರದಾಯವಾಗಿ ಮದುವೆಯಾಗಿದ್ದು ಇರುತ್ತದೆ. ಪಿರ್ಯಾದಿಗೆ ಮೂರು ಜನ ಮಕ್ಕಳು ಸಹ ಇರುತ್ತಾರೆ. ಆರೋಪಿತನು ಪಿರ್ಯಾದಿಗೆ ಸುಮಾರು 05 ವರ್ಷಗಳಿಂದ ಕುಡಿದು ಬಂದು ವಿನಾಕಾರಣವಾಗಿ ಹೊಡೆ ಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು ಪಿರ್ಯಾದಿಯ ಮನೆಯವರು ಸುಮಾರು ಸಲ ಬುದ್ದಿ ಮಾತು ಹೇಳಿದರೂ ಸಹ ಕೇಳದೇ ತನ್ನ ಚಾಳಿಯನ್ನು ಮುಂದುವರೆಯಿಸಿ ದಿನಾಂಕ:11/06/2019 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾದಿ ತಮ್ಮ ಮನೆಯಲ್ಲಿದ್ದಾಗ ಆಕೆಯ ಗಂಡನು  ಕುಡಿದ ಅಮಲಿನಲ್ಲಿ ಮನೆಗೆ ಬಂದು ಪಿರ್ಯಾದಿಗೆ ವಿನಾಃಕಾರಣ ಜಗಳ ಮಾಡುತ್ತಾ ಹೊಲದ ಸಲುವಾಗಿ ಸಹಿ ಮಾಡು ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಕೈಯಿಂದ ಹೊಡೆದು ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ. ವಿಷಯವನ್ನು ತಮ್ಮ ಹಿರಿಯರಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಬಂದು ದೂರು ನೀಡಿದ್ದು ಅಂತಾ ಫಿರ್ಯಾದಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 56/2019 ಕಲಂ–498(),504,506,323,  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.