News

03
  • July

MANVI PS Cr.No. 126/2019 U/S. 279, 337 IPC

         ಇಂದು ದಿನಾಂಕ  13/06/19 ರಂದು ಬೆಳಿಗ್ಗೆ 6.30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮುಖಾಂತರ ತಿಳಿಸಿದ್ದೇನೆಂದರೆ, ಈರೇಶ ತಂದೆ ಯಂಕಪ್ಪ ಬಂಡಾರಿ ಸಾ: ಬೆಟದೂರು  ಈತನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆ ಅಂತಾ ತಿಳಿಸಿದ್ದು ಕಾರಣ ನಾನು ಕೂಡಲೇಮ ಆಸ್ಪತ್ರೆಗೆ ಭೇಟಿ ನೀಡಿ  ಗಾಯಾಳು ಈರೇಶನಿಗೆ ನೋಡಿ ವಿಚಾರಿಸಿ ಹೇಳಿಕೆಯನ್ನು ಪಡೆದುಕೊಂಡಿದ್ದು ಸದರಿ ಹೇಳಿಕೆಯಲ್ಲಿನ ಸಾರಾಂಶವೇನೆಂದರೆ, ಈರೇಶ ಈತನು ತನ್ನ ನಂಬರ್  ಇಲ್ಲದ ಜಾನ್ ಡಿಯರ್ ಟ್ರ್ಯಾಕ್ಟರ ತೆಗೆದುಕೊಂಡು ತಮ್ಮ ಹೊಲಕ್ಕೆ ಟಿಲ್ಲರ್  ಹೊಡೆಯಲು ಅಂತಾ   ಬೆಳಿಗ್ಗೆ 5.30 ಗಂಟೆಯ ಸುಮಾರಿಗೆ ಮಾನವಿ ರಾಯಚೂರ ರಸ್ತೆಯಲ್ಲಿ ಕಪಗಲ್ ಗ್ರಾಮದ ಮುಂದಿನ  ಹಂಪ್ಸನಲ್ಲಿ ಹೊರಟಾಗ ಹಿಂದಿನಿಂದ ಅಂದರೆ ಮಾನವಿ ಕಡೆಯಿಂದ ಬಸಯ್ಯ ತಂದೆ ಶಿವಪುತ್ರಯ್ಯ ರವರು ಮಂಗಳೂರ ಬಸ್ ಡಿಪೋ  ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆ.ಎ.01/ಎಫ್ 9197 ನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಟ್ರ್ಯಾಕ್ಟರ ಹಿಂದೆ ಢಿಕ್ಕಿ ಕೊಟ್ಟಿದ್ದಕ್ಕೆ ಟ್ರ್ಯಾಕ್ಟರ ಚಾಲಕ ಈರೇಶನು ಟ್ರ್ಯಾಕ್ಟರ ಸಹಿತ ಮೂರು ಪಲ್ಟಿಯಾಗಿ ಬಿದ್ದಿದ್ದರಿಂದ  ಈರೇಶನಿಗೆ ರಕ್ತಗಾಯಗಳಾಗಿದ್ದು ಮತ್ತು ಟ್ರ್ಯಾಕ್ಟರ ಜಖಂ ಆಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 126/2019 ಕಲಂ 279.337 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.