News

11
  • July

MANVI PS CR NO-141/2019 U/S 363 IPC

ಇಂದು ದಿನಾಂಕ : 10/07/2019  ರಂದು   ಸಂಜೆ 5.00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗನಾದ  ಸುನೀಲ್ ಕುಮಾರ್ ಈಮಾನವಿಯ ನೇತಾಜಿ ಶಿಕ್ಷಣ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದು  ದಿನಾಂಕ 07.07.2019 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ನೇತಾಜಿ ಶಾಲೆಯ ಗುರುಗಳಾದ ನರಸಿಂಹ ಸಾರ್ ರವರು ನನಗೆ ಪೋನ್  ಮಾಡಿ ನಿಮ್ಮ ಮಗ ಸುನೀಲ್ ಕುಮಾರ್ ನು ಬೆಳಿಗ್ಗೆ 11 ಗಂಟೆ ವರೆಗೆ ನಮ್ಮ ಶಾಳೆಯ ಆವರಣದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಂತರ 11-30 ಗಂಟೆಗೆ ಟ್ಯೂಷನ್ ಗೆ ಬರಬೇಕಾಗಿದ್ದು ಆದರೆ ಇಲ್ಲಿಯ ವರೆಗೆ ಬಂದಿರುವುದಿಲ್ಲ   ಅಂತಾ ತಿಳಿಸಿದ್ದರಿಂದ ಮರುದಿವಸ ದಿನಾಂಕ 08.07.2019 ರಂದು ನಾನು ನನ್ನ ಹೆಂಡತಿ ಬೆಂಗಳೂರುನಿಂದ  ದಿನಾಂಕ 09/07/2019 ರಂದು ಬೆಳಿಗ್ಗೆ ಮಾನವಿಗೆ ಬಂದು ನೇತಾಜಿ ಶಾಲೆಗೆ ಹೋಗಿ ನರಸಿಂಹ ಸಾರ್ ರವರಿಗೆ ಭೇಟಿಯಾಗಿ ಕೇಳಿದಾಗ ಅವರು ನಾವು ಎಲ್ಲಾ ಕಡೆ ಹುಡುಕ್ಕೀದ್ದೀವಿ ಆದರೇ ಸಿಕ್ಕಿರುವುದಿಲ್ಲ ನೀವು ಕೂಡ ಹುಡುಕಾಡಿ ಅಂತಾ ಹೇಳಿದರು ಸಿಗದೇ ಇದ್ದಲ್ಲಿ ಪೊಲೀಸ್ ಠಾಣೆಗೆ ಹೋಗಿ ಕೂರು ಕೊಡುವಂತೆ ತಿಳಿಸಿದರು. ಕಾರಣ ನಾನು ಮತ್ತು ನನ್ನ ಹೆಂಡತಿ ಕೂಡಿ ತಮ್ಮಪೂರಿಗೆ ಹೋಗಿ ಹುಡುಕಾಡಿ ನಮ್ಮ ಸಂಬಂದಿಕರಿಗೆ ಕೇಲಿದ್ದು ಎಲ್ಲಿಯು ಸಿಕ್ಕಿರುವುದಿಲ್ಲ .ಇದನ್ನು ನೋಡಿದರೆ ನಮಗೆ ನಮ್ಮ ಹುಡುಗನಿಗೆ ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಅನ್ನಿಸುತ್ತಿದೆ.  ಕಾರಣ ಮುಂದಿನ ಕ್ರಮ ಜರುಗಿಸ ಬೇಕು ಅಂತಾ ಇದ್ದ ದೂರಿನ ಮೇಲಿಂದ  ಮಾನವಿ ಠಾಣೆ ಗುನ್ನೆ ನಂ. 141/19  ಕಲಂ 363 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.