News

11
  • July

SADAR BAZAR PS CR NO-35/2019 U/S 78(3) KP ACT

ಇಂದು ದಿನಾಂಕ:10-07-2019 ರಂದು ಮಧ್ಯಾಹ್ನ 3.00 ಗಂಟೆಗೆ ಪಿ.ಎಸ್.ಐ.(ಕಾ.ಸು) ರವರು ಠಾಣೆಗೆ ಹಾಜರಾಗಿ, ಗಣಕೀಕೃತ ದೂರನ್ನು, ಮಟಕಾ ಜೂಜಾಟಾದ ಮೂಲ ದಾಳಿ ಪಂಚನಾಮೆಯನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲಿನ ಸಹೀತ ಮೇಲೆ ನಮೂದಿಸಿದ ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಆರೋಪಿತನು ಮಧ್ಯಾಹ್ನ 1-35 ಗಂಟೆಗೆ ರಾಯಚೂರುನ ನಗರದ ತಂಜೀಲ್ ಪೆಟ್ರೋಲ್ ಬಂಕ್ ನ ಪೂರ್ವ ಭಾಗದ ಗೋಡೆಯ ಪಕ್ಕದಲ್ಲಿರುವ ಸಾರ್ವಜನಿಕ ಓಣಿ ರಸ್ತೆಯಲ್ಲಿ, ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ಮಾನ್ಯ ಸಿ.ಪಿ.ಐ ಪೂರ್ವವೃತ್ತರ ರವರ ನೇತೃತ್ವದಲ್ಲಿ ತಾವು ಮತ್ತು ಸಿಬ್ಬಂದಿಯವರು ಸೇರಿ, ಪಂಚರೊಂದಿಗೆ ದಾಳಿ ಮಾಡಿ ಆತನನ್ನು ಹಿಡಿದುಕೊಂಡು, ಮೇಲೆ ನಮೂದಿಸಿದ ಮಟಕಾ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಂಡಿರುವುದಾಗಿ ಪಿರ್ಯಾದಿ ಇದ್ದುದ್ದರ ಮೇಲಿಂದ ಠಾಣಾ ಎನ್.ಸಿ.ನಂಬರ್ 12/19 ಕಲಂ; 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ನೋಂದಾಯಿಸಿಕೊಂಡಿದ್ದು ಇರುತ್ತದೆ. ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಆರೋಪಿತನ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ, ಅನುಮತಿ  ಪಡೆದುಕೊಂಡು, ಸಂಜೆ 4-45 ಗಂಟೆಗೆ ಠಾಣಾ ಅಪರಾಧ ಸಂಖ್ಯೆ: 35/2019 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.