News

11
  • July

SINDHANOOR TOWN PS CR NO-80/2019 U/S 78(3) KP ACT

ದಿನಾಂಕ: 10.07.2019 ರಂದು 5-45 ಪಿ.ಎಮ್ ಸಿಂಧನೂರು ನಗರದ ಜಿ.ವೆಂಕಟರಾವ್ ಕಾಲೋನಿಯಲ್ಲಿರುವ ಶ್ರೀ ಶರಣಬಸವೇಶ್ವರ ಸಿನಿಮಾ ಟಾಕೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ ರೂ 2100/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತ ವಿರುದ್ದ ಠಾಣಾ ಗುನ್ನೆ ನಂ: 80/2019, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.