News

11
  • July

HUTTI PS CR NO -102/2019 U/S 78(111) KP ACT

ದಿನಾಂಕ 10.07.2019 ರಂದು 14.45 ಗಂಟೆಗೆ ಹಟ್ಟಿ ಪಟ್ಟಣದ ಕಾಕಾನಗರ ಕಾಕಾ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳೂವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 43/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  10.07.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ