News

11
  • July

SINDHANOOR RURAL PS CR.NO 107/2019 U/S 87 KP ACT

ಮೇಲ್ಕಂಡ, ದಿನಾಂಕ, ಸಮಯ, ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಸಾಯಂಕಾಲ 5-30 ಗಂಟೆಗೆ ಪಂಚರ ಸಮಕ್ಷಮದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿದ್ದಾಗ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 6 ಜನರನ್ನು ತಾಭಕ್ಕೆ ತೆಗೆದುಕೊಂಡಿದ್ದು ಒಬ್ಬನು ಓಡಿ ಹೋಗಿದ್ದು. ತಾಭಕ್ಕೆ ತೆಗೆದುಕೊಂಡ 6 ಜನರಿಂದ ಹಾಗೂ ಇಸ್ಪೇಟ್ ಜೂಜಾಟದ ಕಣದಿಂದ ಕಾಲಂ.ನಂ.9 ರಲ್ಲಿ ನಮೂಧಿಸಿದ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ, ಸಿಕ್ಕಿಬಿದ್ದ 6-ಜನ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ವಿವರವಾದ ಪಿರ್ಯಾದಿಯನ್ನು ಒಪ್ಪಿಸಿದ್ದರಿಂದ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲೆ ಆರೋಪಿತರ ವಿರುದ್ದ ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ