News

12
  • July

MANVI PS Cr.No.144/2019 U/S 279,337,338 IPC

¥ÀæPÀgÀtzÀ ¸ÀAQë¥ÀÛ ¸ÁgÁA± : ಇಂದು ದಿನಾಂಕ  11-07-2019 ರಂದು ರಾತ್ರಿ 9-00 ಗಂಟೆಗೆ ಶ್ರೀ ನರಸಿಂಹ. ಹೆಚ್,ಸಿ 213 ಮಾನವಿ ಠಾಣೆ ರವರು ರಾಯಚೂರು ಸುರಕ್ಷಾ ಆಸ್ಪತ್ರೆಯಿಂದ ಠಾಣೆಗೆ ಬಂದು ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಇಲಾಜು ಪಡೆಯುತ್ತಿದ್ದ. ಜಿ ಮಲ್ಲಿಕಾರ್ಜುನ ತಂದೆ ಜಿ. ಚನ್ನಪ್ಪ ಸಾಃ ರಾಯಚೂರು ಇವರನ್ನು ವಿಚಾರಿಸಿ ಹಾಜರಿದ್ದ ಆತನ ಹೆಂಡತಿ ಗಾಯಾಳು ಸಾವಿತ್ರಿ ಈಕೆಯು ನೀಡಿ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ 11-07-2019 ರಂದು ಫಿರ್ಯಾದಿ ಮತ್ತು ಆಕೆಯ ಗಂಡ ಇಬ್ಬರು ಮಾನವಿಯಲ್ಲಿ ತಮಗೆ ಪರಿಚಯದ ಪಾರ್ವತಯ್ಯ ಸ್ವಾಮಿ ಸಾಃ ಮಾನವಿ ಇವರ ಮಗನ ಮದುವೆಗೆ  ಬರಲು ಅಂತಾ ರಾಯಚೂರದಿಂದ  ತಮ್ಮ  ಟಯೊಟಾ ಇನ್ನೊವಾ ಕಾರ್ ನಂ ಕೆ.ಎ 01ಎಮ್.ಪಿ 7254 ನೇದ್ದರಲ್ಲಿ ಕುಳಿತುಕೊಂಡು  ರಾಯಚೂರು- ಮಾನವಿ ಮುಖ್ಯ ರಸ್ತೆ ಮೇಲೆ ಫಿರ್ಯಾದಿಯ ಗಂಡನು ನಿಧಾನವಾಗಿ ರಸ್ತೆಯ ತನ್ನ ಎಡಭಾಜು ನಡೆಸಿಕೊಂಡು ಬರುತ್ತಿರುವಾಗ ಇಂದು ಮಧ್ಯಾಹ್ನ 12-15 ಗಂಟೆಯ ಸುಮಾರಿಗೆ  ಎದುರುಗಡೆಯಿಂದ ಅಂದರೆ ಮಾನವಿ ಕಡೆಯಿಂದ- ರಾಯಚೂರು ಕಡೆಗೆ  ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ 35/ಎಫ್-303 ನೇದ್ದರ ಚಾಲಕ ಶಿವರಾಜ ತಂದೆ ತಿಮ್ಮಪ್ಪ ಈತನು ತನ್ನ ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆ ತನ್ನ ಎಡಗಡೆ ಹೊಗದೇ ಬಲಗಡೆ ಬಂದು ಕಪಗಲ್ ಕ್ರಾಸ್ ಹತ್ತಿರ ಫಿರ್ಯಾದಿದಾರರ ಕಾರಿಗೆ ಟಕ್ಕರ್ ಮಾಡಿದ್ದು  ಟಕ್ಕರ್ ಮಾಡಿದ ಪರಿಣಾಮ ಫಿರ್ಯಾದಿದಾರರ ಕಾರು ಜಖಂಗೊಡ್ಡಿದ್ದು ಅಲ್ಲದೇ  ಕೆ.ಎಸ್.ಆರ್.ಟಿ.ಸಿ ಬಸ್ಸು  ರಸ್ತೆಯ ಬದಿಯಲ್ಲಿ ಎಡಮೊಗ್ಗಲಾಗಿ ಬಿದ್ದಿದ್ದು ಬಸ್ಸಿನಲ್ಲಿ ಕುಳಿತಿಕೊಂಡಿದ್ದ ಮೇಲ್ಕಂಡವರಿಗೆ  ಹಾಗೂ  ಕಾರಿನಲ್ಲಿ ಕುಳಿತ್ತಿದ್ದ ಫಿರ್ಯಾದಿಗೆ ಮತ್ತು ಆಕೆಯ ಗಂಡ ಮಲ್ಲಿಕಾರ್ಜುನ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣವಾದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ 35/ಎಫ್-303 ನೇದ್ದರ ಚಾಲಕ ಶಿವರಾಜ ತಂದೆ ತಿಮ್ಮಪ್ಪ  ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ  ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 144/2019 ಕಲಂ 279.337.338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು,