News

12
  • July

SADAR BAZAR PS Cr.No.37/2019 U/S 212 WITH 34 IPC

ಪ್ರಕರಣದ ಸಂಕ್ಷಿಪ್ತ ಸಾರಾಂಶ :  ಇಂದು ದಿನಾಂಕ: 11-07-2019 ರಂದು ರಾತ್ರಿ 8.00 ಗಂಟೆಗೆ ಶ್ರೀ ದಾದಾವಲಿ, ಕೆ.ಹೆಚ್, ಪಿ.ಎಸ್.ಐ, ಪಶ್ಚಿಮ ಪೊಲೀಸ್ ಠಾಣೆ, ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ದಿನಾಂಕ:05.07.2019 ರಂದು ರಾತ್ರಿ 8.45 ಗಂಟೆಗೆ ಗೇಟ್ ಲಕ್ಷ್ಮಣ ತಂದೆ  ಕಾಶಿನಾಥ 53 ವರ್ಷ, ನಾಯಕ, ಇಂಡಸ್ ಇಂಡ್ ಬ್ಯಾಂಕಿನಲ್ಲಿ ರಿಕಾವರಿ ಏಜೆಂಟ್, ಸಾ; ಆಜಾದ ನಗರ ಸ್ಟೇಷನ್ ರೋಡ್, ರಾಯಚೂರು ಈತನ ಕೊಲೆ ಯಾಗಿದ್ದರಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ. 66/2019 ಕಲಂ 143, 147, 148, 341, 504, 506, 302 ಸಹಿತ 149 ಐಪಿಸಿ ಮತ್ತು ಕಲಂ 3 (1), (r), (s), 3 (2), (v), ಎಸ್.ಸಿ/ಎಸ್.ಟಿ ಕಾಯ್ದೆ 1989 ತಿದ್ದುಪಡಿ -2016 ನೇದ್ದರ ಅಡಿಯಲ್ಲಿ ಪ್ರಕರಣ ವರದಿಯಾಗಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ರಾಯಚೂರು ರವರು ಜ್ಞಾಪನ ನೀಡಿ, ಆದೇಶ ನೀಡಿದ್ದರಿಂದ ಸದರಿ ಪ್ರಕರಣದ ಆರೋಪಿತರ ಪತ್ತೆ ಮಾಡಲು ತಾವು ಮತ್ತು ಸಿಬ್ಬಂದಿಯವರಾದ ಶ್ರೀ ಬಷೀರ್ ಅಹ್ಮದ್ ,ಎಸ್., ಶ್ರೀ ಬಸವರಾಜ ಹೆಚ್,ಸಿ 337, ಮತ್ತು ಮಲ್ಲೇಶ ಪಿಸಿ 105 ಇವರೊಂದಿಗೆ ಇಂದು ದಿನಾಂಕಃ 11-07-2019 ರಂದು ಬೆಳಿಗ್ಗೆ 9.30 ಗಂಟೆಗೆ ಠಾಣೆಯಿಂದ ಸರ್ಕಾರಿ ಜೀಪ್ ನಂ ಕೆಎ-36 ಜಿ/460 ನೇದ್ದರಲ್ಲಿ ಆರೋಪಿ ಪತ್ತೆಮಾಡಲು ಹೊರಟಿದ್ದು, ಆರೋಪಿತರು ಟಿಪ್ಪುಸುಲ್ತಾನ್ ರೋಡಿನ ರಜೀಯಾ ಮುಸ್ತಫಾ ಮಸೀದಿಯ ಹಿಂದುಗಡೆ ತಮ್ಮ ತಂದೆಯ ವಾಸದ ಮನೆಯಲ್ಲಿ ಇದ್ದಾರೆಂದು ಮಾಹಿತಿ ಬಂದ ಮೇರೆಗೆ, ಕೂಡಲೇ ಸಿಬ್ಬಂದಿಯೊಂದಿಗೆ ಅಲ್ಲಿಗೆ ಹೋಗಿ, ಮನೆಯ ಮುಂದೆ ಕುಳಿತುಕೊಂಡಿದ್ದ ಆರೋಪಿತರ ಅಜ್ಜನಾದ 1) ಸೈಯದ್ ಮೋದೀನ್ ಸಾಬ್, 70 ವರ್ಷ ಮತ್ತು ಆರೋಪಿತ ತಂದೆಯಾದ 2) ಸೈಯದ್ ಹಬೀಬ್, 50 ವರ್ಷ ರವರುಗಳನ್ನು ತಾವೆಲ್ಲರೂ ಕೊಲೆ ಪ್ರಕರಣದ ಆರೋಪಿತರಾದ ಮಹೆಬೂಬ್ ಮತ್ತು ಬಾಬರ್ ಬಗ್ಗೆ ವಿಚಾರಿಸಿದ್ದು, ಆಗ ಸೈಯದ್ ಮೋದೀನ ಸಾಬ್ ಮತ್ತು ಸೈಯದ್ ಹಬೀಬ್ ರವರುಗಳು “ ನಮ್ಮ ಮಕ್ಕಳು  ನಮ್ಮ ಮನೆಯಲ್ಲಿರುವುದಿಲ್ಲ, ಎಲ್ಲಿ ಇರುತ್ತಾರೋ ಗೋತ್ತಿಲ್ಲ, ಮನೆಯ ಹತ್ತಿರ ಯಾಕೇ ಬಂದೀರಿ ಅಂತಾ ಹಾರಿಕೆ ಉತ್ತರವನ್ನು ನೀಡಿ, ಆರೋಪಿತರ ಬಗ್ಗೆ ಯಾವುದೇ ಸುಳಿವು ನೀಡದೇ ದ್ದುದ್ದರಿಂದ ಪಿರ್ಯಾದಿದಾರರು ಅಲ್ಲಿಂದ ಸ್ವಲ್ಪ ಮುಂದಕ್ಕೆ ಬಂದಿದ್ದು,  ಆಗ ಕೊಲೆ ಪ್ರಕರಣದ ಆರೋಪಿತನ ಪೈಕಿ ಮಹೆಬೂಬ್ ಈತನು ಮನೆಯಿಂದ ಹೊರಗೆ ಓಡಲು ಯತ್ನಿಸಿರುತ್ತಾನೆ. ಆಗ ಕೂಡಲೇ ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಅವನ ಬೆನ್ನು ಹತ್ತಿ ಬೆಳಿಗ್ಗೆ 10.10 ಗಂಟೆಗೆ ಹಿಡಿದು ವಿಚಾರಿಸಿದ್ದು, ತನ್ನ ಹೆಸರು ಮಹೆಬೂಬ್ ತಂದೆ ಹಬೀಬ್ ಸಾಬ್, 20 ವರ್ಷ ಜಾತಿಃ ಮುಸ್ಲಿಂ ಸಾಃ ಕುಲಸುಂಬಿ ಕಾಲೋನಿ ಅಂತಾ ತಿಳಿಸಿ, ದಿನಾಂಕಃ 05-07-2019 ರಂದು ರಾತ್ರಿ 8.45 ಗಂಟೆಗೆ ಗೇಟ್ ಲಕ್ಷ್ಮಣನನ್ನು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಆರೋಪಿತನನ್ನು ಬೆಳಿಗ್ಗೆ 10.20 ಗಂಟೆಗೆ ವಶಕ್ಕೆ ತೆಗೆದುಕೊಂಡು, ಮಾನ್ಯ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ಮುಂದೆ ಹಾಜರುಪಡಿಸಿದ್ದು ಇರುತ್ತದೆ, ಕೊಲೆ ಆರೋಪಿ ಮಹಿಬೂಬ್ ಈತನನ್ನು ಆರೋಪಿತರಿಬ್ಬರು ತಮ್ಮ ವಾಸದ ಮನೆಯಲ್ಲಿಟ್ಟುಕೊಂಡು, ಆಶ್ರಯ ನೀಡಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರಿಬ್ಬರ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ.ನಂ.37/2019 ಕಲಂ:212 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.