News

12
  • July

WEST PS CR.NO.70/2019 U/S 324,504,506 R/W 34 IPC

ಸಾರಾಂಶವೆನಂದರೇ, ದಿನಾಂಕಃ 11-07-2019 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ರಾಂಪೂರ್ ಗ್ರಾಮದ ನಂದಿನ ಸ್ಕೂಲ್  ಮುಂದೆ ಸಾರ್ವಜನಿಕ ಸ್ಥಳದಲ್ಲಿರುವಾಗ್ಗೆ ಆರೋಪಿತರು  ಕುಡಿದ ಅಮಲಿನಲ್ಲಿ ಸ್ಕೂಲ್ ಹತ್ತಿರ ಇದ್ದ ಆರೋಪಿ ನಂ 2 ಈತನು ಫಿರ್ಯಾದಿದಾರನಿಗೆ ಸಿಗರೆಟ್ ತರಲು ತಿಳಿಸಿದ್ದು ಆಗ ಫಿರ್ಯಾದಿದಾರನು ಸಿಗರೆಟ್ ತರಲು ಆಗುವುದಿಲ್ಲ ಕೆಲಸವಿದೆ ಅಂತಾ ತಿಳಿಸಿದ್ದರಿಂದ ಇದೇ ಉದ್ದೇಶದಿಂದ  ಆರೋಪಿತರು ಫಿರ್ಯಾದಿದಾರರೊಂದಿಗೆ ಜಗಳ ತೆಗೆದು ಸಿಗರೆಟ್ ತರಲು ಆಗುವುದಿಲ್ಲ ಎನಲೇ ನೀನೇ ದೊಡ್ಡ ಕೆಲಸ ಮಾಡುತ್ತೀ ಅಂತಾ ಅವಾಚ್ಯವಾಗಿ ಬೈದಾಡಿ ಅಲ್ಲೇ ಬಿದಿದ್ದ ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು  ಸಿಟ್ಟಿನಿಂದ ತನ್ನ ಎಡಗಣ್ಣಿನ ಕೆಳಗಿ ಕಪ್ಪಾಳಕ್ಕೆ ಗುದ್ದಿದ್ದು ಫಿರ್ಯಾದಿದಾರನ ಎಡಕಪ್ಪಾಳಕ್ಕೆ ಮತ್ತು ಬಾಯಿಗೆ ಇಬ್ಬರು ಆರೋಪಿತರು ಕೈಯಿಂದ ಗುದ್ದಿದ್ದು ಇದರಿಂದ ಫಿರ್ಯಾದಿದಾರನ ಎಡ ಕಪ್ಪಾಳ  ಹರಿದು ರಕ್ತಗಾಯವಾಗಿದ್ದಲ್ಲದೇ ಬಾಯಿ ಒಳಗಿನ ಮೇಲ್ ತುಟಿಗೂ ಸಹಾ ರಕ್ತಗಾಯವಾಗಿದ್ದು  ಆಗ ಫಿರ್ಯಾದಿದಾರನು ನೇರವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಹೊಂದಿದ್ದು ವೈದ್ಯರು  ಫಿರ್ಯಾದಿದಾರನ  ಕಪ್ಪಾಳಕ್ಕೆ ಮತ್ತು ಮೇಲ್ ತುಟಿಗೆ ಹೊಲಿಗೆಗಳನ್ನು ಹಾಕಿದ್ದು ಇರುತ್ತದೆ  ಬಗ್ಗೆ ಚಿಕಿತ್ಸೆ ಹೊಂದಿ ತಡವಾಗಿ ಇಂದು  ಬಂದು ದೂರು ಸಲ್ಲಿಸಿಕೊಂಡಿದ್ದು ಇರುತ್ತದೆ. ಆದರಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 70/2019 ಕಲಂ 324,504,506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇದೆ.