News

12
  • July

SINDHANOOR RURAL PS Cr.No.108/2019 U/S 78(3) K.P ACT

ಪ್ರಕರಣದ ಸಂಕ್ಷಿಪ್ತ ಸಾರಾಂಶ: ದಿನಾಂಕ:12-07-2019 ರಂದು 5-30 ಪಿ.ಎಮ್ ಸಮಯದಲ್ಲಿ ಹಟ್ಟಿ ಗ್ರಾಮದಲ್ಲಿ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ನೇದ್ದವನು ಜನರನ್ನು 01 ರೂ. ಗೆ 80 ರೂ ಕೊಡುತ್ತೇವೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೇದ್ದವನನ್ನು ಹಿಡಿದು ಅವನಿಂದ 1) ನಗದು ಹಣ ರೂ. 880/-, 2) ಮಟಕಾ ಪಟ್ಟಿ 3) ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಪಟ್ಟಿ ಆರೋಪಿ 02 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮೇಲಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ