News

12
  • July

MANVI PS Cr.No.19/2019 U/S CRPC

ಸಂಕ್ಷೀಪ್ತ ಸಾರಾಂಶ:- ಇಂದು ದಿನಾಂಕ 12-07-2019 ರಂದು ಮಧ್ಯಾಹ್ನ  2-00 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ನೀಡಿದ್ದು ಸದರಿ ದೂರಿನ ಸಾರಾಂಶವೆನೆಂದರೆ ಫಿರ್ಯಾದಿದಾರಳ ಗಂಡನಾದ ಜಲಾಲಿ ಈತನು ತನ್ನ ಮೋಟರ್ ಸೈಕಲ್ ಮೇಲೆ ನಿನ್ನೆ ದಿವಸ  ದೇವಿಪುರ ಗ್ರಾಮಕ್ಕೆ ಹೋಗಿ ತನ್ನ ಚಿಕ್ಕಮ್ಮಳನ್ನು ಮಾತನಾಡಿಸಿ ಇಂದು ವಾಪಸ್ ತನ್ನ ಊರಾದ ನಂದಿಹಾಳ ಗ್ರಾಮಕ್ಕೆ ಮಾನವಿ- ಸಿಂದನೂರು ಮುಖ್ಯ ರಸ್ತೆಯ ಮೇಲೆ ತನ್ನ ಮೋಟರ್ ಸೈಕಲ್ ಮೇಲೆ ಬರುವಾಗ ಗಾಳಿ ದುರುಗಮ್ಮ ದೇವಸ್ಥಾನದ ಹತ್ತಿರ ಮಧ್ಯಾಹ್ನ 12-35 ಗಂಟೆಯ ಸುಮಾರಿಗೆ ಹೃದಯಘಾತವಾಗಿದ್ದು  ಆಗ ಆತನು ತನ್ನ ಮೋಟರ್ ಸೈಕಲನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದು  ಸ್ವಲ್ಪ ಹೊತ್ತಿನಲ್ಲಿ ಮೃತಪಟ್ಟಿದ್ದು  ಇರುತ್ತದೆ. ಈತನ ಮರಣದಲ್ಲಿ ಯಾರ ಮೇಲು ಯಾವುದೇ ಸಂಶಯ ದೂರು ಇರುವುದಿಲ್ಲ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ  ಯು.ಡಿ.ಆರ್ ನಂ 19/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.