News

12
  • July

RAICHUR TRAFFIC PS Cr.No : 42/2019/2019 U/S 279,304(A)IPC 187 IMV ACT

ಸಂಕ್ಷೀಪ್ತ ಸಾರಾಂಶ:-  ಇಂದು ದಿನಾಂಕ: 12-07-2019 ರಂದು  2030 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ,  ಲಿಖಿತ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-03-07-2019 ರಂದು 1430  ಗಂಟೆಗೆ ರಾಯಚೂರು ನಗರದ ಮಾಣಿಕ ನಗರ ಕ್ರಾಸ್ ನ ಅಂಜಿನೇಯ್ಯ ಗುಡಿ ಮುಂದಿನ ರಸ್ತೆಯಲ್ಲಿ ವೆಂಕಟೇಶ್ ಇವರು ತಮ್ಮ ನಂಬರ್ ಇಲ್ಲದ ಟಿವಿಎಸ್ ಎಕ್ಸ ಎಲ್ ಸೂಪರ್ ಗಾಡಿಯನ್ನು ಬಿ.ಆರ್.ಬಿ. ವೃತ್ತದ ಕಡೆಯಿಂದ ಮಾಣಿಕ ನಗರದಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುವಾಗ ಆರೋಪಿತನು ಟ್ರ್ಯಾಕ್ಟರ್ & ಟ್ರ್ಯಾಲಿಯನ್ನು ಐ.ಟಿ.ಐ ಕಾಲೇಜು ಕಡೆಯಿಂದ ಆರ್.ಟಿ.ಓ ವೃತ್ತದ ಕಡೆಗೆ ಹೋಗುವಾಗ ಟ್ರ್ಯಾಕ್ಟರ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಯಾವುದೇ ಸೂಚನೆ ಇಲ್ಲದೇ ಟ್ರ್ಯಾಕ್ಟರನ್ನು ಏಕಾ ಏಕೀಯಾಗಿ ಆರ್.ಟಿ.ಓ ವೃತ್ತದ ಕಡೆಗೆ ತಿರುಸಿದ್ದರಿಂದ ಟ್ರ್ಯಾಲಿಯ ಬಲಗಡೆಯ ಹಿಂದಿನ ಗಾಲಿ ವೆಂಕಟೇಶನಿಗೆ ಟಕ್ಕರ್ ಕೊಟ್ಟಿದ್ದರಿಂದ ವೆಂಕಟೇಶನು ಕೆಳಗಡೆ ಬಿದ್ದು, ತಲೆಗೆ ಭಾರೀ ರಕ್ತಗಾಯಗಳಾಗಿ ಇಲಾಜು ಕುರಿತು ನವೋದಯ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಹೈದರಾಬಾದನ ಗಾಂಧಿ ಆಸ್ಪತ್ರಗೆ ಸೇರಿಕೆ ಮಾಡಿದಾಗ ವೆಂಕಟೇಶನಿಗೆ ವಾಹನಅಪಘಾತದಲ್ಲಿ ಆದ ಗಾಯಗಳ ಭಾದೆಯಿಂದ ಗುಣಮುಖನಾಗದೇ ದಿನಾಂಕ;-12-07-2019 ರಂದು ಬೆಳಗಿನ ಜಾವ 0530 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿದಾರರು ತಮ್ಮಅಣ್ಣನಿಗೆ ಬದುಕಿಸಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರಿಂದ ಈ ದೂರನ್ನು ಕೊಡಲು ತಡವಾಗಿರುತ್ತದೆ.ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 42/2019  ಕಲಂ. 279, 304(A) IPC 187 IMV ACT  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.