News

14
  • July

RCR [R] PS PAR NO;-- 112/2019 U/S 110 [E][G] CRPC

ಎದುರುಗಾರರು ಈಗ್ಗೆ ಸುಮಾರು 1 ತಿಂಗಳಿನಿಂದಾ ಇಬ್ರಾಹಿಂದ ದೊಡ್ಡಿ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ತನ್ನ ತಾಯಿ ಆಂಜನಮ್ಮ ಉಮ್ರಾಳದೊಡ್ಡಿ ಈಕೆಗೆ ಕುಡಿಯಲು ಹಣ ಕೇಳಿ ಹೊಡೆ ಬಡೆ ಮಾಡುತ್ತಿದ್ದು, ಅದನ್ನು ತಡೆಯಲು ಬಂದ ಜನರಿಗೆ ಹೊಡೆ ಬಡೆ ಮಾಡುವುದಾಗಿ ಹೆದರಿಸುತ್ತಿದ್ದು, ಕುಡಿದ ಅಮಲಿನಲ್ಲಿ ಸಾರ್ವಜನಿಕರಿಗೆ ಸಹಾ ಕುಡಿಯಲು ಹಣ ಕೊಡುವಂತೆ ಹೆದರಿಸುವುದು ಬೆದರಿಸುವುದು ಮಾಡುತ್ತಾ ಇದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದು, ಗ್ರಾಮದಲ್ಲಿ ಸಾರ್ಜಜನಿಕರಲ್ಲಿ “ಯಾರು ನನಗೆ ಏನು ಮಾಡಿಕೊಳ್ಳತ್ತಾರೆ” ಅಂತಾ ಕೂಗಾಡುವುದು ಮಾಡುತ್ತಾ ಸಾರ್ವಜನಿಕರ ಶಾಂತತಾ ಭಂಗವನ್ನುಂಟು ಮಾಡಿದ್ದಲ್ಲದೇ, ಸದರಿಯವನನ್ನು ಹೀಗೇ ಬಿಟ್ಟಲ್ಲಿ ಇನ್ನಾವುದಾದರೂ ಆಸ್ತಿಪಾಸ್ತಿ ಅಥವಾ ಜೀವ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುವದಾಗಿ ಖಚಿತ ಭಾತ್ಮಿ ಮೇರೆಗೆ ಫಿರ್ಯಾದಿದಾರರು ಸದರಿಯವನನ್ನು ಇಂದು ದಿನಾಂಕ: 14.07.2019 ರಂದು ಬೆಳಿಗ್ಗೆ 09.30 ಗಂಟೆಗೆ ಇಬ್ರಾಹಿಂದೊಡ್ಡಿ ಗ್ರಾಮದ ಕ್ರಾಸನಲ್ಲಿ ಹಿಡಿದುಕೊಂಡು ಠಾಣೆಗೆ ಬೆಳಿಗ್ಗೆ 10.00 ಗಂಟೆಗೆ ಠಾಣೆಗೆ ಕರೆತಂದು ನನ್ನ ಮುಂದೆ ಹಾಜರ ಪಡಿಸಿದ್ದು, ಸದರಿಯವನಿಗೆ ವಿಚಾರಿಸಲು ಆತನು ತನ್ನ ತಪ್ಪೊಪ್ಪಿಕೊಂಡಿದ್ದು ಆ ಮೇರೆಗೆ ಹಾಗೂ ದೂರಿನ ಸಾರಾಂಶದ ಮೇಲಿಂದ ಈ ಪ್ರಕರಣ ದಾಖಲಿಸಿದ್ದು ಇರುತ್ತದೆ.