News

17
  • July

SADAR BAZAR PS Cr.No.40/2019 U/S. 341,504,323,506, IPC

ಇಂದು ದಿನಾಂಕ:16-07-2019 ರಂದು ಮಧ್ಯಾಹ್ನ 1.20 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಫೋನ್ ಮೂಲಕ ಗೋಪಾಲರೆಡ್ಡಿ ತಂದೆ ಗೋವಿಂದಪ್ಪ, ಸಾ:ಮಡ್ಡಿಪೇಟೆ, ರಾಯಚೂರು ಈತನು ಹಲ್ಲೆಗೊಳಗಾಗಿ ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆಂದು ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಆ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿದಾರನನ್ನು ವಿಚಾರಣೆ ಮಾಡಲಾಗಿ, ಸದರಿಯವರು ಲಿಖಿತ ದೂರನ್ನು ಹಾಜರುಪಡಿಸಿದ್ದು, ಅದನ್ನು ಪಡೆದುಕೊಂಡು ಮಧ್ಯಾಹ್ನ 3.30 ಗಂಟೆಗೆ ಪೊಲೀಸ್ ಠಾಣೆಗೆ ಬಂದು ಪರಿಶೀಲಿಸಲಾಗಿ, ಸದರಿ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಬೆಲ್ಲಂ ರಾಕೇಶ ರವರಲ್ಲಿ ಪಿರ್ಯಾದಿದಾರರು ಹತ್ತಿ ಕಾಳಿನ ವ್ಯವಹಾರ ಮಾಡಿ, ಶೂರಿಟಿಗಾಗಿ 6 ಖಾಲಿ ಚೆಕ್ ಗಳನ್ನು ಕೊಟ್ಟಿದ್ದು, ವ್ಯವಹಾರ ಸರಿ ಹೊಂದದ ಕಾರಣ ಚೆಕ್ ಗಳನ್ನು ವಾಪಸ್ ಕೊಡುವಂತೆ ಪಿರ್ಯಾದಿದಾರರು ಆರೋಪಿತನಿಗೆ ಕೇಳಿದ್ದು, ಆರೋಪಿತನು ಚೆಕ್ ಗಳನ್ನು ವಾಪಸ್ ಕೊಡದೇ ಪಿರ್ಯಾದಿದಾರನ ಮೇಲೆ ಚೆಕ್ ಬೌನ್ಸ್ ಕೇಸ್ ಹಾಕಿರುತ್ತಾನೆ. ಇಂದು ದಿನಾಂಕ:16-07-2019 ರಂದು ಬೆಳಿಗ್ಗೆ 10.30 ಗಂಟೆ ಸುಮಾರು ಪಿರ್ಯಾದಿದಾರರು ಸಿಯಾತಲಾಬ್ ಏರಿಯಾದಲ್ಲಿನ ಭದ್ರಿ ಮೆಕಾನಿಕ್ ಅಂಗಡಿ ಹತ್ತಿರ ತಮ್ಮ ಮೋಟಾರ್ ಸೈಕಲ್ ರಿಪೇರಿಗಾಗಿ ಹೋದಾಗ, ಆರೋಪಿತನು ಅಲ್ಲಿಗೆ ಬಂದು, ಪಿರ್ಯಾದಿದಾರನನ್ನು ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ರೊಕ್ಕ ಕೊಡು ಅಂತಾ ಅಂದು, ಕೈಯಿಂದ ಹೊಟ್ಟೆಗೆ ಹೊಡೆದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾಧಿಯ ಆಧಾರದ ಮೇಲಿಂದ ಆರೋಪಿತನ ವಿರುದ್ದ ಠಾಣಾ ಅಪರಾಧ ಸಂಖ್ಯೆ:40/2019 ಕಲಂ: 341, 504, 323, 506 ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.