News

14
  • August

MANVI 168/19 U/S 78(3) K.P. ACT

ಇಂದು ದಿನಾಂಕ 14/08/19 ರಂದು ಸಾಯಂಕಾಲ  6.00 ಗಂಟೆಗೆ  ಮಾನ್ಯ ಸಿ.ಪಿ.ಐ ಮಾನವಿ ರವರು ಮಟಕಾ ದಾಳಿಯಿಂದ ವಾಪಾಸ ಬಂದು ಸಾಯಂಕಾಲ 6.15 ಗಂಟೆಗೆ ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ಇಂದು ದಿನಾಂಕ 14-08-2019 ರಂದು ಮಾನವಿ ಠಾಣಾ ವ್ಯಾಪ್ತಿಯ ಪೋತ್ನಾಳ ಗ್ರಾಮದ ಬಸ್ಟ್ಯಾಂಡ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ.ಐ  ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ  ಪೋತ್ನಾಳಗೆ  ಹೋಗಿ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ರಂಗಪ್ಪ ತಂದೆ ಬಸಪ್ಪ ಗುಜ್ಜಲರ್ , 20 ವರ್ಷ, ನಾಯಕ. ಸಾ : ಸರಕಾರಿ ಆಸ್ಪತ್ರೆ ಹಿಂದೆ ಪೋತ್ನಾಳ ತಾಃ ಮಾನವಿ ಈತನ ಮೇಲೆ ಸಾಯಂಕಾಲ 4.30 ಗಂಟೆಗೆ ದಾಳಿ ಮಾಡಿದಾಗ  ಸದರಿ ವ್ಯಕ್ತಿಯು ಸಿಕ್ಕಿ ಬಿದ್ದಿದ್ದು ಸದರಿಯವನ  ಅಂಗ ಜಡ್ತಿ ಮಾಡಿ ಅವನಿಂದ  ಮಟಕಾ ಜೂಜಾಟದ 1] ನಗದು ಹಣ ರೂ  2240/-  2]  ಮಟಕಾ ನಂಬರ್ ಬರೆದ ಒಂದು ಚೀಟಿ   3]  ಒಂದು ಬಾಲ್ ಪೆನ್ನು  ಗಳನ್ನು ಜಪ್ತು ಮಾಡಿಕೊಂಡು ಸದರಿ ಯವನಿಗೆ ಮಟಕಾ ಪಟ್ಟಿಯನ್ನು ಯಾರಿಗೂ ಕೊಡುತ್ತಿ ಅಂತಾ ಕೇಳಿದಾಗ ಶಿವುಕುಮಾರ ಮನಗೂಳಿ  ಸಾ: ಲಿಂಗಸಗೂರು ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಕಾರಣ ಸಿ.ಪಿ.ಐ ಸಾಹೇಬರು ಸೆರೆಸಿಕ್ಕ ಆರೋಪಿತನಿಗೆ  ತಮ್ಮ ವಶಕ್ಕೆ ತೆಗೆದುಕೊಂಡು ಸಾಯಂಕಾಲ 4.30 ಗಂಟೆಯಿಂದ ಸಾಯಂಕಾಲ 5.30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆ

            ಕಾರಣ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದುಕಾರಣ ಸದರಿ ಆರೋಪಿತರ ಮೇಲೆ ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 168/2019 ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.