News

15
  • August

Sindhanoor Rural PS Cr No119./2019 U/S 279,304(A) IPC

¥ÀæPÀgÀtzÀ ¸ÀAQëÃ¥ÀÛ ¸ÁgÁA±À:-ಮೇಲ್ಕಂಡ ದಿನಾಂಕ, ಸಮಯ, ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಮೃತ ಬಲಸು ದಿಲೀಪ್ ಕುಮಾರ ಈತನು ಮೋಟಾರ್ ಸೈಕಲ್ ನಂ.ಕೆ.ಎ.36-ಇಎ-4028 ನೇದ್ದರಲ್ಲಿ ಸಿಂಧನೂರು ಕಡೆಯಿಂದ ತಮ್ಮ ವೆಂಕಟಗಿರಿ ಕ್ಯಾಂಪಿಗೆ ಸಿಂಧನೂರು-ಗಂಗಾವತಿ ಮುಖ್ಯ ರಸ್ತೆಯಲ್ಲಿ ಗೋರೆಬಾಳ ಗ್ರಾಮದ ಬಲ್ಲೇಶಗೌಡನ ಹೊಲದ ಹತ್ತಿರ ಮುಖ್ಯ ರಸ್ತೆಯ ಮೇಲೆ ಹೋಗುತ್ತಿರುವಾಗ ಎದುರುಗಡೆಯಿಂದ ಲಾರಿ ನಂ.ಕೆ.ಎ.16-ಡಿ-2744 ನೇದ್ದರ ಚಾಲಕನು ತನ್ನ ಲಾರಿಯನ್ನು ಗಂಗಾವತಿಯ ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ದಿಲೀಪ್ ಕುಮಾರ ಈತನ ಮೋಟಾರ್ ಸೈಕಲ್ ಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದರಿಂದ ದಿಲೀಪ್ ಕುಮಾರನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಆತನಿಗೆ ಎಡಭಾಗದ ದವಡೆ ಹರಿದು ಭಾರೀ ರಕ್ತಗಾಯವಾಗಿದ್ದು, ಹಣೆಗೆ ಬಾರೀ ರಕ್ತಗಾಯವಾಗಿದ್ದು ಮತ್ತು ನೆತ್ತಿಯ ಮೇಲೆ ತಲೆ ಹೊಡೆದಿದ್ದು, ಬಲಕಾಲು ಮೋಣಕಾಲಿನ ಕೆಳಗಡೆ ಎಲುಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಘಟನೆಯು ಲಾರಿ ಚಾಲಕನ ನಿರ್ಲಕ್ಷತನದಿಂದ ಜರುಗಿದ್ದು ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.