News

16
  • August

Sindhanoor Rural PS Cr No120./2019 U/S 279, 337, 338, 304(A)IPC & 187 IMV Act

ಪ್ರಕರಣ ಸಾರಾಂಶ:ದಿನಾಂಕ:15-08-2019 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಗಂಗಾವತಿ-ಸಿಂಧನೂರು ರಸ್ತೆಯಲ್ಲಿ ಕೆ.ಹಂಚಿನಾಳಕ್ಯಾಂಪ್ ದಾಟಿ ಗೊರೆಬಾಳ ಇನ್ನೂ 01 ಕಿ.ಮೀ ದೂರ ಇರುವಾಗ ರಸ್ತೆಯ ತಿರುವಿನಲ್ಲಿ ಫಿರ್ಯಾದಿದಾರನು ತಾನು ಚಾಲನೆ ಮಾಡುತ್ತಿದ್ದ ಕಾರ್ ನಂ.ಕೆಎ-36/ಎಮ್-9871 ರಲ್ಲಿ ತನ್ನ ಸಂಗಡ ಶಿವಶಂಕರಪ್ಪ ಮತ್ತು ಅಶೋಕ ಇವರಿಗೆ ಕೂಡಿಸಿಕೊಂಡು ಗಂಗಾವತಿಯಿಂದ ಮಾನ್ವಿಗೆ ಹೊರಟು ದಾರಿಯಲ್ಲಿ ಸಿಂಧನೂರು ಕಡೆಗೆ ಕಾರ್ ನಡೆಸಿಕೊಂಡು ಬರುವಾಗ ಎದುರಿಗೆ ಸಿಂಧನೂರು ಕಡೆಯಿಂದ ಆರೋಪಿತನು ಲಾರಿ ನಂ.ಎಪಿ-30/ಯು-0924 ನೇದ್ದನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಫಿರ್ಯಾದಿದಾರ ಕಾರಿಗೆ ಢಿಕ್ಕಿಪಡಿಸಿದ್ದಕ್ಕೆ ಕಾರ್ ಚಾಲನೆ ಮಾಡುತ್ತಿದ್ದ ಫಿರ್ಯಾದಿದಾರನಿಗೆ ಎದೆಗೆ ಒಳಪೆಟ್ಟಾಗಿದ್ದು, ಬಲಗಾಲು ಮೊಣಕಾಲು ಹತ್ತಿರ ಒಳಪೆಟ್ಟು, ರಕ್ತಗಾಯ ಮತ್ತು ಹಣೆಗೆ ರಕ್ತಗಾಯವಾಗಿದ್ದು, ಶಿವಶಂಕರಪ್ಪನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿದ್ದು ಅಶೋಕನಿಗೆ ತಲೆಗೆ ಭಾರಿ ಪೆಟ್ಟಾಗಿ ಬಾಯಿ, ಮೂಗು ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತಪಡಿಸಿದ ನಂತರ ಆರೋಪಿ ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಎಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ.120/2019, ಕಲಂ. 279, 337, 338, 304(ಎ) ಐಪಿಸಿ ಹಾಗೂ ಕಲಂ. 187 ಐ.ಎಮ್.ವಿ ಕಾಯ್ದೆ ರೀತ್ಯ ದಾಖಲಿಸಿರುತ್ತೇನೆ.