News

17
  • August

JALAHALLI PS CR.NO.79/2019 U/S .279, 337, 338 IPC

ದಿನಾಂಕ 14-08-2019 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ಮನೆಯ ಹತ್ತಿರ ಇದ್ದಾಗ ಆರೋಪಿ ರಂಜನ್ ಸಾಬನು ಬಂದು ಡಾಬಾದಲ್ಲಿ ಕೆಲಸ ಇದೆ  ಹೋಗೊಣ ಬಾ ಅಂತಾ ಕರೆದು ತನ್ನ ಮೋಟಾರ್ ಸೈಕಲ್ ನಂ.ಕೆ.ಎ-05 ಹೆಚ್.ಬಿ-4205 ನೇದ್ದರಲ್ಲಿ ಪಿರ್ಯಾದಿದಾರರನ್ನು ಕೂಡಿಸಿಕೊಂಡು ಹೊರಟು ಬೆಳಿಗ್ಗೆ 09-15 ಗಂಟೆ ಸುಮಾರಿಗೆ ಜಾಲಹಳ್ಳಿಯ ಕಮಲದಿನ್ನಿ ಕ್ರಾಸ್ ಹತ್ತಿರ ಆರೋಪಿತನು ಮೋಟಾರ್ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿದ್ದರಿಂದ ಕೆಳಗಡೆ ಬಿದ್ದಿದ್ದರಿಂದ ಪಿರ್ಯಾದಿದಾರನಿಗೆ ಬಲಗಾಲು ಮೊಣಕಾಲಿನ ಚಿಪ್ಪಿಗೆ ಮತ್ತು ಬಲ ಚೆಪ್ಪೆಗೆ ಭಾರಿ ಒಳಪೆಟ್ಟು ಮತ್ತು ರಕ್ತಗಾಯವಾಗಿದ್ದು ಇರುತ್ತದೆ. ಚಿಕಿತ್ಸೆ ಕುರಿತು ಜಾಲಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರರಾದ ರಂಜನ್ ಈತನ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.