News

17
  • August

MANVI PS CR.NO.169/2019 .U/S .498 (ಎ),504 323. 506 ಐ.ಪಿ.ಸಿ

ಇಂದು ದಿನಾಂಕ  16-08-2019  ರಂದು ಬೆಳಗ್ಗೆ ರಿಮ್ಸ ಬೋದಕ ಆಸ್ಪತ್ರೆ ರಾಯಚೂರ ಓ.ಪಿ ಯಿಂದ ಪೋನ್ ಮೂಲಕ ಒಂದು ಎಮ್.ಎಲ್.ಸಿ ವಸೂಲಾಗಿದ್ದು ಅದರಲ್ಲಿ ಶ್ರೀಮತಿ ರೇಣುಕಾ ಗಂಡ ವಿರೇಶ ಸಾಃ ಮಲ್ಲಿನ ಮಡಗು ಈಕೆಯು ಬಳೆ ಚೂರುಗಳನ್ನು ನುಂಗಿ ಅಸ್ವಸ್ಥಗೊಂಡು ಇಲಾಜು ಕುರಿತು ಸೇರಿಕೆಯಾಗಿರುತ್ತಾಳೆ ಅಂತಾ ಇದ್ದ ಮೇರೆಗೆ ಕೂಡಲೇ ರೀಮ್ಸ ಆಸ್ಪತ್ರೆ ರಾಯಚೂರಿಗೆ ಬೇಟಿ ನೀಡಿ ಇಲಾಜು ಪಡೆಯುತ್ತಿದ್ದ ಶ್ರೀಮತಿ ರೇಣುಕ ಈಕೆಯನ್ನು ವಿಚಾರಿಸಿ ಆಕೆಯ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 8-30 ಗಂಟೆಗೆ ಬಂದಿದ್ದು ಸದರಿ ಫಿರ್ಯಾದಿಯ ಸಾರಾಂಶ ವೆನೆಂದರೆ ಫಿರ್ಯಾದಿದಾರಳಿಗೆ ಆರೋಪಿತನೊಂದಿಗೆ ಈಗ್ಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು ಮದುವೆಯಾದ ನಂತರ 1 ವರ್ಷದವರೆಗೆ ಇಬ್ಬರು ಅನ್ಯೋನ್ಯವಾಗಿದ್ದು ನಂತರ ಆರೋಪಿತನು ಫಿರ್ಯಾದಿದಾರಳಿಗೆ ವಿನಾಃ ಕಾರಣ ಶೀಲದ ಬಗ್ಗೆ ಶಂಕಿಸಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಾ ಬಂದಿದ್ದು ಇದರಿಂದ ಫಿರ್ಯಾದಿದಾರಳು ತನ್ನ ತವರು ಮನೆಯಾದ ಮಲ್ಲಿನ ಮಡಗು ಗ್ರಾಮಕ್ಕೆ ಬಂದಿದ್ದು   ದಿನಾಂಕ 04-08-2019 ರಂದು ಆರೋಪಿತನು ಮಲ್ಲಿನ ಮಡಗು ಗ್ರಾಮಕ್ಕೆ ಬಂದು ಫಿರ್ಯಾದಿ ಮತ್ತು ಆಕೆಯ ತಂದೆ ತಾಯಿವರೊಂದಿಗೆ ಜಗಳ ತೆಗೆದು ಫಿರ್ಯಾದಿಗೆ ನಾನು ಇನ್ನೊಂದು ಮದುವೆಯಾಗುತ್ತೇನೆ ಬರೆದುಕೊಡು ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ  ಮಾಡಿ ಜೀವದ ಬೇದರಿಕೆ ಹಾಕಿದ್ದು ಅಲ್ಲದೇ ದಿನಾಂಕ 15-08-2019 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಆರೋಪಿತನು ಫಿರ್ಯಾದಿದಾರಳಿಗೆ ಪೋನ್ ಮಾಡಿ ಪುನಾಃ ಶೀಲದ ಶಂಕೆ ವಿಷಯಕ್ಕೆ ಸಂಬಂದಿಸಿದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದರಿಂದ ಫಿರ್ಯಾದಿರಳು  ಆರೋಪಿತನ ಕಿರುಕೂಳಕ್ಕೆ ಮನಸ್ಸಿಗೆ ಬೆಜಾರು ಮಾಡಿಕೊಂಡು ಬಳೆ ಚೂರುಗಳನ್ನು ನುಂಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ  ಹೇಳಿಕೆಯ ದೂರಿನ ಸಾರಾಂಶ ಮೇಲಿಂದ ಮೇಲಿಂದ ಠಾಣಾ ಗುನ್ನೆ ನಂ 169/2019 ಕಲಂ 498 (ಎ) 504.323.506 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.