News

17
  • August

MANVI PS CR NO 170/19 U/S 279,337 IPC &187 IMV ACT

ಇಂದು ದಿನಾಂಕ  17/08/2019 ರಂದು 20.00 ಗಂಟೆಗೆ  ಮಾನವಿ ಸರಕಾರಿ ಆಸ್ಪತ್ರೆ ಯಿಂದ ಫೊನ್ ಮಾಡಿ ಶಿವರಾಜ  ಎನ್ನುವ ವ್ಯಕ್ತಿಯು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆ ಅಂತಾ ತಿಳಿಸಿದ್ದು ಕೂಡಲೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ಕಂಡು ಅಲ್ಲಿಯೇ ಇದ್ದ ಗಾಯಾಳುವಿನ ತಂದೆಯಾದ ದೊಡ್ಡ ರಾಮಣ್ಣನಿಗೆ ವಿಚಾರಿಸಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಶಿವರಾಜ ಈತನು ಮಾನವಿಗೆ ತನ್ನ  ಮೋ.ಸೈ ನಂ ಕೆ.ಎ.36/ವೈ 9505 ರ ಮೇಲೆ ಬಂದು ವಾಪಾಸ ಮಾನವಿಸ-ಸಿಂಧನೂರ ರಸ್ತೆ ಹಿಡಿದು ನಸಲಾಪೂರಿಗೆ ಹೋಗುವಾಗ  ಶಿವರಾಜನು ತನ್ನ ಮೋಟಾರ್ ಸೈಕಲ್ ನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋರಟಿದ್ದು ಸಾಯಂಕಾಲ 7.00 ಗಂಟೆಯ ಸುಮಾರಿಗೆ  ಶಿವರಾಜನ ಮುಂದೆ ಒಂದು  ಟ್ರ್ಯಾಕ್ಟರನ ನೀರಿನ ಟ್ಯಾಂಕರ್ ಹೊರಟಿದ್ದು ಟ್ರ್ಯಾಕ್ಟರ ಚಾಲಕನು  ಇಂಡಿಕೇಟರ್ ಹಾಕದೇ ಏಕಾಏಕಿ ಅಲಕ್ಷತನದಿಂದ ತನ್ನ ಟ್ರ್ಯಾಕ್ಟರ್ ಬ್ರೇಕ್ ಹಾಕಿ  ಸ್ಲೋ ಮಾಡಿ ರಸ್ತೆಯ  ಎಡಗಡೆ  ಇರುವ ಪ್ರಭುರಾಜ ಕೊಡ್ಲಿ ಇವರ ಶಾಲೆಯ ಕಡೆಗೆ ತಿರುಗಿಸಿದಾಗ   ಶಿವರಾಜನ ಮೋಟಾರ್ ಸೈಕಲ್ ಸಹ ವೇಗವಾಗಿದ್ದರಿಂದ ನಿಯಂತ್ರಣಗೊಳಿಸಲಾಗದೇ ಟ್ರ್ಯಾಕ್ಟರನ ಟ್ಯಾಂಕರಿಗೆ  ಢಿಕ್ಕಿ ಕೊಟ್ಟು ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಗಾಯಗೊಂಡಿದ್ದು ಇರುತ್ತದೆ., ಮತ್ತು ಘಟನಾ ನಂತರ  ಟ್ರ್ಯಾಕ್ಟರ ಚಾಲಕನು ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು 21.30 ಗಂಟೆಗೆ ವಾಪಾಸ ಠಾಣೆಗೆ ಬಂದು ಸದರಿ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  170/19  ಕಲಂ 279,337 ಐ.ಪಿ.ಸಿ. ಸಹಿತ  187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈ ಕೊಂಡೆನು.