News

07
  • November

WEST PS CR.NO. 114/2019 U/S 408,406,420 IPC

ಇಂದು ದಿನಾಂಕ 06.11.2019 ರಂದು ಸಾಯಂಕಾಲ 6-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮ ದೂರು ಸಲ್ಲಿಸಿದ್ದೇನೆಂದರೆ, ವಾಯಾ ಫಿನಸರ್ವ ಪ್ರವೈಟ್ ಲಿಮೆಟೆಡ್ ಸಂಸ್ಥೆಯು ಸನ್ 2016 ನೇ ಸಾಲಿನಿಂದ ರಾಯಚೂರು ತಾಲೂಕಿನಲ್ಲಿ ಸ್ಥಾಪನೆಗೊಂಡಿದ್ದು, ಸದರಿ ಸಂಸ್ಥೆಯಿಂದ ಬಡ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರ ಗುಂಪುಗಳಿಗೆ ಕಡಿಮೆ ಬಡ್ಡಿದರದಲ್ಲಿ ಲಾಭ ಬರುವ ಕೆಲಸಗಳಿಗೆ ತಮ್ಮ ಸಂಸ್ಥೆಯಿಂದ ಗುಂಪುಗಳನ್ನು ರಚನೆ ಮಾಡಿಕೊಂಡು ಸದರಿ ಗುಂಪಿನಲ್ಲಿ ನಾಯಕಿ ಅಂತಾ ಗುರುತಿಸಿಕೊಂಡು ಸಂಸ್ಥೆಯ ನಿಯಮಾವಳಿಗಳನ್ನು ಮನವರಿಕೆ ಮಾಡಿ ಸದಸ್ಯತ್ವ ಪಡೆದ ಮಹಿಳೆಯರಿಗೆ ಅಭಿವೃದ್ಧಿ ದೃಷ್ಠಿಯಿಂದ 12,000/- ರೂ ಗಳಿಂದ 42,000/- ರೂಪಾಯಿಗಳ ಸಾಲವನ್ನು ಮಂಜೂರು ಮಾಡಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿ ನಿಯಮಾವಳಿಯಂತೆ ಪಡೆದ ಸಾಲದ ಹಣವನ್ನು ಮಹಿಳಾ ಗುಂಪಿನವರು ಪ್ರತಿ ನಾಲ್ಕು ವಾರಕ್ಕೊಮ್ಮೆ 13 ಕಂತುಗಳಲ್ಲಿ ಅಥವಾ 27 ಕಂತುಗಳಲ್ಲಿ ಹಣವನ್ನು ವಾಪಸ್ ನಮ್ಮ ಸಂಸ್ಥೆಗೆ ಗ್ರಾಹಕರಿಂದ ಖುದ್ದಾಗಿ ಹಣವನ್ನು ಕೈಗೆ ಪಡೆದುಕೊಂಡು ಸದರಿ ಹಣವನ್ನು ಸಾಲದ ಖಾತೆಗೆ ತುಂಬಿಕೊಳ್ಳುತ್ತಿದ್ದು, ಅದೇ ಪ್ರಕಾರವಾಗಿ ಮೇಲ್ಕಂಡ ಆರೋಪಿತರು ಈಗ್ಗೆ ಒಂದು ವರ್ಷದಿಂದ ನಮ್ಮ ಸಂಸ್ಥೆಯಲ್ಲಿ ಹಿರಿಯ ಸಂಘ ಮಿತ್ರರರು ಅಂತಾ ಕೆಲಸ ಮಾಡಿಕೊಂಡಿದ್ದು ಇವರುಗಳು ಸಾಲ ಪಡೆದ ಮಹಿಳೆಯರಿಂದ ಸಾಲದ ಹಣವನ್ನು ಹಳ್ಳಿಗಳಿಗೆ ಹೋಗಿ ಪಡೆದುಕೊಂಡು ಬರುತ್ತಿದ್ದು ಸದರಿ ಆರೋಪಿತರು ಸನ್ 2018 ರಿಂದ ಇಲ್ಲಿಯವರೆಗೆ ಒಟ್ಟು 243 ಸದಸ್ಯರಿಂದ ತಿರುಮಲೇಶನು 9,75,719/- ರೂ ಗಳನ್ನು ಮತ್ತು ಶಶಿಕುಮಾರನು ಒಟ್ಟು 52 ಸದಸ್ಯರಿಂದ 1,67,188/- ರೂ ಹೀಗೆ ಒಟ್ಟು 11,42,907/- (ಹನ್ನಂದು ಲಕ್ಷ ನಲವತ್ತೆರಡು ಸಾವಿರದ ಒಂಬೈನೂರ ಏಳು) ರೂ ಗಳನ್ನು ಸಾಲಗಾರರಿಂದ ಪಡೆದುಕೊಂಡು ಹಣವನ್ನು ಸಂಸ್ಥೆಗೆ ತುಂಬದೇ ತಮ್ಮ ಸ್ವಂತಕ್ಕೆ ಹಣ ದುರ್ಬಳಕೆ ಮಾಡಿಕೊಂಡು ಸಂಸ್ಥೆಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ 114/2019 ಕಲಂ 408, 406, 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.