News

29
  • November

MUDGAL PS CR NO 143/2019 U/S 420 IPC

ಇಂದು ದಿನಾಂಕ:28.11.2019 ರಂದು ಸಂಜೆ 6.45 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿತನು ಪಿರ್ಯಾದಿದಾರನನ್ನು ಬೇಟಿಯಾಗಿ ತಾವುಗಳು ಗ್ರೀನ್ ಗೋಲ್ಡ ಬಯೋಟೆಕ್ ಕಂಪನಿಯಲ್ಲಿ ಮಾಲೀಕರು ಇರುತ್ತೇವೆ ಅಂತಾ ಹೇಳಿ ತಮ್ಮ ಕಂಪನಿ ಯಾದಗಿರಿ ರಾಯಚೂರ ದೇವದುರ್ಗ, ಲಿಂಗಸಗೂರು ಡಿಸ್ಟಿಕ್ ಪಾಯಿಂಟ್ ಮತ್ತು ಸ್ಟಾಕ್ ಪಾಯಿಂಟ್ ಗಳಾಗಿರುತ್ತವೆ ಅಂತಾ ಹೇಳಿ ಪಿರ್ಯಾದಿದಾರರಿಗೆ ತಮ್ಮ ಕಂಪನಿಯಲ್ಲಿ  100000/- ರೂ ಗಳನ್ನು ಕೊಟ್ಟು ಶೆಂಗಾ ಆಯಿಲ್ ಎಣ್ಣೆ ಮಶಿನ್ ಖರೀದಿಸಿದರೆ ನಾವುಗಳು ನಿಮಗೆ 50 ಕೆಜಿಯ 04 ಶೆಂಗಾದ ಬ್ಯಾಗಗಳನ್ನು ಪ್ರತಿ ತಿಂಗಳು ಎರಡು ವರ್ಷದವರೆಗೆ ಕೊಡುತ್ತೇವೆ ನಾವು ಕೊಟ್ಟ ಮಶೀನ್ ದಿಂದ ನೀವು ಎಣ್ಣೆ ತೆಗದು ಕೇಕ್ ಕೊಟ್ಟರೆ ಪ್ರತಿ ತಿಂಗಳು ಅಂದರೆ 24 ತಿಂಗಳವರೆಗೆ ಒಟ್ಟು 10000/- ರೂ ಗಳಷ್ಟು ಸಂಬಳ ಕೊಡುವುದಾಗಿ  ಹೇಳಿದ್ದರಿಂದ ಇದನ್ನು ನಂಬಿ ಪಿರ್ಯಾದಿದಾರರರು ದಿನಾಂಕ:15.12.2018 ರಂದು ಮದ್ಯಾಹ್ನ 1.00 ಗಂಟೆಗೆ ಮುದಗಲ್ ಪಟ್ಟಣದ ಯಮನೂರು ಇವರ ಆಪೀಸದಲ್ಲಿ ಆರೋಪಿತನಿಗೆ 100000/- ರೂಪಾಯಿಗಳ ನಗದು ಹಣವನ್ನು ಯಮನೂರು ಇವರ ಸಮಕ್ಷಮದಲ್ಲಿ ಕೊಟ್ಟಿದ್ದು ಇರುತ್ತದೆ. ನಂತರ ಹಣ ಪಡೆದು ಮಶಿನ್.ನ ಇನ್ವೈಸ್ ಕಾಪಿ ಬಿಲ್.ಗಳನ್ನು ಕೊಡುತ್ತೇವೆ ಅಂತಾ ಹೇಳಿ ಇನ್ವೈಸ್ ಕಾಪಿ ಬಿಲ್.ನಲ್ಲಿ ಮಿಶನನ  ನಿಜವಾದ ಬೆಲೆಯನ್ನು ತೋರಿಸಿದೆ ಇನ್ವೈಸಿನಲ್ಲಿ 90000/- ರೂ ತೋರಿಸಿದ್ದು, ಆದರೆ ಸದರಿ ಮಿಷಿನಿನ ಬೆಲೆ 15000/- ಆಗಬಹುದು. ಇದುವರೆಗೆ ಫಿರ್ಯಾದಿದಾರನು ಸದರಿ ಮಿಷಿನಿನಿಂದ ಯಾವುದೇ ರೀತಿಯ ಎಣ್ಣೆ & ಕೇಕನ್ನು ತಯಾರಿಸಿರುವುದಿಲ್ಲ. ಆರೋಪಿ ಶ್ರೀಕಾಂತ ಜಿನ್ನಾ ಸಾ: ಹೈದ್ರಾಬಾದ ಇವರು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಸೇಂಗಾ ಎಣ್ಣೆ ಆಯಿಲ್ ಮಿಷನ್ ಖರೀದಿಸಿದರೆ, ಮತ್ತು ನಮ್ಮಲ್ಲಿ ನಿಮಗೆ 50 ಕೆ.ಜಿ.ಯ 04 ಸೇಂಗಾ ಬ್ಯಾಗಗಳನ್ನು ಪ್ರತಿ ತಿಂಗಳು 02 ವರ್ಷದವರೆಗೆ ಕೊಡಲಾಗುತ್ತದೆ ಎಂದು ಹೇಳಿ ಫಿರ್ಯಾದಿಗೆ ಮೋಸ ಮಾಡಿದ್ದು ಇರುತ್ತದೆ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.