News

29
  • November

TURVIHAL PS CR NO 200/2019 U/S 468 [A] ,323,114,504,50 R/W 34 IPC & 3,4, D.P.ACT 1961

ಇಂದು ದಿನಾಂಕ: 28-11-2019 ರಂದು 5-30 ಪಿ.ಎಂ ಕ್ಕೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಗಣಕೀಕೃತ ಟೈಪ್  ಮಾಡಿದ  ಪಿರ್ಯಾದಿಯನ್ನು ಸಲ್ಲಿಸಿದ್ದುದರ ಸಾರಾಂಶವೇನೆಂದರೆ,

                  ಪಿರ್ಯಾದಿದಾರಳು ದಿನಾಂಕ: 22-05-2017 ರಂದು ಆರೋಪಿ ನಂ.1 ರವರ ಸಂಗಡ ಮದುವೆಯಾಗಿದ್ದು, ಮದುವೆ ಸಮಯದಲ್ಲಿ ಪಿರ್ಯಾದಿ ಗಂಡನ ಮನೆಯವರು ಕೇಳಿದ ಪ್ರಕಾರ  ಆರೋಪಿತನಿಗೆ ಮದುವೆ ಸಮಯದಲ್ಲಿ  ರೂ. 50 ಸಾವಿರ ಮತ್ತು 1 ತೊಲೆ ಬಂಗಾರ, ರೂ. 20 ಸಾವಿರ  ಬೆಲೆಬಾಳುವ ಗೃಹಪಯೋಗಿ ವಸ್ತುಗಳನ್ನು ಕೊಟ್ಟಿದ್ದು,  ನಂತರದಲ್ಲಿ ಆರೋಪಿ ನಂ. 01 ನೇದ್ದವನು ಆರೋಪಿ ನಂ. 02 & 03 ರವರ ಮಾತು ಕೇಳಿ  ಪಿರ್ಯಾದಿಗೆ ಅನಾವಶ್ಯಕವಾಗಿ ಸಣ್ಣ ಸಣ್ಣ ವಿಷಯಗಳಿಗೆ ಜಗಳ ಮಾಡಿ, ಆಕೆಗೆ ಇನ್ನೂ ರೂ. 50 ಸಾವಿರ ರೂಪಾಯಿಗಳನ್ನು ಮತ್ತು ಒಂದು ಮೋಟಾರ  ಸೈಕಲನ್ನು  ನಿನ್ನ ತವರು ಮನೆಯಿಂದ ತೆಗೆದುಕೊಂಡು ಬರುವಂತೆ ಹೇಳಿ ಆಕೆಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಾ ಬಂದು ದಿನಾಂಕ : 25-03-2019 ರಂದು ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬರಲಿಲ್ಲಾವೆಂದರೆ,  ನಾನು ಬೇರೆ ಮದುವೆಯಾಗುತ್ತೇನೆ ಅಂತಾ ಹೇಳಿ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರ  ಹಾಕಿದ್ದರಿಂದ  ಪಿರ್ಯಾದಿ ತನ್ನ ತವರು ಮನೆಯಾದ  ಎಲೆಕೂಡ್ಲಗಿ ಗ್ರಾಮದಲ್ಲಿ ಬಂದು ವಾಸವಿದ್ದು, ದಿನಾಂಕ : 08-07-2019 ರಂದು 10-00 ಎ.ಎಂ  ಕ್ಕೆ ಆರೋಪಿತರೆಲ್ಲರೂ ಸಮಾನ  ಉದ್ದೇಶದಿಂದ  ಪಿರ್ಯಾದಿ ತವರು ಮನೆಗೆ ಬಂದು , ಪಿರ್ಯಾದಿಗೆ ಏನಲೇ ಸೂಳೇ ವರದಕ್ಷಿಣೆ ಹಣ ತಾ ಎಂದು ಹೇಳಿ ಕಳಿಸಿದರೇ ಇಲ್ಲಿ  ಬಂದು ಮಜಾ ಮಾಡುತ್ತಿದ್ದೀಯಾ ಎಂದು ಆಕೆಯ ಕೂದಲು ಹಿಡಿದು ಎಳೆದಾಡಿ , ಆಕೆಗೆ ಹಲ್ಲೆ ಮಾಡಿದ್ದು, ಇದಕ್ಕೆ ಎ-2, ಎ-3 ರವರು ಪ್ರಚೋದನೆ ನೀಡಿದ್ದು,  ನಂತರ ನೀನು ವರದಕ್ಷಿಣೆ ಹಣ ತರದಿದ್ದರೆ ಸಾಯಿಸಿಬಿಡುವುದಾಗಿ ಜೀವ ಬೆದರಿಕೆ ಹಾಕಿ ಹೋಗಿದ್ದು,  ನಂತರ ಪುನಃ  ದಿನಾಂಕ: 18-11-2019 ರಂದು 11-00 ಎ.ಎಂ ಕ್ಕೆ ಆರೋಪಿತರೆಲ್ಲಾ ಕೂಡಿ ಎಲೆಕೂಡ್ಲಗಿ ಗ್ರಾಮಕ್ಕೆ ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬಂದು ಆಕೆಗೆ ಕೈಯಿಂದ ಹೊಡೆಬಡೆ ಮಾಡಿ,   ಲೇ ಸೂಳೇ ನಾವು ಕೇಳಿದ ವರದಕ್ಷಿಣೆ ಹಣ ತರದಿದ್ದರೆ ಸಾಯಿಸಿಬಿಡುವುದಾಗಿ ಹೇಳಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಇದೆ   ಅಂತಾ ಮುಂತಾಗಿ ಇದ್ದ ದೂರನ್ನು ಪಿರ್ಯಾದಿಯು  ಇಂದು  ತಡವಾಗಿ ಠಾಣೆಗೆ ಬಂದು  ಸಲ್ಲಿಸಿದ  ದೂರಿನ ಸಾರಾಂಶದ ಮೇಲಿಂದ ಮೇಲಿನಂತೆ ಪಿರ್ಯಾದಿಗೆ ಪ್ರ.ವ ವರದಿ ಜಾರಿ ಮಾಡಿದ್ದು ಇದೆ.