News

08
  • January

RAICHUR RURAL PS CR.NO.05/2020 U/S 279, 338, 304(A) IPC & R/W 180 I.M.V. Act.

ದಿನಾಂಕ: 30.12.2019  ರಂದು ಆರೋಪಿ ನಂ: 2 ಈತನು ಆರೋಪಿ ನಂ: 1 ಈತನಲ್ಲಿ ಯಾವುದೇ ಟ್ರಾಕ್ಟರ್ ಡ್ರೈವಿಂಗ್ ಲೈಸನ್ಸ ಇಲ್ಲದಾಗ್ಯೂ ಆತನಿಗೆ ತನ್ನ ಸ್ವರಾಜ 744FE ಟ್ರಾಕ್ಟರ ಟಿ.ಪಿ. ನಂ: KA2020-T/R-7004A ಅದರ ಇಂಜನ್ ನಂ: DC3008/SAP29006 ಹಾಗೂ ಚೆಸ್ಸಿ ನಂ: MBNAX49ABKCP44590 ನೇದ್ದನ್ನು ಮಾನ್ವಿಗೆ ಹೋಗಿ ಟ್ರಾಕ್ಟರಿಗೆ ಟಾಪ್ ಕಟ್ಟಿಸಿಕೊಂಡು ಬರಲು ಚಲಾಯಿಸಲು ಕೊಟ್ಟಿದ್ದು, ಹಾಗೂ ಆರೋಪಿ ನಂ: 1 ಈತನು ಆರೋಪಿ ನಂ: 2 ಈತನ ಮೇಲ್ಕಂಡ ಟ್ರಾಕ್ಟರನ್ನು ದಿನಾಂಕ: 30.12.2019 ರಂದು ರಾತ್ರಿ 11.00 ಗಂಟೆಗೆ ಯರಮರಸ್ ಕಡೆಯಿಂದಾ ಶಾಖವಾದಿ ಕಡೆಗೆ ಅತೀವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ಅಮರಾವತಿ ಕ್ರಾಸಿನ ಹತ್ತಿರ ಬಿದ್ದಿದ್ದು ಆತನಿಗೆ ಬಲಗೈ ಕೈ ಮುರಿದಿದ್ದು, ಕುತ್ತಿಗೆಯ ಹಿಂಬದಿಯಲ್ಲಿ ಒಳಪೆಟ್ಟಾಗಿ, ಬಲಾಗಲ ಹೆಬ್ಬೆರಳಿಗೆ ತರಚಿದ ಗಾಯ, ಎಡಹಣೆಗೆ ತರಚಿದ ಗಾಯವಾಗಿದ್ದು, ನಂತರ ಆರೋಪಿ ನಂ: 2 ಈತನು ಆರೋಪಿ ನಂ: 1 ಈತನಿಗೆ ನೀನು ಮೊಟಾರ ಸೈಕಲ್ ಚಲಾಯಿಸಿಕೊಂಡು ಬರುವಾಗ ಸ್ಕಿಡ್ ಆಗಿ ಬಿದ್ದಿದ್ದೇನೆಂದು ಹೇಳು ನಾನು ನಿನಗೆ ಆಸ್ಪತ್ರೆ ಖರ್ಚು ನೋಡಿಕೊಳ್ಳುತ್ತೇನೆ ರೀತಿ ಪೊಲೀಸರಲ್ಲಿ ತಿಳಿಸುವಂತೆ ಹೇಳಿ, ಬಾಲಂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಖರ್ಚು ಎಂದು 30,000/- ರೂ.ಗಳನ್ನು ಕೊಟ್ಟಿದ್ದು, -2 ಈತನು ಪುನಃ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಸಾಗಿಸಲು ತನ್ನಿಂದ ಹಣ ನೀಡಲು ಆಗುವದಿಲ್ಲವೆಂದು ನಿರಾಕರಿಸಿದ್ದಾಗಿ ಹಾಗೂ ಘಟನೆಯಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ತನ್ನಣ್ಣ ಹುಲಿಗೆಪ್ಪ ಈತನು ಇಲಾಜು ಫಲಕಾರಿಯಾಗದೇ ಇಂದು ದಿನಾಂಕ: 07.01.2020 ರಂದು ಸಂಜೆ ಸಂಜೆ 4.30 ಗಂಟೆಗೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾಗಿ ತಮ್ಮ ದೊಡ್ಡಮ್ಮ ರಿಂದ ವಿಷಯ ತಿಳಿದು ಈಗ ತಡವಾಗಿ ಬಂದು ದೂರು ನೀಡಿದ್ದಾಗಿ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದು ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.