News

06
  • April

SINDHANOOR RURAL PS CRNO 53/2020 U/S 279,304 [A ] IPC

ದಿನಾಂಕ:05-04-2020 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಫಿರ್ಯಾದಿದಾರಳ ಮಗನಾದ ಆರೋಪಿ ರಮೇಶನು ಹೆರಿಗೆಯಾಗಿ ಧಡೇಸ್ಗೂರುದಲ್ಲಿ ತವರುಮನೆಯಲ್ಲಿ ಇರುವ ತನ್ನ ಹೆಂಡತಿಯನ್ನು ಮಾತಾಡಿಸಲೆಂದು ಮೋಟರ್ ಸೈಕಲ್ ನಂ.ಕೆಎ-36/ಇಕ್ಯೂ-0011 ನೇದ್ದನ್ನು ನಡೆಸಿಕೊಂಡು ಸಿಂಧನೂರುದಿಂದ ಧಡೇಸ್ಗೂರಿಗೆ ಸಿಂಧನೂರು-ಸಿರುಗುಪ್ಪಾ ರಸ್ತೆಯಲ್ಲಿ ಹೊರಟು ಬೂದಿವಾಳ ಕ್ರಾಸ್ ಹತ್ತಿರ ಹೋಗುವಾಗ ಸದರಿ ರಮೇಶನು ಮೋಟರ್ ಸೈಕಲನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರೋಡ್ ಹಂಪ್ ಹತ್ತಿರ ಮೋಟರ್ ಸೈಕಲ್ ನಿಯಂತ್ರಣ ಮಾಡಲಾಗದೇ ಮೋಟರ್ ಸೈಕಲ್ ಸ್ಕಿಡ್ ಆಗಿ ಬಿದ್ದು ಬಲಗಡೆ ಮಲಕಿಗೆ, ಬಲಗಡೆ ಕಪಾಳಕ್ಕೆ ಭಾರಿ ರಕ್ತಗಾಯಗಳಾಗಿ ಬಾಯಿಯಲ್ಲಿನ ಹಲ್ಲು ಉದುರಿ ರಕ್ತಸ್ರಾವವಾಗಿ ಮತ್ತು ಎರಡು ಮುಂಗೈಗಳಿಗೆ ತರಚಿದ ಗಾಯಗಳಾಗಿ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿ ಇಲಾಜು ಕಾಲಕ್ಕೆ ಚೇತರಿಸಿಕೊಳ್ಳದೇ ಸದರಿ ರಮೇಶನು ದಿನಾಂಕ: 06-04-2020 ರಂದು ನಸುಕಿನ 04-00 ಎ.ಎಮ್ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ ಎಂದು ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ.53/2020, ಕಲಂ.279, 304(ಎ) ಐಪಿಸಿ ರೀತ್ಯ ದಾಖಲಿಸಿಕೊಂಡಿರುತ್ತೇನೆ.