News

06
  • April

SINDHANOOR RURAL PS CR NO 54/2020 U/S 279,304 [A] IPC

ಇಂದು ದಿ.06-04-2020 AT 2-PM ಕ್ಕೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಪಿರ್ಯಾದನ್ನು ತಂದು ಹಾಜರಪಡಿಸಿದ್ದು. ಸಾರಾಂಶವೇನೆಂದರೆ, ದಿ.03-04-2020 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಮೃತ ತನ್ನ ಗಂಡ ತೇಜನ್ ಚಕ್ರವರ್ತಿ ಈತನು TVS XL-SUPER HEAVY DUTY MOTER CYCLE No. KA-36-R-9573 ನೇದ್ದನ್ನು ತೆಗೆದುಕೊಂಡು ನಮ್ಮ ಕ್ಯಾಂಪಿನಿಂದ ಆರ್.ಹೆಚ್. ಕ್ಯಾಂಪ್ ನಂ.5 ಕ್ಕೆ ದುರ್ಗಾದೇವಿ ದೇವಸ್ಥಾನದ ಪೂಜಾ ಕಾರ್ಯಕ್ಕೆ ಹೋಗುತ್ತಿರುವಾಗ ಆರ್.ಹೆಚ್. ಕ್ಯಾಂಪ್ ನಂ.5 ರ ಹತ್ತಿರ ತಿರುವಿನಲ್ಲಿ ಜೋರಾಗಿ ನಡೆಸಿಕೊಂಡು ಹೋಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದರಿಂದ ತಲೆಯ ಬಲಭಾಗಕ್ಕೆ, ಬಲ ಮುಂಗೈಗೆ, ಬಲಕಾಲಿನ ಪಾದಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಅಲ್ಲಿಂದ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ತಲೆಗೆ ಪೆಟ್ಟಾದ ಬಗ್ಗೆ ಸ್ಕ್ಯಾನ್ ಮಾಡಲು ಅನಾನುಕೂಲ ಆಗಿದ್ದಕ್ಕೆ ವೈದ್ಯರ ಸಲಹೆಯಂತೆ ಅದೆ ದಿನ ರಾತ್ರಿ ರಾಯಚೂರಿನಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕ ಮಾಡಿದ್ದಾಗ ತನಗಾದ ಗಾಯಗಳಿಂದ ಗುಣಮುಖನಾಗದೆ ಇಂದು ದಿ.06-04-2020 ರಂದು ಬೆಳಿಗ್ಗೆ 11-30 ಗಂಟೆಗೆ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದ ಮೇಲಿಂದ ಠಾಣಾ ಗುನ್ನೆ ನಂ.54/2020. ಕಲಂ. 279, 304(A) IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.