News

02
  • June

SINDHANOOR TOWN PS CR.NO. 45/2020 U/S 78(3) KP ACT.

ದಿನಾಂಕ 01.06.2020 ರಂದು 11-45 .ಎಮ್ ಸಮಯದಲ್ಲಿ ಸಿಂಧನೂರು ನಗರದ ಎ.ಪಿ.ಎಮ್.ಸಿ 01 ನೇ ಗೇಟ್ ಎದುರುಗಡೆ ಸಾರ್ವಜನಿಕ ಶೌಚಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ 2700/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿ ಮತ್ತು ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಠಾಣಾ ಗುನ್ನೆ ನಂ: 45/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿರುತ್ತೇನೆ