News

02
  • June

SINDHANOOR RURAL PS CR NO 74/2020 U/S 498(A),504,323,341,324,506,109 R/W 34 IPC

ಇಂದು ದಿ.01-06-2020 At 7-30 PM ಕ್ಕೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ,ತನ್ನ ತವರು ಮನೆಯು ಆರ.ಹೆಚ್.ಕ್ಯಾಂಪ್ ನಂ.4 ಇದ್ದು, ತನ್ನನ್ನು 7-ವರ್ಷಗಳ ಹಿಂದೆ ಆರ್.ಹೆಚ್.ಕ್ಯಾಂಪ್ ನಂ.2 ನಿವಾಸಿಯಾದ .ನಂ.1.ಈತನಿಗೆ ಕೊಟ್ಟು ಮದುವೆ ಮಾಡಿದ್ದು, ತಮಗೆ 6-ವರ್ಷದ ಒಬ್ಬ ಗಂಡು ಮಗನಿರುತ್ತಾನೆ. ತನಗೆ ಮದುವೆಯಾದ ನಂತರ ತನ್ನ ಗಂಡನ ಮನೆಯಲ್ಲಿ ಗಂಡ, ಅತ್ತೆ,ಮಾವನವರು ಚೆನ್ನಾಗಿ ನೋಡಿಕೊಂಡಿದ್ದು, ನಂತರ ದಿನಗಳಲ್ಲಿ ತನ್ನ ಗಂಡನು ಕುಡಿಯುವ ಚಟ ಕಲಿತುಕೊಂಡು ತನ್ನ ಶೀಲದ ಮೇಲೆ ಸಂಶಯಪಡುತ್ತ ಸೂಳೆ, ಚಿನಾಲಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತ, ಮೂರು ಜನರು ದಿನಾಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತ ಬಂದಿರುತ್ತಾರೆ.ದಿ.28-05-2020 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ತಾನು ಗಂಡನ ಮನೆಯಲ್ಲಿರುವಾಗ ತನ್ನ ಗಂಡ, ಅತ್ತೆ, ಮಾವನವರು ತನ್ನೊಂದಿಗೆ ಜಗಳ ಮಾಡಿ ತನ್ನ ಗಂಡನು ಬೆನ್ನಿಗೆ, ಮುಖಕ್ಕೆ ಕೈಗಳಿಂದ ಹೊಡೆದು.ಕಾದ ಕಬ್ಬಿಣದ ರಾಡಿನಿಂದ ಎರಡೂ ಮೊಣಕೈ ಕೆಳಭಾಗದಲ್ಲಿ ಮತ್ತು ಎರಡೂ ಕಾಲುಗಳ ಕೆಳಭಾಗದಲ್ಲಿ ಬರೆ ಎಳೆದಿದ್ದರಿಂದ ಸುಟ್ಟ ಕಂದಿದ ಗಾಯಗಳಾಗಿರುತ್ತವೆ. ತನ್ನ ಗಂಡನಿಗೆ ಅತ್ತೆ, ಮಾವ ಕೂಡಿ ಸೂಳೆಯನ್ನು ಏನು  ಕೇಳುವುದು ಒದ್ದು ಸಾಯಿಸಿ ಬಿಡು ಇಲ್ಲಾ ತವರು  ಮನೆಗೆ  ಓಡಿಸಿ  ಬಿಡು  ಎಂದು ಜೀವದ   ಬೆದರಿಕೆ   ಹಾಕಿ   ಹಾಕಿರುತ್ತಾರೆ. ನಂತರ ತಾನು ತವರು ಮನೆಗೆ ಹೋಗಿದ್ದು,ತವರು ಮನೆಯಲ್ಲಿ ಸಂಸಾರ ಇದೆ ಗಂಡನ ಮನೆಯವರನ್ನು ಕರೆಯಿಸಿಕೊಂಡು ಸರಿಪಡಿಸೋಣ ಅಂತಾ ತಿಳಿಸಿದ್ದರಿಂದ ಸರಿಯಾಗದ ಕಾರಣ ದಿನ ತಡವಾಗಿ ಬಂದು ದೂರು ಕೊಟ್ಟಿರುವೆನು ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.